
ಬಾಗಲಕೋಟೆ (ಸೆ.18): ನೇಪಾಳದಲ್ಲಿ ಇತ್ತೀಚೆಗೆ ಜೆನರೇಷನ್ ಜೀ (Generation Z kids) ಯುಗದ ಯುವಜನರು ರಾಷ್ಟ್ರೀಯ ಸರ್ಕಾರವನ್ನೇ ಕಿತ್ತುಹಾಕಿ, ದೇಶದ ಆಡಳಿತ ಕೇಂದ್ರವನ್ನೇ ಧ್ವಂಸ ಮಾಡಿದ್ದರು. ಅದೇ ರೀತಿ ರಾಜ್ಯದಲ್ಲಿಯೂ ಜೆನ್ ಜೀ (Gen Z) ಯುಗದ ವಿದ್ಯಾರ್ಥಿನಿಯೊಬ್ಬಳು ಸಚಿವರ ವಿರುದ್ಧವೇ ಗುಡುಗಿದ್ದಾಳೆ. ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು (Student Hostel Seat) ಕೊಡದ ಸರ್ಕಾರದ ನೀತಿಯ ವಿರುದ್ಧ ಬಾಗಲಕೋಟೆ ಜಿಲ್ಲೆಯ (Bagalokt District) ಮುಧೋಳ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈ ಕುರಿತು ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿ, ಸನ್ಮಾನವನ್ನೂ ತಿರಸ್ಕರಿಸಿದ್ದಾಳೆ.
ಮುಧೋಳ ತಾಲೂಕಿನ ಪೆಟ್ಲೂರ ಗ್ರಾಮದ ವಿದ್ಯಾರ್ಥಿನಿ ಐಶ್ವರ್ಯಾ ಪಾಯಗೊಂಡ (Aishwarya Payagonda), ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Exam) ಶೇ. 88ರಷ್ಟು ಅಂಕ ಗಳಿಸಿದ್ದಳು. ಆಕೆಯ ಉತ್ತಮ ಸಾಧನೆಗಾಗಿ ಹೆಬ್ಬಾಳ ಗ್ರಾಮದಲ್ಲಿ ಪಿ.ಕೆ.ಪಿ.ಎಸ್. ಬ್ಯಾಂಕ್ (PKPS Bank) ಆಡಳಿತ ಮಂಡಳಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಐಶ್ವರ್ಯಾ, ತಾನು ಬಡ ಕುಟುಂಬದಿಂದ ಬಂದಿದ್ದು, ಉತ್ತಮ ಅಂಕ ಗಳಿಸಿದ್ದರೂ ಬಿಸಿಎಂ ಹಾಸ್ಟೆಲ್‌ಗೆ ಸೀಟು ಸಿಕ್ಕಿಲ್ಲ ಎಂದು ನೋವು ತೋಡಿಕೊಂಡಳು.
ನಾನು ಬಡಕುಟುಂಬದ ಮಗಳು, ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿದ್ದೇನೆ. ಆದರೆ, ನನಗೆ ಹಾಸ್ಟೆಲ್ ಸೀಟ್ ಸಿಕ್ಕಿಲ್ಲ. ಈ ವಿಚಾರವಾಗಿ ಅಧಿಕಾರಿಗಳನ್ನು ಕೇಳಿದರೆ, 'ಪರ್ಸೆಂಟೇಜ್ ಮಾಡಿದರೆ ಆಗುವುದಿಲ್ಲ, ತಿಮ್ಮಾಪುರ ಸಾಹೇಬರು (Minister RB Timmapur) ಹೇಳಿದರೆ ಮಾತ್ರ ಆಯ್ಕೆ ಮಾಡುತ್ತೇವೆ' ಎಂದು ಹೇಳಿದರು. ನಾವೇನಾದರೂ ತಿಮ್ಮಾಪುರ ಅವರ ಕಚೇರಿಗೆ ಹೋದರೆ, ನಮ್ಮನ್ನು ಮಾತನಾಡಿಸಲೇ ಇಲ್ಲ, ಎಂದು ಐಶ್ವರ್ಯಾ ಆರೋಪಿಸಿದಳು.
ಶೇ. 50 ಅಂಕ ಗಳಿಸಿದವರಿಗೆ ಸೀಟು, ಶೇ. 90-95ರಷ್ಟು ಅಂಕ ಗಳಿಸಿದ ನಮ್ಮಂತವರಿಗೆ ಇಲ್ಲ:
ಇದೆಂತಹ ವ್ಯವಸ್ಥೆ? ಶೇ. 50-55 ಅಂಕ ಗಳಿಸಿದವರಿಗೆ ಹಾಸ್ಟೆಲ್ ಸೀಟ್ ಸಿಗುತ್ತದೆ. ಆದರೆ, ಶೇ. 90-95ರಷ್ಟು ಅಂಕ ಗಳಿಸಿದ ನಮ್ಮಂತವರು ಬಸ್ಸಿನಲ್ಲಿ ಅಲೆಯಬೇಕಾಗಿದೆ. ಈ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ, ನಮ್ಮ ಕನಸುಗಳು ಕನಸಾಗಿಯೇ ಉಳಿಯುತ್ತಿವೆ' ಎಂದು ಆಕೆ ಅಸಮಾಧಾನ ವ್ಯಕ್ತಪಡಿಸಿದಳು.
ಸನ್ಮಾನ ತಿರಸ್ಕರಿಸಿದ ವಿದ್ಯಾರ್ಥಿನಿ:
ನಮಗೆ ಸನ್ಮಾನ ಬೇಡ, ಸವಲತ್ತು ಕೊಡಿ ಸಾಕು' ಎಂದು ಹೇಳಿದ ಐಶ್ವರ್ಯಾ, ಆಯೋಜಕರು ನೀಡಿದ ಸನ್ಮಾನವನ್ನು ತಿರಸ್ಕರಿಸಿ, ತನ್ನ ಆಕ್ರೋಶವನ್ನು ಹೊರಹಾಕಿದಳು. ಈ ಘಟನೆ ಸ್ಥಳದಲ್ಲಿದ್ದ ಎಲ್ಲರ ಗಮನ ಸೆಳೆದಿದ್ದು, ಹಾಸ್ಟೆಲ್ ಸೀಟು ಹಂಚಿಕೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಇದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪೆಟ್ಲೂರ ಗ್ರಾಮದ ವಿದ್ಯಾರ್ಥಿನಿಯ ಆಕ್ರೋಶದ ಧ್ವನಿಯಾಗಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟುಗಳನ್ನು ನೀಡುವಂತೆ ಒತ್ತಾಯಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ