ಏಪ್ರಿಲ್‌ನಲ್ಲಿ ಬಿಬಿಎಂಪಿಗೆ ₹1,417 ಕೋಟಿ ಆಸ್ತಿ ತೆರಿಗೆ ಸಂಗ್ರಹ!

Published : May 04, 2025, 06:43 AM ISTUpdated : May 04, 2025, 07:02 AM IST
ಏಪ್ರಿಲ್‌ನಲ್ಲಿ ಬಿಬಿಎಂಪಿಗೆ  ₹1,417 ಕೋಟಿ ಆಸ್ತಿ ತೆರಿಗೆ ಸಂಗ್ರಹ!

ಸಾರಾಂಶ

ಬಿಬಿಎಂಪಿಯು 2025-26ನೇ ಸಾಲಿನ ಆರ್ಥಿಕ ವರ್ಷದ ಮೊದಲ ಒಂದೇ ಒಂದು ತಿಂಗಳಿನಲ್ಲಿ ಬರೋಬ್ಬರಿ ₹1,417 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ನಗರದಲ್ಲಿ ಸುಮಾರು 22 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಈ ಪೈಕಿ ಸುಮಾರು 8 ಲಕ್ಷ ಆಸ್ತಿ ಮಾಲೀಕರು ಏಪ್ರಿಲ್‌ನಲ್ಲಿಯೇ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇದರಿಂದ ಆಸ್ತಿ ತೆರಿಗೆ ಸಂಗ್ರಹ ಮೊತ್ತ ₹1,417 ಕೋಟಿಗೆ ಏರಿಕೆಯಾಗಿದೆ.

 ಬೆಂಗಳೂರು (ಮೇ.4): ಬಿಬಿಎಂಪಿಯು 2025-26ನೇ ಸಾಲಿನ ಆರ್ಥಿಕ ವರ್ಷದ ಮೊದಲ ಒಂದೇ ಒಂದು ತಿಂಗಳಿನಲ್ಲಿ ಬರೋಬ್ಬರಿ ₹1,417 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ.
ನಗರದಲ್ಲಿ ಸುಮಾರು 22 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಈ ಪೈಕಿ ಸುಮಾರು 8 ಲಕ್ಷ ಆಸ್ತಿ ಮಾಲೀಕರು ಏಪ್ರಿಲ್‌ನಲ್ಲಿಯೇ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇದರಿಂದ ಆಸ್ತಿ ತೆರಿಗೆ ಸಂಗ್ರಹ ಮೊತ್ತ ₹1,417 ಕೋಟಿಗೆ ಏರಿಕೆಯಾಗಿದೆ.

2025-26ನೇ ಸಾಲಿನಲ್ಲಿ ಒಟ್ಟು ₹5,716 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದು, ಏಪ್ರಿಲ್‌ ಒಂದೇ ತಿಂಗಳಿನಲ್ಲಿ ₹1,417 ಕೋಟಿ ಸಂಗ್ರಹಿಸಿದೆ. ಶೇ.25ರಷ್ಟು ಗುರಿ ಸಾಧನೆ ಮಾಡಿದ್ದು, ಮುಂದಿನ 11 ತಿಂಗಳಿನಲ್ಲಿ ಇನ್ನೂಳಿದ ₹4,299 ಕೋಟಿ ಸಂಗ್ರಹಿಸಬೇಕಾಗಿದೆ.

ಕಳೆದ ವರ್ಷ ಆಸ್ತಿ ಬಾಕಿ ಉಳಿಸಿಕೊಂಡವರಿಗೆ ಬಡ್ಡಿ ಹಾಗೂ ದಂಡ ಮನ್ನಾಗೊಳಿಸುವ ಒನ್-ಟೈಮ್ ಸೆಟ್ಲ್‌ಮೆಂಟ್ ಯೋಜನೆ ಜಾರಿ ಮಾಡಲಾಗಿತ್ತು. ಆದರೂ ಏಪ್ರಿಲ್‌ ಅಂತ್ಯಕ್ಕೆ ಕೇವಲ ₹670 ಕೋಟಿ ಸಂಗ್ರಹವಾಗಿತ್ತು. ಈ ಬಾರಿ ಆಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ಶುಲ್ಕ ಸಂಗ್ರಹ ಮಾಡುತ್ತಿರುವುದು ₹1 ಸಾವಿರ ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸೌಲಭ್ಯಗಳೇ ಇಲ್ಲದ ಪಿಜಿಗಳಿಗೆ ಬೀಗ ಜಡಿಯಲು ಮುಂದಾದ ಬಿಬಿಎಂಪಿ!

ಜೂನ್‌ನಿಂದ ಬಾಕಿ ವಸೂಲಿಗೆ ಕ್ರಮ
ರಾಜ್ಯ ಸರ್ಕಾರವು ಆಸ್ತಿ ತೆರಿಗೆಯ ಮೇಲೆ ನೀಡುವ ಶೇ.5 ರಷ್ಟು ರಿಯಾಯಿತಿ ಅವಧಿಯನ್ನು ಮೇ ಅಂತ್ಯದ ವರೆಗೆ ವಿಸ್ತರಣೆ ಮಾಡಲಾಗಿದೆ. ಹೀಗಾಗಿ, ಮೇ ಅಂತ್ಯದ ವರೆಗೆ ಸಂಗ್ರಹಿಸುವ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತಡವಿಲ್ಲದ ಕ್ರಮ ಕೈಗೊಳ್ಳಲಾಗುವುದು. ಜೂನ್‌ನಿಂದ ಆಸ್ತಿ ತೆರಿಗೆ ಬಾಕಿದಾರರ ಪಟ್ಟಿಯನ್ನು ಸಿದ್ದಪಡಿಸಿಕೊಂಡು ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು. ಆಗ ಆಸ್ತಿ ಸೀಜ್‌ ಮಾಡುವುದು. ಹರಾಜು ಹಾಕುವುದು ಸೇರಿದಂತೆ ಮೊದಲಾದ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಒಟಿಎಸ್‌ ಸೌಲಭ್ಯ ನೀಡಿದರೂ ನಗರದಲ್ಲಿ 3.75 ಲಕ್ಷ ಆಸ್ತಿ ಮಾಲೀಕರು ₹836 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

SSLC ತೃತೀಯ ಭಾಷೆ ಗ್ರೇಡಿಂಗ್ ನೀತಿ ಬಗ್ಗೆ ಮರುಪರಿಶೀಲಿಸಿ: ಸಿಎಸ್‌ ಶಾಲಿನಿಗೆ ಗೌರ್‍ನರ್‌ ಪತ್ರ!
'ವಾಪಸ್ ಮನೆಗೆ ಹೋಗೋಕೂ ಆಗ್ತಿಲ್ಲ..' ಗ್ಯಾಸ್‌ ಸಿಗದೆ ನಿಂತಲ್ಲೇ ನಿಂತ ಆಟೋಗಳು; ಬಂಕ್‌ ಮುಂದೆ 3ನೇ ದಿನವೂ ಕಿ.ಮೀ.ಗಟ್ಟಲೆ ಕ್ಯೂ!