ಸೈಬರ್ ವಂಚಕರ ಹೆಡೆಮುರಿ ಕಟ್ಟಲು ಬೆಂಗಳೂರು ನಗರ ಪೊಲೀಸರ ಮೆಗಾ ಪ್ಲಾನ್; ಇದು ರಾಜ್ಯದಲ್ಲೇ ಮೊದಲು!

Published : Sep 08, 2023, 10:42 AM ISTUpdated : Sep 08, 2023, 12:58 PM IST
ಸೈಬರ್ ವಂಚಕರ ಹೆಡೆಮುರಿ ಕಟ್ಟಲು ಬೆಂಗಳೂರು ನಗರ ಪೊಲೀಸರ ಮೆಗಾ ಪ್ಲಾನ್; ಇದು ರಾಜ್ಯದಲ್ಲೇ ಮೊದಲು!

ಸಾರಾಂಶ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇದಿನೆ ಸೈಬರ್ ವಂಚನೆಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಅಮಾಯಕರ ಖಾತೆಗೆ ಕನ್ನ ಹಾಕುವ ವಂಚಕರ ಹೆಡೆಮುರಿ ಕಟ್ಟಲು ಬೆಂಗಳೂರು ನಗರ ಪೊಲೀಸರು ಮೆಗಾ ಪ್ಲಾನ್ ಮಾಡಿದ್ದಾರೆ. ಇದು ರಾಜ್ಯದಲ್ಲೇ ಮೊದಲ ಬಾರಿಗೆ ಕ್ರಮವಾಗಿದ್ದು, ಸೈಬರ್ ವಂಚಕರು ಇನ್ನೆಂದೂ ವಂಚನೆ ಮಾಡಲಾಗದಂತೆ ಮಾಸ್ಟರ್ ಸ್ಟ್ರೋಕ್ ಆಗಲಿದೆ.

ಬೆಂಗಳೂರು (ಸೆ.8) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇದಿನೆ ಸೈಬರ್ ವಂಚನೆಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಅಮಾಯಕರ ಖಾತೆಗೆ ಕನ್ನ ಹಾಕುವ ವಂಚಕರ ಹೆಡೆಮುರಿ ಕಟ್ಟಲು ಬೆಂಗಳೂರು ನಗರ ಪೊಲೀಸರು ಮೆಗಾ ಪ್ಲಾನ್ ಮಾಡಿದ್ದಾರೆ. ಇದು ರಾಜ್ಯದಲ್ಲೇ ಮೊದಲ ಬಾರಿಗೆ ಕ್ರಮವಾಗಿದ್ದು, ಸೈಬರ್ ವಂಚಕರು ಇನ್ನೆಂದೂ ವಂಚನೆ ಮಾಡಲಾಗದಂತೆ ಮಾಸ್ಟರ್ ಸ್ಟ್ರೋಕ್ ಆಗಲಿದೆ.

ನಗರದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗಿ ನಾಗರಿಕರು ರೋಸಿಹೋಗಿದ್ದಾರೆ. ಸೇವಿಂಗ್ ಅಕೌಂಟ್‌ನಲ್ಲಿರುವ ಹಣ ಯಾವಾಗ ಖದೀಮರ ಪಾಲಾಗುತ್ತೋ ಎಂಬ ಆತಂಕದಲ್ಲೇ ಕಾಲಕಳೆಯುವಂತಾಗಿದೆ.  ಹೀಗಾಗಿ ಸೈಬರ್ ವಂಚಕರ ಈ ಕೃತ್ಯಗಳಿಗೆ ಇತಿಶ್ರೀ ಹಾಕಲೆಂದು ಪಣ ತೊಟ್ಟಿರುವ ಬೆಂಗಳೂರು ನಗರ ಪೊಲೀಸರು, ವಂಚನೆಗೆ ಬಳಕೆ ಮಾಡುವ ಸಿಮ್‌ಗಳನ್ನೇ ಶಾಶ್ವತವಾಗಿ ಬ್ಲಾಕ್ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. 

ಬೆಂಗಳೂರು: ಮುಂಬೈ ಡಿಸಿಪಿ ಸೋಗಿನಲ್ಲಿ ಟೆಕ್ಕಿಗೆ 2.68 ಲಕ್ಷ ವಂಚನೆ

ಜನೆವರಿಯಿಂದ ಇಲ್ಲೀತನಕ ವಂಚನೆಯಾದ ಸೈಬರ್ ಕೇಸ್ ಗಳ ಅಂಕಿ-ಅಂಶ ಪಡೆದ ಕಂಟ್ರೋಲ್ ರೂಮ್, ಎಲ್ಲಾ ಠಾಣೆಗಳಿಂದಲೂ ಸೈಬರ್ ಕೇಸ್ ಡೀಟೆಲ್ಸ್ ಪಡೆದು ವಂಚನೆ ನಂಬರ್ ಗಳ ಡೇಟಾ ಕಲೆಕ್ಟ್ ಮಾಡಿದ್ದಾರೆ. ಒಂದಲ್ಲ ಎರಡಲ್ಲ, ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳಿರುವುದನ್ನು ಪತ್ತೆ ಹಚ್ಚಿರುವ ನಗರ ಪೊಲೀಸರು. ಈ ವಂಚನೆ ಪ್ರಕರಣಗಳಲ್ಲಿ ಬಳಸಿದ ನಂಬರ್‌ಗಳ ಡೇಟಾ ಸಂಗ್ರಹಿಸಿರುವ ಪೊಲೀಸರು. ಯಾವ್ಯಾವ ನಂಬರ್‌ಗಳಿಂದ ವಂಚನೆಯಾಗಿದೆಯೋ ಅಂತಹ ನಂಬರ್‌ಗಳ ಸಿಮ್‌ಗಳನ್ನೇ ಶಾಶ್ವತ ಬ್ಲಾಕ್‌ ಮಾಡಿಸುತ್ತಿರುವ ಪೊಲೀಸರು.

ಇದಕ್ಕಾಗಿ ಕೇಂದ್ರ ಗೃಹ ಇಲಾಖೆ ಮತ್ತು ಸಿಮ್‌ ಸಂಸ್ಥೆಗಳ ಜೊತೆ ಸಂವಹನ ನಡೆಸಿ ಕೇವಲ ಹದಿನೈದೇ ದಿನದಲ್ಲೇ 12 ಸಾವಿರ ಸಿಮ್ ಗಳ ಬ್ಲಾಕ್ ಮಾಡಿರುವ ಪೊಲೀಸರು. ಸಿಮ್‌ಗಳಷ್ಟೇ ಅಲ್ಲ, ಸೈಬರ್‌ ವಂಚನೆ ಕೃತ್ಯಕ್ಕೆ ಬಳಕೆ ಮಾಡಿರುವ ಮೊಬೈಲ್‌ಗಳನ್ನೂ ಬ್ಲಾಕ್‌ ಮಾಡಿಸ್ತಿರೋ ಪೊಲೀಸರು.ಇನ್ಮುಂದೆ ವಂಚನೆ ಪ್ರಕರಣಗಳು ನಡೆದರೆ ಸಿಮ್ ಮೊಬೈಲ್ ಎರಡೂ ನಿಂತ ಜಾಗದಲ್ಲೇ ಬ್ಲಾಕ್ ಆಗಲಿದೆ. 

'Smishing' ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು? ಈ ಅಂಶಗಳನ್ನು ಮರೀಲೇಬೇಡಿ: ಕೇಂದ್ರ ಸರ್ಕಾರ ಎಚ್ಚರಿಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!