* ಬೆಂಗಳೂರು-ಕಾರವಾರ ರೈಲನ್ನು "ಪಂಚಗಂಗಾ ಎಕ್ಸ್‌ಪ್ರೆಸ್" ಎಂದು ನಾಮಕರಣ
* "ಪಂಚಗಂಗಾ ಎಕ್ಸ್‌ಪ್ರೆಸ್" ಎಂದು ನಾಮಕರಣ ಮಾಡಿ ಕೇಂದ್ರ ರೈಲ್ವೆ ಸಚಿವಾಲಯ ಆದೇಶ
* ಮಾಧ್ಯಮ ಪ್ರಕಟಣೆ ಮೂಲಕ ಧನ್ಯವಾದ ತಿಳಿಸಿದ ಸಂಸದೆ ಶೋಭಾ ಕರಂದ್ಲಾಜೆ
ಬೆಂಗಳೂರು, (ಜುಲೈ.02): ಸಂಸದೆ ಶೋಭಾ ಕರಂದ್ಲಾಜೆಯವರ ಮನವಿ ಮೇರೆಗೆ ಬೆಂಗಳೂರು-ಕಾರವಾರ ರೈಲಿಗೆ "ಪಂಚಗಂಗಾ ಎಕ್ಸ್‌ಪ್ರೆಸ್" ಎಂದು ನಾಮಕರಣ ಮಾಡಿ ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಿಡಿಸಿದೆ.
ಕರಾವಳಿಯ ಜೀವನಾಡಿಯಾದ ಕಾರವಾರ-ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ ಪಾಸ್ಟ್ ರೈಲಿಗೆ , ಉಡುಪಿ ಜಿಲ್ಲೆಯ 5 ಪ್ರಮುಖ ಪುಣ್ಯ ನದಿಗಳು ಸಂಗಮಿಸಿ ಸೃಷ್ಟಿಯಾಗುವ ಪ್ರಾಕೃತಿಕ ಅಚ್ಚರಿ ಪಂಚಗಂಗಾವಳಿ ನದಿಯ ಹೆಸರಿನಿಂದ ಆಯ್ದ 'ಪಂಚಗಂಗಾ ಎಕ್ಸ್‌ಪ್ರೆಸ್' ಎಂಬ ಹೆಸರನ್ನು ಕೆಂದ್ರ ರೈಲ್ವೆ ಸಚಿವಾಲಯ ನಾಮಕರಣ ಮಾಡಿ ಆದೇಶಿಸಿದೆ.
undefined
ಇದು ಸಿಂಗಾಪುರದ ಅಂಡರ್ ವಾಟರ್ ವರ್ಲ್ಡ್ ಅಲ್ಲ; ಬೆಂಗಳೂರಿನ ಅತ್ಯಾಕರ್ಷಕ ರೈಲು ನಿಲ್ದಾಣ!
ಈ ಬಗ್ಗೆ ಇಂದು (ಶುಕ್ರವಾರ) ಸಂಸದೆ ಶೋಭಾ ಕರಂದ್ಲಾಜೆ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ತಿಳಿಸಿದ್ದಾರೆ.
ಕರಾವಳಿಯ ಬಹುಮುಖ್ಯ ಪುಣ್ಯ ಕ್ಷೇತ್ರಗಳ ಮೂಲಕ ಹರಿಯುವ ಪಂಚಗಂಗಾ, ಜಿಲ್ಲೆಯ ತೀರ್ಥ ಕ್ಷೇತ್ರ, ಪ್ರವಾಸೊದ್ಯಮ, ಮೀನುಗಾರಿಕೆ, ಕೃಷಿ ಹಾಗು ಜನಜೀವನಕ್ಕೆ ಅದಾರವಾಗಿದ್ದು, ಈ ಕಾರಣದಿಂದ ನೂತನ ಬೆಂಗಳೂರು-ಕಾರವಾರ ರೈಲಿಗೆ "ಪಂಚಗಂಗಾ" ಎನ್ನುವ ಹೆಸರಿಡಬೇಕು ಎಂದು ರೈಲ್ವೆ ರಾಜ್ಯ ಸಚಿವರಾಗಿದ್ದಸುರೇಶ್ ಅಂಗಡಿಯವರಿಗೆ ಮನವಿ ಸಲ್ಲಿಸಲಾಗಿತ್ತು.
ಜನರ ಅಪೇಕ್ಷೆಯನ್ನು ಗೌರವಿಸಿ, ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ "ಪಂಚ ಗಂಗಾ ಎಕ್ಸ್‌ಪ್ರೆಸ್" ಎಂಬ ಹೆಸರನ್ನು ಕರಾವಳಿಯ ಜೀವನಾಡಿಯದ ಬೆಂಗಳೂರು-ಕಾರವಾರ ರೈಲಿಗೆ ನಾಮಕರಣ ಮಾಡಿದ ಕೇಂದ್ರ ಸರಕಾರಕ್ಕೆ ಹಾಗು ರೈಲ್ವೆ ಸಚಿವಾಲಯಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಧನ್ಯವಾದ ತಿಳಿಸಿದ್ದಾರೆ.