ಪಟಾಕಿ ನಿಷೇಧ: ವ್ಯಾಪಾರಿಗಳಿಂದ ಆಕ್ಷೇಪ, ತಜ್ಞರಿಂದ ಸ್ವಾಗತ, ಅಂಗಡಿಗಳಿಗೆ ಲಗ್ಗೆಯಿಟ್ಟ ಜನ

By Suvarna News  |  First Published Nov 7, 2020, 2:59 PM IST

ವಾಯುಮಾಲಿನ್ಯ ತಡೆಗಟ್ಟಲು, ಕೋವಿಡ್ ಸೋಂಕಿತರ ಆರೋಗ್ಯ ದೃಷ್ಟಿಯಿಂದ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು, ಹಸಿರು ಪಟಾಕಿಗೆ ಮಾತ್ರ ಬಳಸಿ ಎಂದು ಸಿಎಂ ಪ್ರಕಟಣೆ ಹೊರಡಿಸಿದ್ದಾರೆ. ಮಾರ್ಗಸೂಚಿ ಹೊರಬರಬೇಕಷ್ಟೇ.


ಬೆಂಗಳೂರು (ನ. 07): ವಾಯುಮಾಲಿನ್ಯ ತಡೆಗಟ್ಟಲು, ಕೋವಿಡ್ ಸೋಂಕಿತರ ಆರೋಗ್ಯ ದೃಷ್ಟಿಯಿಂದ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು, ಹಸಿರು ಪಟಾಕಿಗೆ ಮಾತ್ರ ಬಳಸಿ ಎಂದು ಸಿಎಂ ಪ್ರಕಟಣೆ ಹೊರಡಿಸಿದ್ದಾರೆ. ಮಾರ್ಗಸೂಚಿ ಹೊರಬರಬೇಕಷ್ಟೇ. ಸರ್ಕಾರದ ಈ ನಿರ್ಧಾರಕ್ಕೆ ಪರ- ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Tap to resize

Latest Videos

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮಾಲಿಕರು ಪಟಾಕಿಯನ್ನು ಖರೀದಿಸಿದ್ದಾರೆ. ಈಗ ಪಟಾಕಿ ನಿಷೇಧ ಹೇರಲು ಸರ್ಕಾರ ನಿರ್ಧರಿಸಿರುವುದರಿಂದ ಮಾಲಿಕರು ಕಂಗಾಲಾಗಿದ್ದಾರೆ. ಕೋರ್ಟ್ ಮೊರೆ ಹೋದರೂ ಅಚ್ಚರಿಯಿಲ್ಲ. 

ಒಂದು ಕಡೆ ವ್ಯಾಪಾರಸ್ಥರು ಆಕ್ಷೇಪ ವ್ಯಕ್ತಪಡಿಸಿದ್ರೆ ಇನ್ನೊಂದು ಕಡೆ ತಜ್ಞರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 

ಪಟಾಕಿ ಬ್ಯಾನ್ ಮಾಡುವ ನಿರ್ಧಾರವನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಸ್ವಾಗತಿಸಿದ್ದಾರೆ. 

ಪಟಾಕಿ ನಿಷೇಧದ ಬೆನ್ನಲ್ಲೇ ಭರ್ಜರಿ ಪಟಾಕಿ ಖರೀದಿಸಿದ ಗ್ರಾಹಕರು

click me!