ಬೇಡ್ತಿ-ವರದಾ ನದಿ ಜೋಡಣೆ ಕಾಮಗಾರಿ ಪೂರ್ವಭಾವಿ ಸಭೆ: ಪಕ್ಷಾತೀತ ಹೋರಾಟಕ್ಕೆ ಬೊಮ್ಮಾಯಿ ಮನವಿ!

Published : Aug 10, 2025, 04:31 PM IST
Varada Bedti River alignment

ಸಾರಾಂಶ

ಬೆಡ್ತಿ-ವರದಾ ನದಿ ಜೋಡಣೆಗೆ ಜನಶಕ್ತಿ ಪ್ರದರ್ಶನ ಅಗತ್ಯವೆಂದು ಮಾಜಿ ಸಿಎಂ ಬೊಮ್ಮಾಯಿ ಹಾವೇರಿಯಲ್ಲಿ ಹೇಳಿದರು. ನೀರು ಜೀವಜಲ, ಔಷಧಿಯೂ ಹೌದು. ನೀರಿನ ಸಮಸ್ಯೆ ಜಾಗತಿಕ. ನದಿಗಳ ಸಂರಕ್ಷಣೆ, ಬಳಕೆ ಮುಖ್ಯ. ಪಶ್ಚಿಮಕ್ಕೆ ಹರಿಯುವ ನದಿಗಳ ಬಳಕೆ ಸವಾಲಿನದ್ದು. ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ರೂಪಿಸಬೇಕು.

ಹಾವೇರಿ (ಆ.10): ಬೆಡ್ತಿ ವರದಾ ನದಿ ಜೋಡಣೆಗೆ ಜನರು ಶಕ್ತಿ ಪ್ರದರ್ಶನ ಮಾಡಿದ್ದು, ಜನ ಶಕ್ತಿಯ ಮುಂದೆ ಯಾವುದೂ ದೊಡ್ಡದಿಲ್ಲ. ಹಳ್ಳ ಹಳ್ಳ ಸೇರಿ ನದಿಯಾದಂತೆ ರೈತರ ಹಳ್ಳ ದೊಡ್ಡ ನದಿಯಾಗಿ ಹರಿಯುತ್ತದೆ. ಬೆಡ್ತಿ ವರದಾ ನದಿ ಜೋಡಣೆ ಯೋಜನೆಗಾಗಿ ಪಕ್ಷಾತೀತ ಹೋರಾಟ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿಯ ಶ್ರೀ ಹುಕ್ಕೇರಿಮಠದ ಆವರಣದಲ್ಲಿ ಏರ್ಪಡಿಸಿದ ವರದಾ ಹಾಗೂ ಬೇಡ್ತಿ ನದಿಗಳ ಜೋಡಣೆ ಕಾಮಗಾರಿಯ ಕುರಿತಾದ ಮಹತ್ವದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನೀರು ಭಗವಂತ ಕೊಟ್ಟಿರುವ ದೊಡ್ಡ ವರ. ನೀರಿನ ಮಹತ್ವ ಏನಿದೆ ಎಂದರೆ ನೀರಿಗೆ ಸಾವಿಲ್ಲ. ನೀರು ಬೇರೆ ಬೇರೆ ರೂಪ ತಾಳಿದರೂ ಮತ್ತೂ ಈ ಪರಿಸರದಲ್ಲಿ ಇರುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ವಾಟರ್ ಸೈಕಲ್ ಅಂತ ಹೇಳುತ್ತಿದ್ದರು. ನೀರು ಆವಿಯಾಗಿ ಮೋಡವಾಗಿ ಮಳೆಯಾಗಿ ಮತ್ತೆ ಹಳ್ಳ, ನದಿಯಾಗಿ ಹರಿಯತ್ತದೆ. ಮನುಷ್ಯ ಪ್ರಾಣಿಗಳಿಗೆ ಬದುಕಿನ ದಾಹ ತೀರಿಸಲು ನೀರು ಬೇಕು. ನಮ್ಮ ಬದುಕಿಗೆ ಉದ್ಯೋಗಕ್ಕೆ, ಬೇರೆ ವಸ್ತುಗಳ ತಯಾರಿಕೆಗೆ ನೀರು ಬೇಕು.ಒಂದೊಂದು ನದಿಗಳು ಒಂದೊಂದು ಸಂಸ್ಕೃತಿ ಉದಯಕ್ಕೆ ಕಾರಣವಾಗಿದೆ‌. ನೀರು ಔಷಧಿಯೂ ಹೌದು ಎಂದು ಹೇಳಿದರು.

ನೀರು ಎಲ್ಲರಿಗೂ ಸೇರಿದ್ದು: ನಾನು ದಾವೋಸ್ ಗೆ ಗೆ ಹೋದಾಗ ದಾವೋಸ್ ಸಮಾವೇಶದಲ್ಲಿ ವಿಶ್ವಬ್ಯಾಂಕ್ ಅಧ್ಯಕ್ಷರು, 117 ದೇಶಗಳ ಪ್ರಧಾನಿಗಳು ಇದ್ದರು, ಅದರಲ್ಲಿ ನನಗೆ ಮಾತನಾಡಲು ಹತ್ತು ನಿಮಿಷ ಸಮಯ ಕೊಟ್ಟಿದ್ದರು. ನೀರು ಯಾರಿಗೆ ಸೇರಿದ್ದು, ಒಬ್ಬ ವ್ಯಕ್ತಿಗೆ ಸೇರಿದ್ದಾ, ಸಮಾಜಕ್ಕೆ ಸೇರಿದ್ದಾ, ಒಂದು ದೇಶಕ್ಕೆ ಸೆರಿದ್ದಾ ಎನ್ನುವ ಬಗ್ಗೆ ಮಾತನಾಡಿದ್ದೆ. ನೀರಿನ ನಿರ್ವಹಣೆಗೆ ಬಹಳ ಸ್ಪಷ್ಟತೆ ಇರಬೇಕು. ನೀರು ಎಲ್ಲರಿಗೂ ಸೇರಿದ್ದು ನೀರಿನ ಸಮಸ್ಯೆ ಲೋಕಲ್ ನಿಂದ ಗ್ಲೋಬಲ್ ವರೆಗೂ ಇದೆ. ಕೆರೆಗಳು ಮತ್ತು ಹಳ್ಳಗಳ ನಡುವೆ ನದಿ ದೊಡ್ಡ ಸಂಪರ್ಕ. ನದಿಗಳ ನಿರ್ವಹಣೆಯಿಂದ ನೀರಿನ ಬಳಕೆ ಮಾಡಿಕೊಳ್ಳಬೇಕು. ಹಲವಾರು ನದಿಗಳು ಸಮುದ್ರವನ್ನೇ ಸೇರುವುದಿಲ್ಲ‌ ಹಲವಾರು ನದಿಗಳು ಬತ್ತಿ ಹೋಗುತ್ತಿವೆ. ಅದಕ್ಕಾಗಿ ಬೇಸಿಗೆಯಲ್ಲಿ ತುಂಗಭದ್ರಾ ಭಾಗದಲ್ಲಿ ಹಾವೇರಿ, ಗದಗ, ಶಿರಹಟ್ಟಿ ರಾಣೆಬೆನ್ನೂರು ನಗರಗಳಿಗೆ ನಿರಿನ ಸಮಸ್ಯೆ ಇದೆ. ಎರಡನೇ ಬೆಳೆಗೆ ನೀರು ಸಿಗುತ್ತಿಲ್ಲ ಎಂದರು.

ಕರ್ನಾಟಕದ ಮಟ್ಟಿಗೆ ನಿಸರ್ಗ ನಮಗೆ ಕನಿಕರ ತೋರಿದೆ. ಬಹುತೇಕ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತವೆ. ಕೃಷ್ಣಾ, ತುಂಗ ಭದ್ರಾ ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಜೆ ಹರಿಯುತ್ತವೆ. ಕಾಳಿ, ನೇತ್ರಾವತಿ ನದಿಗಳು ಪಶ್ಚಿಮದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುತ್ತವೆ. ಮಾನವನಿಗೆ ಒಂದು ಸವಾಲಿದೆ. ಕೆಲವೊಮ್ಮೆ ನಾವು ಆಡುವ ಮಾತು ಸಮಸ್ಯೆಗೆ ಪರಿಹಾರ ಆಗಬೇಕೆ ಹೊರತು ಸಮಸ್ಯೆ ಹುಟ್ಟುಹಾಕಬಾರದು. ಪಶ್ಚಿಮದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ನದಿಗಳ ಬಳಕೆ ಮಾಡಿಕೊಳ್ಳುವುದು ದೊಡ್ಡ ಸವಾಲಿದೆ. ಇಲ್ಲಿ ಪರಿಸರ, ಅರಣ್ಯ, ಜೀವ ವೈವಿಧ್ಯಕ್ಕೆ ಸಮಸ್ಯೆ ಆಗುತ್ತದೆ. ಸುಮಾರು ನೂರು ಎಕರೆ ಮುಳುಗಡೆ ಆಗುತ್ತದೆ ಎಂದರೆ ಅದಕ್ಕೆ ವಿರೋಧ ವ್ಯಕ್ತವಾಗಿ ಸುಪ್ರಿಂ ಕೋರ್ಟ್ವಗೆ ಹೋಗುತ್ತದೆ. ಮಹಾದಾಯಿ ವಿಚಾರದಲ್ಲಿ ಕೇವಲ ಗೋವಾದವರು ವಿರೋಧಿಸಲಿಲ್ಲ ನಮ್ಮ ಕರ್ನಾಟಕದ ಪರಿಸರ ವಾದಿಗಳು ವಿರೋಧಿಸಿದ್ದರು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌