ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಹುಡಗಿಯರ ವಿಡಿಯೋ ಮಾಡಿದ ಆರೋಪದಡಿ ಬಂಧನದ ಭೀತಿಯಲ್ಲಿದ್ದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ನೀಡಿದೆ.
ಉಡುಪಿ (ಜು.28): ರಾಜ್ಯದಲ್ಲಿ ಅತ್ಯಂತ ವಿವಾದದ ಸ್ವರೂಪ ಪಡೆದಿರುವ ಉಡುಪಿ ಕಾಲೇಜು ಶೌಚಗೃಹದಲ್ಲಿ ಹಿಂದೂ ಹುಡಗಿಯರ ವಿಡಿಯೋ ಮಾಡಿದ ಆರೋಪದಡಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇನ್ನು ಬಂಧನಕ್ಕೂ ಮುನ್ನವೇ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ.
ವೀಡಿಯೋ ಮಾಡಿದ ಮುಸ್ಲಿಂ ಸಮುದಾಯದ ಮೂವರು ವಿದ್ಯಾರ್ಥಿಗಳಾದ ಶಬಾನಾಜ್, ಆಲ್ಫಿಯಾ ಮತ್ತು ಆಲಿಯಾ ವಿರುದ್ಧ ಹಾಗೂ ನೇತ್ರಜ್ಯೋತಿ ಆಡಳಿತ ಮಂಡಳಿಯ ವಿರುದ್ಧ ಸಾಕ್ಷ್ಯನಾಶ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಸೆಕ್ಷನ್ 509, 204, 175,34, ಸೇರಿ ವಿವಿಧ ಪ್ರಕರಣಗಳನ್ನು ದಾಖಲು ಮಾಡಿಲಾಗಿತ್ತು. ಈ ಮೂಲಕ ರಾಜ್ಯಾದ್ಯಂತ ಬಿಜೆಪಿ ನಾಯಕರು, ಹಲವು ಹಿಂದೂ ಸಂಘಟನೆಗಳು, ಮಹಿಳೆಯರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಚಾರಣೆಯನ್ನು ಆರಂಭಿಸಲಿದ್ದಾರೆ.
undefined
ಉಡುಪಿ ಕಾಲೇಜು ವಿಡಿಯೋ ವಿವಾದ ವಿರುದ್ಧ ಪೋಸ್ಟ್: ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ
ಬಂಧನದ ಭೀತಿಯಿಂದ ಪಾರು: ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ತನಿಖೆಗೆ ಮುಂದಾದ ಪೊಲೀಸರು ವಿಡಿಯೋ ಮಾಡಲಾಗಿದ್ದ ಮೊಬೈಲ್ ಅನ್ನು ಕಾಲೇಜು ಆಡಳಿತ ಮಂಡಳಿಗೆ ನೀಡಲಾಗಿತ್ತು. ಇನ್ನು ಘಟನೆಯ ಕುರಿತಂತೆ ಕಾಲೇಜಿನ ಆಡಳಿತ ಮಂಡಳಿಯಿಂದ ಪೊಲೀಸರು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದರು. ಇನ್ನು ವಿದ್ಯಾರ್ಥಿಗಳು ಬಂಧನದ ಭೀತಿಯಿಂದ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದರು. ಇದಾದ ನಂತರ ನೇರವಾಗಿ ವಕೀಲರ ಮೂಲಕ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದ ವಿದ್ಯಾರ್ಥಿಗಳು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಈ ಮೂಲಕ ಬಂಧನದ ಭೀತಿಯಿಂದ ಪಾರಾಗಿದ್ದಾರೆ.
ಒಂದು ವಾರ ಘಟನೆಯನ್ನು ಮುಚ್ಚಿಟ್ಟಿದ್ದ ಕಾಲೇಜು: ಉಡುಪಿಯ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ಮೂವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಅರೆ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿದ್ದಾರೆ. ನಂತರ, ಅವುಗಳನ್ನು ಅವರದ್ದೇ ಸಮುದಾಯದ ಯವಕರಿಗೆ ಕಳುಹಿಸಲಾಗುತ್ತದೆ. ನಂತರ, ಆ ವೀಡಿಯೋಗಳನ್ನು ಕೆಲವೊಂದು ವಾಟ್ಸಾಪ್ ಗುಂಪುಗಳಿಗೆ ಹಂಚಿಕೊಳ್ಳಲಾಗತ್ತಿತ್ತು. ಈ ಬಗ್ಗೆ ಹಿಂದೂ ವಿದ್ಯಾರ್ಥಿನಿಯರಿಗೆ ಮಾಹಿತಿ ತಿಳಿದು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಇದನ್ನು ಪರಿಶೀಲನೆ ಮಾಡಿದ ಕಾಲೇಜು ಆಡಳಿತ ಮಂಡಳಿಯವರು, ಕ್ಯಾಮರಾ ಇಟ್ಟಿದ್ದ ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿದ್ದ ವೀಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ನಂತರ ಕೃತ್ಯವನ್ನು ಎಸಗಿದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಈ ಪ್ರಕರಣವನ್ನು ಕಾಲೇಜು ಆಡಳಿತ ಮಂಡಳಿ ಮುಚ್ಚಿಹಾಕಿತ್ತು ಎಂದು ಸುದ್ದಿ ಪ್ರಸಾರವಾಗಿತ್ತು.
ಉನ್ನತ ಮಟ್ಟದ ತನಿಖೆಗೆ ಆಗ್ರಹ
:
ಮೂವರು ಪ್ಯಾರಾ ಮೆಡಿಕಲ್ ಡಿಪ್ಲೋಮ ಕಲಿಯುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಿದ್ದಾರೆ.
ಅದರಿಂದ ಆ ಮೂವರು ವಿದ್ಯಾರ್ಥಿನಿಯರ ವಿಚಾರಣೆಗೆ ಒಳಪಡಿಸಿ, ತಕ್ಷಣ ಅವರ ಮೇಲೆ ಕೇಸು ದಾಖಲಿಸಿ ಉನ್ನತ ಮಟ್ಟದ ತನಿಖೆಗೆ ಪೋಲಿಸ್ ಇಲಾಖೆ ಗೆ ಆಗ್ರಹಿಸುತ್ತೇನೆ. pic.twitter.com/pNIpxmEC2P