
ಕೊಪ್ಪಳ (ಸೆ.18): ರಾಜ್ಯ ಹಿಂದುಳಿದ ಆಯೋಗದಿಂದ ಸೆ.22ರಿಂದ ನಡೆಯುವ ಸಮೀಕ್ಷೆ ವೇಳೆ ನಾನು ಯಾವುದೇ ಧರ್ಮದ ಹೆಸರು ಬರೆಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ನಾನು ಶರಣ ತತ್ವ ಅನುಸರಿಸುತ್ತೇನೆ: ರಾಯರಡ್ಡಿ:
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶರಣ ತತ್ವ ಅನುಸರಿಸುತ್ತೇನೆ. ವೀರಶೈವ ಲಿಂಗಾಯತ ಮಹಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರು ಧರ್ಮದ ಕಾಲಂನಲ್ಲಿ ಇತರರು ಎಂದು ಬರೆಸುವಂತೆ ಹೇಳಿದ ಮೇಲೆ ಮುಗಿಯಿತಲ್ಲ. ಹೀಗಾಗಿ ನಾನು ಯಾವುದೇ ಧರ್ಮದ ಹೆಸರು ಬರೆಸುವುದಿಲ್ಲ ಎಂದರು.
ಲಿಂಗಾಯತ ಜಾತಿಯೂ ಅಲ್ಲ, ಧರ್ಮವೂ ಅಲ್ಲ ಎಂದ ರಾಯರಡ್ಡಿ:
ಜಾತಿ ಕಾಲಂನಲ್ಲಿ ಏನು ಬರೆಸುತ್ತೀರಿ ಎಂಬ ಪ್ರಶ್ನೆಗೆ, ನಾನು ಬಸವಣ್ಣನವರ ಲಿಂಗಾಯತ ತತ್ವ ಅನುಸರಿಸುತ್ತೇನೆ. ಲಿಂಗಾಯತ ಎನ್ನುವುದು ಜಾತಿಯೂ ಅಲ್ಲ, ಧರ್ಮವೂ ಅಲ್ಲ, ಅದೊಂದು ಶರಣ ಚಳವಳಿ, ಹಿಂದೂ ಕೂಡಾ ಸಂಸ್ಕೃತಿ ಎಂದರು.
ಮತಾಂತರಗೊಂಡವರು ವಾಪಸ್ ಬರುವಂತಿಲ್ಲ:
ಸಮೀಕ್ಷೆಯಲ್ಲಿ ಯಾರು ಏನೇ ಬರೆಸಿದರೂ ಅದು ಸಿಗುವುದಿಲ್ಲ. ಅದನ್ನು ನಂತರ ಪರಿಶೀಲಿಸಿಯೇ ಕೊಡುತ್ತಾರೆ. ಈ ಸಮೀಕ್ಷೆ ಮಾಡುತ್ತಿರುವುದು ಕೇವಲ ಮಾಹಿತಿಗಾಗಿ. ಸಾಮಾಜಿಕ, ಶೈಕ್ಷಣಿಕವಾಗಿ ಎಷ್ಟು ಜನ ಓದಿದ್ದಾರೆ, ಓದಿಲ್ಲ, ಅವರ ಸ್ಥಿತಿಗತಿ ಏನು ಎನ್ನುವುದನ್ನು ಅಧ್ಯಯನ ಮಾಡಲಾಗುತ್ತದೆ ಅಷ್ಟೇ ಎಂದರು. ಒಂದು ಬಾರಿ ಮತಾಂತರವಾದ ಮೇಲೆ ಅವರು ಮತಾಂತರಗೊಂಡ ಧರ್ಮದಲ್ಲಿಯೇ ಇರಬೇಕು. ಅವರು ಮತ್ತೆ ಮೊದಲಿನ ಧರ್ಮದಲ್ಲಿರಲು ಬರುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ