
ಮೈಸೂರು : ಇದು ಕಾಕತಾಳೀಯವಾದರೂ ಎನ್ನಿ, ಏನಾದರೂ ಎನ್ನಿ. ಆದಿಚುಂಚನಗಿರಿಯ ಹಿಂದಿನ ಪೀಠಾಧಿಪತಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗೆಯ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ-ಈ ಇಬ್ಬರು ಸಂತರು ಇಹಲೋಕ ತ್ಯಾಗ ಮಾಡಿದ್ದು ಜನವರಿ ತಿಂಗಳಲ್ಲಿ ಹಾಗೂ ಜಿಲ್ಲೆಯ ತಿರುಮ ಕೂಡಲು ನರಸೀಪುರದಲ್ಲಿ ನಡೆಯುವ ಕುಂಭ ಮೇಳದ ಮುನ್ನಾ ದಿನಗಳಲ್ಲಿ. ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ
2013 ರ ಜ. 13ರಂದು ಇಹಲೋಕ ತ್ಯಜಿಸಿದರು.
ಅದೇ ವರ್ಷ ಫೆ. 23 ರಿಂದ 25 ರವರೆಗೆ 9 ನೇ ಕುಂಭಮೇಳ ನಡೆಯಿತು. ಇದೀಗ ಶ್ರೀ ಶಿವ ಕುಮಾರ ಸ್ವಾಮೀಜಿ ಜ. 21ರಂದು ಇಹಲೋಕ ತ್ಯಜಿಸಿದರು. ಈ ಬಾರಿ ಫೆ. 17ರಿಂದ 19ರವರೆಗೆ 11ನೇ ಕುಂಭಮೇಳ ಆಯೋಜನೆಯಾಗಿದೆ. ಮೊದಲೆಲ್ಲಾ ‘ಕುಂಭಮೇಳ’ ಉತ್ತರ ಭಾರತಕ್ಕೆ ಸೀಮಿತವಾಗಿತ್ತು.
ಅದನ್ನು ದಕ್ಷಿಣ ಭಾರತಕ್ಕೆ ತಂದ ಕೀರ್ತಿ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರ ನಾಥ ಸ್ವಾಮಿಗಳಿಗೆ ಸಲ್ಲುತ್ತದೆ. ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರಗಳ ಸಮಾಗಮ ಸ್ಥಳವಾದ ತಿರುಮಕೂಡಲು ನರಸೀಪುರ ದಕ್ಷಿಣ ಭಾರತದ ‘ತ್ರಿವೇಣಿ ಸಂಗಮ’ ಎಂದೇ ಹೆಸರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ