Free Booster Dose: ಇಂದಿನಿಂದ ರಾಜ್ಯದಲ್ಲಿ ಉಚಿತ 3ನೇ ಡೋಸ್‌ ಕೋವಿಡ್‌ ಲಸಿಕೆ

By Govindaraj SFirst Published Jul 15, 2022, 5:00 AM IST
Highlights

ಜು.15ರ ಶುಕ್ರವಾರದಿಂದ ರಾಜ್ಯಾದ್ಯಂತ ‘ಕೊರೋನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ’ ಆರಂಭವಾಗುತ್ತಿದ್ದು, 18-59 ವರ್ಷದವರಿಗೆ ಕೊರೋನಾ ಲಸಿಕೆ ಮೂರನೇ ಡೋಸ್‌ ಉಚಿತವಾಗಿ ನೀಡಲಾಗುತ್ತದೆ.

ಬೆಂಗಳೂರು (ಜು.15): ಜು.15ರ ಶುಕ್ರವಾರದಿಂದ ರಾಜ್ಯಾದ್ಯಂತ ‘ಕೊರೋನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ’ ಆರಂಭವಾಗುತ್ತಿದ್ದು, 18-59 ವರ್ಷದವರಿಗೆ ಕೊರೋನಾ ಲಸಿಕೆ ಮೂರನೇ ಡೋಸ್‌ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೂ ಮುನ್ನ ಏಪ್ರಿಲ್‌ 10ರಿಂದ ಆರೋಗ್ಯ, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತವಾಗಿ 3ನೇ ಡೋಸ್‌ ಲಭ್ಯವಿತ್ತು. 

ಉಳಿದವರಿಗೆ 225 ರು. ಶುಲ್ಕ ನಿಗದಿ ಮಾಡಲಾಗಿತ್ತು. ಹೀಗಾಗಿ, ಮೂರು ತಿಂಗಳಲ್ಲಿ ಅವಧಿಯಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷ ಮಂದಿ ಮಾತ್ರವೇ ಶುಲ್ಕ ನೀಡಿ ಮೂರನೇ ಡೋಸ್‌ ಪಡೆದಿದ್ದಾರೆ. ಉಳಿದಂತೆ ಒಂದು ಕೋಟಿಗೂ ಅಧಿಕ ಮಂದಿ ಅರ್ಹತೆ ಪಡೆದಿದ್ದರೂ, ಲಸಿಕೆ ಪಡೆಯದೆ ದೂರ ಉಳಿದಿದ್ದರು. ಸದ್ಯ ಉಚಿತವಾಗಿರುವ ಹಿನ್ನೆಲೆ ಹೆಚ್ಚಿನ ಮಂದಿ ಆಗಮಿಸಿ ಮೂರನೇ ಡೋಸ್‌ ಪಡೆಯುವ ನಿರೀಕ್ಷೆ ಇದೆ.

Booster Dose: 3ನೇ ಡೋಸ್‌ ಪಡೆದಿದ್ದು ಬರೀ 15% ಜನ!

ರಾಜ್ಯ ಆರೋಗ್ಯ ಇಲಾಖೆಯು ಎಂಟು ಸಾವಿರಕ್ಕೂ ಅಧಿಕ ಆರೋಗ್ಯ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್‌ ಲಸಿಕೆ ಉಚಿತವಾಗಿ ನೀಡಲು ನಿರ್ಧರಿಸಿದೆ. 75 ದಿನಗಳ ಕಾಲ ಅಭಿಯಾನ ನಡೆಯುತ್ತಿದ್ದು, ಸೆ.30ರಂದು ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ 4.34 ಕೋಟಿ ಮಂದಿಗೆ ಮೂರನೇ ಡೋಸ್‌ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಜಿಲ್ಲಾ, ತಾಲೂಕು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆ ಲಭ್ಯವಿರಲಿದೆ. 

ಎರಡನೇ ಡೋಸ್‌ ಪಡೆದು 6 ತಿಂಗಳು ಪೂರ್ಣಗೊಳಿಸಿದವರು ಸಮೀಪದ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆಯಬಹುದು. ಈ ಹಿಂದಿನಂತೆಯೇ ಬುಧವಾರ ಲಸಿಕಾ ಮೇಳ, ಮನೆಮನೆ ಲಸಿಕಾ ಮಿತ್ರ ಹಾಗೂ ಕೆಲಸದ ಸ್ಥಳಗಳಲ್ಲಿ ಲಸಿಕಾ ಕೇಂದ್ರ ಆರಂಭಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

75 ದಿನಗಳ ವಿಶೇಷ 'ಕೋವಿಡ್ ಲಸಿಕಾ ಅಮೃತ ಮಹೋತ್ಸವ' ಅಭಿಯಾನ ರಾಜ್ಯಾದ್ಯಂತ ಇಂದಿನಿಂದ ಆರಂಭವಾಗಲಿದೆ.

💉 2ನೇ ಡೋಸ್ ಪಡೆದುಕೊಂಡ ನಂತರ 6 ತಿಂಗಳು ಅಥವಾ 26 ವಾರ ಪೂರ್ಣಗೊಳಿಸಿರುವ 18 ವರ್ಷ ಮೇಲ್ಪಟ್ಟ ಎಲ್ಲರೂ ಜುಲೈ 15ರಿಂದ ಸೆಪ್ಟೆಂಬರ್ 30ರವರೆಗೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು.

1/3 pic.twitter.com/BHF4R49URq

— Dr Sudhakar K (@mla_sudhakar)

ದುಡ್ಡು ಕೊಡ್ತೀನಿ ಅಂದ್ರೂ ಸಿಗ್ತಿಲ್ಲ ಬೂಸ್ಟರ್‌ ಡೋಸ್‌..!

ಮೊಬೈಲ್‌ ನಂಬರ್‌ನೊಂದಿಗೆ ತೆರಳಿ: ಮೂರನೇ ಡೋಸ್‌ ಪಡೆಯುವವರು ಈ ಹಿಂದೆ ಮೊದಲ ಎರಡು ಡೋಸ್‌ ಪಡೆಯುವ ವೇಳೆ ನೀಡಿದ್ದ ಮೊಬೈಲ್‌ ನಂಬರ್‌ ನೀಡಿ ಸ್ಥಳದಲ್ಲಿಯೇ ನೋಂದಣಿ ಮಾಡಿಸಿ ಮೂರನೇ ಡೋಸ್‌ ಪಡೆಯಬಹುದು. ನೋಂದಣಿ ಸಂದರ್ಭದಲ್ಲಿಯೇ ಮೊದಲೆರಡು ಡೋಸ್‌ ಯಾವ ಲಸಿಕೆ ನೀಡಲಾಗಿತ್ತು ಎಂಬ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಮೂರನೇ ಡೋಸ್‌ ಆಗಿ ಅದೇ ಲಸಿಕೆಯನ್ನು ನೀಡಲಾಗುತ್ತದೆ.

click me!