ಬಿಬಿಎಂಪಿಯ ಗುಣ ನಿಯಂತ್ರಣ ಲ್ಯಾಬ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಒಂಭತ್ತು ಮಂದಿ ಸುಟ್ಟು ಗಾಯಗೊಂಡರೂ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಪಾಲಿಕೆ ಕಚೇರಿಗಳಲ್ಲಿ ಇರುವ ಕೊಠಡಿಗಳಲ್ಲಿ ಅಗ್ನಿ ಅವಘಡದ ಸುರಕ್ಷತೆ ಕ್ರಮ ಇದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲು ಮುಂದಾಗಿಲ್ಲ
ಬೆಂಗಳೂರು (ಆ.15) : ಬಿಬಿಎಂಪಿಯ ಗುಣ ನಿಯಂತ್ರಣ ಲ್ಯಾಬ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಒಂಭತ್ತು ಮಂದಿ ಸುಟ್ಟು ಗಾಯಗೊಂಡರೂ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಪಾಲಿಕೆ ಕಚೇರಿಗಳಲ್ಲಿ ಇರುವ ಕೊಠಡಿಗಳಲ್ಲಿ ಅಗ್ನಿ ಅವಘಡದ ಸುರಕ್ಷತೆ ಕ್ರಮ ಇದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲು ಮುಂದಾಗಿಲ್ಲ.
ಕೌನ್ಸಿಲ್ ಕಟ್ಟಡದಲ್ಲಿ ರಾಶಿ ಕಸ:
ಬಿಬಿಎಂಪಿ(BBMP)ಯ ಕೆಂಪೇಗೌಡ ಪೌರಸಭಾಂಗಣವನ್ನು ನವೀಕರಣ ಮಾಡಲಾಗುತ್ತಿದೆ. ಹೀಗಾಗಿ, ಸಭಾಂಗಣದಲ್ಲಿನ ಹಳೆಯ ಮರದ ಕುರ್ಚಿ, ಟೇಬಲ್ ಸೇರಿದಂತೆ ಇನ್ನಿತರೆ ಮರ ತ್ಯಾಜ್ಯವನ್ನು ಶೇಖರಿಸಿ ಇರಿಸಲಾಗಿದೆ. ಅವಘಡ ಸಂಭವಿಸಿದರೆ ಭಾರೀ ಅನಾಹುತ ಆಗಲಿದೆ ಎಂದು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.
Breaking: ಬಿಬಿಎಂಪಿ ಮುಖ್ಯ ಕಚೇರಿ ಆವರಣದದಲ್ಲಿ ಬೆಂಕಿ, 10 ಮಂದಿಗೆ ಸುಟ್ಟ ಗಾಯ
2018ರಲ್ಲಿ ಈ ಕಟ್ಟಡಕ್ಕೆ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳುವುದಕ್ಕೆ ಟೆಂಡರ್ ಆಹ್ವಾನಿಸಿತ್ತು. ದರ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಆ ಬಳಿಕ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ.
ಲ್ಯಾಬ್‌ನಲ್ಲಿನ ಲೋಪಗಳ ವರದಿ ಮಾಡಿದ್ದ ಅಧಿಕಾರಿ
ಬೆಂಕಿ ಅವಘಡ ಸಂಭವಿಸಿದ ಬಿಬಿಎಂಪಿ(BBMP Fire accident)ಯ ಗುಣ ನಿಯಂತ್ರಣ ಲ್ಯಾಬ್‌ನಲ್ಲಿ ಲೋಪಗಳು ಮತ್ತು ಅಗತ್ಯತೆ ಬಗ್ಗೆ ಒಂದು ವರ್ಷದ ಹಿಂದೆ 2022ರ ಆಗಸ್ಟ್ 10ರಂದೇ ಗುಣ ನಿಯಂತ್ರಣ ವಿಭಾಗದ ಅಂದಿನ ಅಧೀಕ್ಷಕ ಎಂಜಿನಿಯರ್ ಡಾ ಬಿ.ಜಿ.ರಾಘವೇಂದ್ರ ಪ್ರಸಾದ್ ಮೇಲಾಧಿಕಾರಿಗಳಿಗೆ ಟಿಪ್ಪಣಿ ಬರೆದು ಎಚ್ಚರಿಕೆ ನೀಡಿದ್ದರು.
ಬಿಬಿಎಂಪಿ: ಮುಂದುವರಿದ ರಾಜ್ಯ ಗುತ್ತಿಗೆದಾರರ ಕಮಿಷನ್ ಗದ್ದಲ
ಗುಣ ನಿಯಂತ್ರಣ ಲ್ಯಾಬ್‌ನ ಅಗತ್ಯಗಳು ಏನು, ಏನೆಲ್ಲಾ ಸೌಲಭ್ಯಗಳು ಇರಬೇಕು. ಸುರಕ್ಷತಾ ಕ್ರಮಗಳು ಏನು. ಲ್ಯಾಬ್‌ಗೆ ಪರೀಕ್ಷೆ ನಡೆಸಲು ತರಬೇತಿ ಹೊಂದಿರುವ ತಜ್ಞರು ಬೇಕು. ಅಧಿಕಾರಿ ಸಿಬ್ಬಂದಿಯ ಕಚೇರಿಗೆ ಸ್ಥಳಾವಕಾಶ ಬೇಕು ಎಂದು ತಿಳಿಸಿದ್ದರು. ಆದರೆ ಅವರ ಟಿಪ್ಪಣಿಯನ್ನು ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರಿಂದ ಈ ಅವಘಡಕ್ಕೆ ಕಾರಣವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.