Bidar: ಬಕ್ರೀದ್ ಹಬ್ಬದಲ್ಲಿ ಗೋವುಗಳ ಸಾಗಾಟಕ್ಕೆ ಕಡಿವಾಣ: ಸಚಿವ ಪ್ರಭು ಚವ್ಹಾಣ್

By Govindaraj S  |  First Published Jul 7, 2022, 12:53 PM IST

ಬಕ್ರೀದ್‌ ಹಬ್ಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೋವುಗಳ ಸಾಗಟಕ್ಕೆ ಕಡಿವಾಣ ಹಾಕಲಾಗಿದೆ, ಗೋವು ಸಾಗಾಟ ಕಂಡು ಬಂದರೆ ಪಶು ಇಲಾಖೆ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.


ಬೀದರ್ (ಜು.07): ಬಕ್ರೀದ್‌ ಹಬ್ಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೋವುಗಳ ಸಾಗಟಕ್ಕೆ ಕಡಿವಾಣ ಹಾಕಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಈ ಬಗ್ಗೆ ಬೀದರ್‌ನಲ್ಲಿ ಮಾತನಾಡಿದ ಸಚಿವರು ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ ಬಕ್ರೀದ್ ಹಬ್ಬಕ್ಕೆ ಯಾವುದೇ ಕಾರಣಕ್ಕೂ ಗೋವುಗಳು ಕಸಾಯಿ ಖಾನೆಗೆ ಹೋಗಬಾರದು. ರಾಜ್ಯಾದ್ಯಂತ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಗೋವು ಸಾಗಾಟ ಕಂಡು ಬಂದರೆ ಪಶು ಇಲಾಖೆ ಹೆಲ್ಪ್‌ಲೈನ್‌ ನಂ.1962ಗೆ ಕರೆ ಮಾಡಿ ಮಾಹಿತಿ ತಿಳಿಸಿ ಎಂದು ಹೇಳಿದರು.

ಪಶು ಇಲಾಖೆಯ ಡೈರೆಕ್ಟರ್, ಕಮಿಷನರ್ ಜೊತೆ ಸಭೆ ಮಾಡಿ ಕಟ್ಟುನಿಟ್ಟಿನ ಕ್ರಮ‌ ತೆಗೆದುಕೊಳ್ಳಲಾಗಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಜೊತೆಗೂ ಈ ಬಗ್ಗೆ‌ ಚರ್ಚಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಹಲವು ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಗೋ‌ ಮಾತೆ ಕಸಾಯಿ ಖಾನೆಗೆ ಕಳುಹಿಸುವ ಹಾಗಿಲ್ಲ. ಇನ್ನು ಯಾರೇ ಕಾನೂನು ಉಲ್ಲಂಘನೆ ಮಾಡಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳಗ್ಳಲಾಗುವುದು ಎಂದು ಪ್ರಭು ಚವ್ಹಾಣ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

Tap to resize

Latest Videos

ಮುಂದಿನ ಡಿಸೆಂಬರ್‌ಗೆ ರಾಮಕುಂಜದಲ್ಲಿ ಸರ್ಕಾರಿ ಗೋಶಾಲೆ ಲೋಕಾರ್ಪಣೆ: ಪ್ರಭು ಚವ್ಹಾಣ್‌

ಔರಾದ್‌ ಸಮಗ್ರ ಅಭಿವೃದ್ಧಿಯೇ ನನ್ನ ಮಹಾಸಂಕಲ್ಪ: ಔರಾದ್‌ ವಿಧಾನಸಭಾ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದೇ ನನ್ನ ಮಹಾಸಂಕಲ್ಪವಾಗಿದೆ. ಔರಾದ್‌ ನಂ.1 ಕ್ಷೇತ್ರವಾಗಿ ಬದಲಾಗಲಿದ್ದು, ಮುಖ್ಯಮಂತ್ರಿಗಳೇ ಬಂದು ಕ್ಷೇತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಲಿದ್ದಾರೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್‌ ತಿಳಿಸಿದರು. ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ತಮ್ಮ ಜನ್ಮ ದಿನದ ನಿಮಿತ್ತ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಎಂದಿಗೂ ಚಿರರುಣಿಯಾಗಿರುತ್ತೇನೆ. 

ಅವರ ಆಶೀರ್ವಾದದಿಂದಾಗಿ ಮೂರು ಬಾರಿ ಶಾಸಕನಾಗಿ ಮತ್ತು ಎರಡು ಬಾರಿ ಸಚಿವನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಜೆಜೆಎಂ ಯೋಜನೆ ಅಡಿ ಔರಾದ್‌ ಮತ್ತು ಕಮಲನಗರ ತಾಲೂಕಿಗೆ ಸುಮಾರು 182 ಕೋಟಿ ರು. ಅನುದಾನ ತಂದಿದ್ದು, ಕೆಲಸ ಸಧ್ಯ ಚಾಲ್ತಿಯಲ್ಲಿದೆ. ಜಾನುವಾರು ಸಂವರ್ಧನಾ ಕೇಂದ್ರಕ್ಕೆ 35ಕೋಟಿ ರು., ಸಿಪೆಟ್‌ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೆ ಒಪ್ಪಿಗೆ, ಔರಾದ್‌ ಪಟ್ಟಣದ ಶಾಶ್ವತ ಕುಡಿಯುವ ನೀರಿಗಾಗಿ ಕಾರಂಜಾ ಜಲಾಶಯದಿಂದ ನೇರ ಪೈಪ್‌ಲೈನ್‌ಗಾಗಿ 110 ಕೋಟಿ ರು. ಪ್ರಸ್ತಾವನೆ ಇಡಲಾಗಿದೆ. 

ಗೋರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಸಚಿವ ಚವ್ಹಾಣ್‌

ರೈತನ ಮುಖದಲ್ಲಿ ಮಂದಹಾಸ ಮೂಡಿಸುವ ಉದ್ದೇಶದಿಂದ ಕಾರಂಜಾ ಜಲಾಶಯದಿಂದ ತಾಲೂಕಿನ ಎಲ್ಲ ಕೆರೆಗಳ ತುಂಬುವಿಕೆಗೆ ಕ್ರಮ ವಹಿಸಲಾಗುತ್ತಿದೆ. ಶ್ರಮ ಜೀವಿಯಾದ ರೈತ ಸ್ವಾವಲಂಬಿ, ಸ್ವಾಭಿಮಾನಿಯಾಗಿ ಬದುಕು ನಡೆಸಬೇಕು. ರೈತರ ಮಕ್ಕಳು, ಬಡವರ ಮಕ್ಕಳು ಯಾವೊತ್ತೂ ಶಿಕ್ಷಣದಿಂದ ವಂಚಿತರಾಗಬಾರದು. ಸಹಾಯ ಸಹಕಾರದ ನಿರೀಕ್ಷೆಯಲ್ಲಿರುವ ಕುಟುಂಬಗಳು ನೇರವಾಗಿ ಭೇಟಿಯಾಗುವಂತೆ ವಿನಂತಿಸಿಕೊಂಡರು.

click me!