
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಮೇ.04): ಲಾಕ್‌ಡೌನ್‌ನಿಂದ ಆಹಾರ ದೊರೆಯದೆ ಪರದಾಡುತ್ತಿರುವ ನಗರದ ಬೀದಿ ನಾಯಿಗಳಿಗೆ ಕೊನೆಗೂ ಸಿಗಲಿಲ್ಲ ಒಂದೇ ಒಂದು ಹನಿ ಹಾಲು!
ಬಿಬಿಎಂಪಿ ಪಶು ಪಾಲನಾ ವಿಭಾಗದ ಅಧಿಕಾರಿಗಳು ಸುಮಾರು 25 ಸಾವಿರ ಬೀದಿ ನಾಯಿಗಳಿಗೆ ನೀಡಲು ಕೆಎಂಎಫ್‌ನಿಂದ ಹಾಲು ಪೂರೈಕೆ ಮಾಡಿಸುವಂತೆ ಮನವಿ ಮಾಡಿದ್ದರು. ಆದರಂತೆ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಕೆಎಂಎಫ್ ನಿರ್ದೇಶಕರಿಗೆ ಪತ್ರ ಬರೆದು ನಿತ್ಯ 5 ಸಾವಿರ ಲೀಟರ್ ಹಾಲು ನೀಡುವಂತೆ ಕೋರಿದ್ದರು. ಕೆಎಂಎಫ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅನುಮತಿ ಪಡೆಯುವುದಾಗಿ ಹೇಳಿತ್ತು.
ಈ ನಡುವೆ ರಾಜ್ಯ ಪಶುಸಂಗೋಪನೆ ಇಲಾಖೆಯ ಆಯುಕ್ತರು ಬಿಬಿಎಂಪಿಗೆ ಪತ್ರ ಬರೆದು ಕೆಎಂಎಫ್ ಪೂರೈಕೆ ಹಾಲಿನಲ್ಲಿ ಪ್ರತಿ ವಾರ್ಡ್‌ಗೆ 10 ಲೀಟರ್ ಬೀದಿ ನಾಯಿಗಳಿಗೆ ನೀಡುವಂತೆ ಕೋರಿದ್ದರು. ಬಿಬಿಎಂಪಿ ಬೀದಿ ನಾಯಿಗಳಿಗೆ ಹಾಲು ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ, ಏ.30ಕ್ಕೆ ಕೆಎಂಎಫ್ ಹಾಲು ನಿಲ್ಲಿಸಿತು. ಇದರಿಂದ ನಗರದ ಬೀದಿ ನಾಯಿಗಳಿಗೆ ಕ್ಷೀರ ಭಾಗ್ಯ ದೊರೆಯಲೇ ಇಲ್ಲ.
ಜನರ ಬೇಜವಾಬ್ದಾರಿ, ಪೌರಕಾರ್ಮಿಕರಿಗೆ ಸೋಂಕಿನ ಭೀತಿ!
ಕೇಂದ್ರ ಸರ್ಕಾರ ಲಾಕ್‌ಡೌನನ್ನು ಮೇ 17ರವರೆಗೆ ವಿಸ್ತರಿಸಿದ್ದು, ಕೆಎಂಎಫ್ ಉಚಿತವಾಗಿ ಹಾಲು ನೀಡಿದರೆ ಬೀದಿ ನಾಯಿಗಳಿಗೆ ನೀಡಲಾಗುವುದು ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಬೀದಿನಾಯಿಗೆ ದಿನ 5.60 ವೆಚ್ಚ:
ಇನ್ನು ಆಹಾರದ ಸಮಸ್ಯೆ ಎದುರಿಸುತ್ತಿರುವ ಬೀದಿ ನಾಯಿಗಳಿಗೆ ಆಹಾರ ವಿತರಣೆಗೆ ಬಿಬಿಎಂಪಿ ಆಯುಕ್ತರು 8 ವಲಯಗಳಿಗೆ ಒಟ್ಟು 15 ಲಕ್ಷ ಬಿಡುಗಡೆ ಮಾಡಿದ್ದು, ನಾಯಿಗೆ ದಿನಕ್ಕೆ .5.60 ನಂತೆ ಆಹಾರಕ್ಕೆ ವೆಚ್ಚ ಮಾಡುವಂತೆ ಸೂಚನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ