ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ IAS ಅಧಿಕಾರಿಗಳ ವರ್ಗಾವಣೆ

By Suvarna News  |  First Published Oct 11, 2021, 10:47 PM IST

*  28 ಐಎಎಸ್ ಅಧಿಕಾರಿಗಳ ಅಧಿಕಾರಿಗಳ ವರ್ಗಾವಣೆ
* ಬೊಮ್ಮಾಯಿ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಐಎಎಸ್ ಅಧಿಕಾರಿಗಳ ವರ್ಗ
* ಜೊತೆಗೆ ಸಚಿವಾಲಯದ 9 ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ


ಬೆಂಗಳೂರು, (ಅ.11): ಸಿಎಂ ಬೊಮ್ಮಾಯಿ ಸರ್ಕಾರ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಬರೋಬ್ಬರಿ 28 ಐಎಎಸ್ (AS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಬಸವರಾಜ ಬೊಮ್ಮಾಯಿ (Basavaraj Bommai) ಸಿಎಂ ಆದ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಮೊದಲ ಬಾರಿಗೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ (Transfer) ಮಾಡಲಾಗಿದೆ. ಇನ್ನು ಮತ್ತೊಂದೆಡೆ ಸಚಿವಾಲಯದ 9 ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಿ ಇಂದು (ಅ.11) ಆದೇಶ ಹೊರಡಿಸಲಾಗಿದೆ. 

Tap to resize

Latest Videos

undefined

4 ಉಪ ಕಾರ್ಯದರ್ಶಿಗಳಿಗೆ ಸ್ಥಳ ನಿಯೋಜಿಸಿ ಆದೇಶ ನೀಡಿದ್ದು 3 ಕೆಎಎಸ್ ಅಧಿಕಾರಿಗಳನ್ನ (KAS Officers) ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಉಪ ಕಾರ್ಯದರ್ಶಿಗಳಿಬ್ಬರ ಸೇವೆ ಹಿಂಪಡೆದು ಡಿಪಿಎಆರ್‌ಗೆ ವರದಿ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ.

28 ಐಎಎಸ್ ಅಧಿಕಾರಿಗಳ ವರ್ಗಾವಣೆ
 ಅನಿಲ್ ಕುಮಾರ್-ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಬೆಂ.
ಕಪಿಲ್ ಮೋಹನ್-ಎಸಿಎಸ್, ಆಹಾರ ಇಲಾಖೆ
ಉಮಾ ಶಂಕರ್-ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ
ಸೆಲ್ವ ಕುಮಾರ್-ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ ಇಲಾಖೆ
 ನವೀನ್ ರಾಜ್ ಸಿಂಗ್-ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ
ಜೆ.ರವಿಶಂಕರ್-ಕಾರ್ಯದರ್ಶಿ, ವಸತಿ ಇಲಾಖೆ, ಬೆಂಗಳೂರು
ಡಾ.ರಂದೀಪ್-ಆಯುಕ್ತರು, ಆರೋಗ್ಯ ಇಲಾಖೆ
ಕೆ.ಬಿ.ತ್ರಿಲೋಕ ಚಂದ್ರ-ವಿಶೇಷ ಆಯುಕ್ತರು, ಬಿಬಿಎಂಪಿ
 ಕೆ.ಪಿ.ಮೋಹನ್ ರಾಜ್-ಎಂಡಿ, ಕೆಎಸ್‌ಐಐಡಿಸಿ
.ಬಿ.ಬಿ.ಕಾವೇರಿ-ಎಂಡಿ, ಕೆಎಸ್‌ಎಂಸಿಎಲ್
 ಟಿ.ಹೆಚ್.ಎಂ.ಕುಮಾರ್-ಆಯುಕ್ತರು, ಜವಳಿ ಇಲಾಖೆ
ಪ್ರಿಯಾಂಕಾ ಮೇರಿ ಫ್ರಾನ್ಸಿಸ್-ನಿರ್ದೇಶಕರು
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು
ಕನಗವಲ್ಲಿ-ನಿರ್ದೇಶಕರು, ಸಮಗ್ರ ಮಕ್ಕಳ ರಕ್ಷಣೆ ಯೋಜನೆ
ಬಿ.ರಾಮ್ಪ್ರಸಾತ್-ನಿರ್ದೇಶಕರು, ಗಣಿ ಇಲಾಖೆ
ವೆಂಕಟೇಶ್ ಕುಮಾರ್-ಕಾರ್ಯದರ್ಶಿ, ಕೆಕೆಆರ್ಡಿಬಿ
. ಚಾರುಲತಾ ಸೋಮಲ್-ಜಿಲ್ಲಾಧಿಕಾರಿ, ರಾಯಚೂರು
. ಶಿಲ್ಪಾನಾಗ್-ಆಯುಕ್ತರು, ಪಂಚಾಯತ್ ರಾಜ್ ಇಲಾಖೆ
 ಲಕ್ಷ್ಮೀ ಪ್ರಿಯಾ-ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಸಂಸ್ಥೆ
 ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ
. ಬಿ.ಹೆಚ್.ನಾರಾಯಣ ರಾವ್-ಸಿಇಒ, ವಿಜಯನಗರ ಜಿ.ಪಂ
 ಉಕೇಶ್ ಕುಮಾರ್‌, ಕೋಲಾರ ಜಿ.ಪಂ ಸಿಇಒ
ಬಿ.ಸಿ.ಸತೀಶ್‌-ಕೊಡಗು ಜಿಲ್ಲಾಧಿಕಾರಿ
. ಹೆಚ್‌.ಎನ್.ಗೋಪಾಲ ಕೃಷ್ಣ-ಎಂಡಿ, ಕೆಪಿಎಲ್‌ಸಿಎಲ್‌
 ಶಿವಾನಂದ-ಆಹಾರ ನಿಗಮದ ಎಂಡಿ
. ಎಂ.ಎಸ್.ಅರ್ಚನಾ-ನಿರ್ದೇಶಕರು

click me!