ಕರ್ನಾಟಕದ ಜನತೆಗೆ KSRTC ಬಸ್ ದರ ಏರಿಕೆ ಬಿಸಿ, ಎಷ್ಟಾಗಲಿದೆ ಟೆಕೆಟ್?

Published : Jul 07, 2022, 06:54 PM IST
ಕರ್ನಾಟಕದ ಜನತೆಗೆ KSRTC ಬಸ್ ದರ ಏರಿಕೆ ಬಿಸಿ, ಎಷ್ಟಾಗಲಿದೆ ಟೆಕೆಟ್?

ಸಾರಾಂಶ

* ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಕರೆಂಟ್ ಹೀಗೆ ಬೆಲೆ ಏರಿಕೆ ಜನಸಾಮಾನ್ಯರನ್ನ ಹಿಂಡಿ ಹಿಪ್ಪೆ *ರಾಜ್ಯದ ಜನತೆಗೆ ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಬಿಸಿ..! *ಶೇಕಡಾ 38 ರಷ್ಟು ದರ ಏರಿಕೆಗೆ ಕೆಎಸ್ಆರ್ಟಿಸಿ ಪ್ರಸ್ತಾಪ..!

ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜು.7):
 ದುಬಾರಿ ದುನಿಯಾದಲ್ಲಿ ಜೀವನ ಮಾಡೋಕೆ ಕಷ್ಟ ಆಗ್ಬಿಟ್ಟಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಕರೆಂಟ್ ಹೀಗೆ ಬೆಲೆ ಏರಿಕೆ ಜನಸಾಮಾನ್ಯರನ್ನ ಹಿಂಡಿ ಹಿಪ್ಪೆ ಮಾಡಿದೆ. ಈ ನಡುವೆ ಕೆಎಸ್ಆರ್ಟಿಸಿ ಬಸ್ ದರ ಪರಿಷ್ಕರಣೆಗೆ ಕಸರತ್ತು ಆರಂಭಿಸಿದೆ. ನಷ್ಟದಲ್ಲಿರೋ ನಿಗಮವನ್ನು ಮೇಲೆತ್ತಲು ಪ್ರಯಾಣ ಏರಿಕೆ ಅಗತ್ಯ ಎಂದಿರುವ ನಿಗಮ,ದುಬಾರಿ ಪ್ರಸ್ತಾವನೆಗೆ ಒಂದೆರಡು ದಿನಗಳಲ್ಲಿ ಸಿಎಂ ಅಸ್ತು ಅಂದ್ರೆ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ ಆಗಿದೆ.

ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರೋ ಹೊತ್ತಿನಲ್ಲಿ ಬಸ್ ದರ ಏರಿಕೆಗೆ ಕಸರತ್ತು ಆರಂಭವಾಗಿದೆ. ಈಗಾಗಲೇ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರಂತೂ  ರೋಸಿಹೋಗಿದ್ದಾರೆ.  ಅದ್ರಲ್ಲೂ ಸಗಟು ಡೀಸೆಲ್ ಹಾಗೂ ಪೆಟ್ರೋಲ್ ದರ ದಿನದಿನವೂ ಏರುತ್ತಲೇ ಸಾಗ್ತಿದೆ. ಇದ್ರ ಮಧ್ಯೆ ಕೆಎಸ್ಆರ್ಟಿಸಿ ದರ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ಬಾರಿ ಶೇ 20 ರಷ್ಟು ದರ ಏರಿಕೆಗೆ ಪ್ರಸ್ತಾವನೆ ಕಳಿಸಿದ್ದ ನಿಗಮ ಇದೀಗ ಬರೊಬ್ಬರಿ  ಶೇಕಡಾ 38 ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ.

ಮತ್ತೆ ವಿದ್ಯುತ್‌ ದರ ಹೆಚ್ಚಳ: ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಿಷ್ಟು

ಸದ್ಯ ಡೀಸೆಲ್ ದರ ಏರಿಕೆಯಿಂದ ನಿಗಮಕ್ಕೆ ಪ್ರತಿನಿತ್ಯ  ಲಕ್ಷಾಂತರ ರೂಪಾಯಿ ಹೆಚ್ಚುವರಿ ಹೊರೆಯಾಗ್ತಿದೆ. ಬಲ್ಕ್ ಡೀಸೆಲ್ ದರವೂ ದುಪ್ಪಟ್ಟಾಗಿದೆ. ಹೀಗಾಗಿ ನಿಗಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ದರ ಏರಿಕೆಯ‌ಮೊರೆ ಹೋಗಿದೆ. ಕಳೆದ ಮೂರು ನಾಲ್ಕು ವರ್ಷದಿಂದ ಟಿಕೆಟ್ ದರ ಏರಿಕೆಯೂ ಆಗಿಲ್ಲ. ಬಸ್ ಬಿಡಿಭಾಗಗಳು ಬಹಳಷ್ಟು ದುಬಾರಿಯಾಗಿದೆ. ಜೊತೆಗೆ   ಬಸ್ ಪ್ರಯಾಣಿಕರ ಸಂಖ್ಯೆ  ಕುಸಿದಿದೆ. ಇದರಿಂದ ಟಿಕೆಟ್ ರೆವೆನ್ಯೂ ಕಲೆಕ್ಷನ್ ಸಹ ಪಾತಾಳಕ್ಕೆ ಇಳಿದಿದೆ. ಹೀಗಾಗಿ ದರ ಏರಿಕೆ ಮಾಡದಿದ್ರೆ ನಾವು ಬಸ್ ರಸ್ತೆಗಿಳಿಸೋದು ಕಷ್ಟ. ಸದ್ಯ ಆರ್ಥಿಕ ಸಂಕಷ್ಟದಿಂದ ಹೊರಬರಲು ಕನಿಷ್ಠ ಶೇ38ರಷ್ಟು ದರ ಏರಿಕೆ ಮಾಡ್ಬೇಕೆಂದು ಕೆಎಸ್ಆರ್ಟಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

 ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಸರ್ಕಾರದ ಮೇಲೆ ಜನಾಕ್ರೋಶ ಹೆಚ್ಚಾಗಿದೆ. ಇಂಥಾ ಪರಿಸ್ಥಿತಿಯಲ್ಲಿ 38 ಶೇಕಡಾ ದಷ್ಟು ಬಸ್ ಟಿಕೆಟ್ ದರ ಏರಿಸಿದ್ರೆ ಜನ ಸುಮ್ನೆ ಬಿಡ್ತಾರಾ ಇದು ಆಗದ ಮಾತು ಎಂದು ನಿಗಮಕ್ಕೆ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಸದ್ಯದ ನಿಗಮದ ಆರ್ಥಿಕ ಸ್ಥಿತಿಗತಿಗನುಗುಣವಾಗಿ ಕನಿಷ್ಠ ದರವಾದ್ರೂ ದರ ಏರಿಕೆ ಮಾಡ್ಲೇ ಬೇಕು ಎಂದು ನಿಗಮ ಸರ್ಕಾರದ ಮುಂದೆ ಮಂಡಿಯೂರಿದೆ.

ಸಿಎಂ ಕೂಡ ದರ ಏರಿಕೆಗೆ ಸಕಾರಾತ್ಮಕವಾಗಿ ಸ್ವಂದಿಸಿದ್ದು ಒಂದೆರಡು ದಿನಗಳಲ್ಲಿ  ಕ್ರಮದ ಭರವಸೆ ನೀಡಿದ್ದಾರೆ.  ಹೀಗಾಗಿ ಸರ್ಕಾರ ಕೆಎಸ್ಆರ್ಟಿಸಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿದ್ರೆ ಪ್ರತಿ ಸ್ಟೇಜ್ ಆಧಾರದ ಮೇಲೆ ,3 ರಿಂದ ,4 ರೂ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದೆರಡು ಬಾರಿಯೂ ದರ ಏರಿಕೆ ಪ್ರಸ್ತಾವನೆಯನ್ನು ಸಿಎಂ ತಿರಸ್ಕರಿಸಿದ್ರು. ಈಗ ಮತ್ತೆ ಶೇಕಡಾ 38 ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್