ಖಾಕಿ ಡ್ರೆಸ್‌ನಲ್ಲಿ ಸ್ವಾಮೀಜಿ ಕಾಲಿಗೆ ಬಿದ್ದ 6 ಪೊಲೀಸರು ಟ್ರಾನ್ಸ್‌ಫರ್! ಆ ಸ್ವಾಮೀಜಿ ಯಾರು ಗೊತ್ತಾ?

Published : Mar 14, 2025, 08:09 PM ISTUpdated : Mar 15, 2025, 09:03 AM IST
ಖಾಕಿ ಡ್ರೆಸ್‌ನಲ್ಲಿ ಸ್ವಾಮೀಜಿ ಕಾಲಿಗೆ ಬಿದ್ದ 6 ಪೊಲೀಸರು ಟ್ರಾನ್ಸ್‌ಫರ್! ಆ ಸ್ವಾಮೀಜಿ ಯಾರು ಗೊತ್ತಾ?

ಸಾರಾಂಶ

ಬಾಗಲಕೋಟೆಯಲ್ಲಿ, ಪೊಲೀಸರು ಸಮವಸ್ತ್ರದಲ್ಲಿ ಸ್ವಾಮೀಜಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಆರು ಜನ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆ ಮಾಡಿದೆ. ಆಡಳಿತಾತ್ಮಕ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಕರ್ತವ್ಯದಲ್ಲಿರುವಾಗ ಶಿಸ್ತು ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಬಾಗಲಕೋಟೆ (ಮಾ.14): ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ ಸ್ವಾಮೀಜಿಯೊಬ್ಬರು ಕಾಲಿನಲ್ಲಿ ಕುಳಿತಿದ್ದಾಗ ಟ್ರಾಫಿಕ್ ಪೊಲೀಸ್ ಸೇರಿದಂತೆ ಇತರೆ ಐವರು ನಾಗರೀಕ ಪೊಲೀಸ್ ಪೇದೆಗಳು ಸಮವಸ್ತ್ರದಲ್ಲಿಯೇ ಕಾಲಿಗೆ ಬಿದ್ದು ಶೀರ್ವಾದ ಪಡೆದಿರುತ್ತಾರೆ. ಜೊತೆಗೆ, ಪೊಲೀಸರು ಸ್ವಾಮೀಜಿಯಿಂದ ಹಣವನ್ನೂ ಪಡೆದಿರುತ್ತಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ 6 ಜನ ಪೊಲೀಸರನ್ನು ವರ್ಗಾವಣೆ ಮಾಡಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆಯು ಆದೇಶ ಹೊರಡಿಸಿದೆ.

ಪೊಲೀಸರು ಸಮವಸ್ತ್ರ ಧರಿಸಿಕೊಂಡು ಸ್ವಾಮೀಜಿ ಕಾಲಿಗೆ ಪೊಲೀಸರು ನಮಸ್ಕಾರ ಮಾಡಿದ ಹಾಗೂ ಸ್ವಾಮೀಜಿಯಿಂದ ಹಣ ಪಡೆದಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಎಚ್ಚೆತ್ತುಕೊಂಡಿಡುವ ಬಾಗಲಕೋಟ ಜಿಲ್ಲೆಆ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು 6 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬಾದಾಮಿ ಪಟ್ಟಣದ ಪೊಲೀಸ್ ಠಾಣೆಯಿಂದ ಜಿಲ್ಲೆಯ ವಿವಿಧ ಗ್ರಾಮೀಣ ಠಾಣೆಗಳಿಗೆ 6 ಜನ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. 

ಎಎಸ್​​ಐ ಜಿ.ಬಿ. ದಳವಾಯಿ ಅವರನ್ನು ಹುನಗುಂದ ಠಾಣೆಗೆ, ಎಎಸ್​​ಐ ಡಿ.ಜೆ. ಶಿವಪುರ ಅವರನ್ನು ಬಾಗಲಕೋಟೆ ಗ್ರಾಮೀಣ ಠಾಣೆಗೆ, ನಾಗರಾಜ ಅಂಕೋಲೆಯನ್ನು ಬೀಳಗಿ ಪೊಲೀಸ್ ಠಾಣೆ, ಜಿ.ಬಿ. ಅಂಗಡಿ ಅವರನ್ನು ಇಳಕಲ್ ನಗರ ಠಾಣೆಗೆ, ರಮೇಶ್ ಈಳಗೇರ ಅವರನ್ನು ಬಾಗಲಕೋಟೆ ಗ್ರಾಮೀಣ ಠಾಣೆಗೆ ಹಾಗೂ ರಮೇಶ್ ಹುಲ್ಲೂರು ಅವರನ್ನು ಜಿಲ್ಲಾ ಪೊಲೀಸ್ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆ ಮೇಲೆ ಲಿಂಗ ತಾರತಮ್ಯ ಕೇಸ್; ಮಹಿಳೆಯರಿಗೆ ಗ್ಯಾರಂಟಿ ಸ್ಥಗಿತ ಮಾಡುತ್ತಾ ಸರ್ಕಾರ!

ಇನ್ನು ಸರ್ಕಾರದ ಸೇವೆಯಲ್ಲಿರುವ ಸಿಬ್ಬಂದಿ ಸಮವಸ್ತ್ರ ಧರಿಸಿಕೊಂಡು ಸೇವೆಯಲ್ಲಿರುವಾಗ ಶಿಸ್ತುಬದ್ಧವಾಗಿ ಇರುವಂತೆಯೂ ನೋಟಿಸ್ ಜಾರಿ ಮಾಡಲಾಗಿದೆ. ಇವರೆಲ್ಲರೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ಠಾಣೆ ಪೊಲೀಸ್ ಸಿಬ್ಬಂದಿ ಆಗಿದ್ದು, ಸ್ಥಳೀಯ ಸಿದ್ದನಕೊಳ್ಳದ ಶಿವಕುಮಾರ್ ಸ್ವಾಮೀಜಿ ಕಾಲಿಗೆ ನಮಸ್ಕರಿಸಿದ್ದ ವಿಡಿಯೋ ವೈರಲ್ ಆಗಿದೆ. ಈ ವೇಳೆ ಪೊಲೀಸರಿಗೆ ಸ್ವಾಮೀಜಿ ಅಬವರು ಆಶೀರ್ವಾದ ರೂಪದಲ್ಲಿ ಹಣವನ್ನು ಕೊಟ್ಟಿದ್ದಾರೆ. ಜೊತೆಗೆ, ಈ ಹಣವನ್ನು ನೀವು ಖರ್ಚು ಮಾಡದೇ ಅದನ್ನು ಸಂಗ್ರಹಿಸಿ ಇಟ್ಟು ಪೂಜೆ ಮಾಡುವಂತೆಯೂ ಸೂಚನೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ನಡೆಯ ಬಗ್ಗೆ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಜನರಿಂದ ಮತ್ತಷ್ಟು ಟೀಕೆಗಳು ಬರುವ ಮುನ್ನವೇ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಚ್ಚೆತ್ತುಕೊಂಡು ವರ್ಗಾವಣೆ ಮಾಡಿದ್ದಾರೆ.

ಇದನ್ನೂ ಓದಿ: ಒಂದು ನಂಬರ್ ಪ್ಲೇಟ್ 28 ಲಕ್ಷ ರೂ.ಗೆ ಮಾರಾಟ ಮಾಡಿದ ಸರ್ಕಾರ! ಒಂದೇ ದಿನದಲ್ಲಿ 1.11 ಕೋಟಿ ಕಮಾಯಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್