ನಾಳೆ ಅಯೋಧ್ಯೆ ಬಾಲರಾಮ ಪ್ರಾಣಪ್ರತಿಷ್ಠೆ: ಕಾಫಿನಾಡು ಚಿಕ್ಕಮಗಳೂರಲ್ಲಿ ಸಂಭ್ರಮ!

By Ravi Janekal  |  First Published Jan 21, 2024, 7:47 PM IST

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ 500 ವರ್ಷಗಳ ನಿರೀಕ್ಷೆ ನಾಳೆ (ಸೋಮವಾರ) ಕೈಗೂಡುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದೆಲ್ಲಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.21): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ 500 ವರ್ಷಗಳ ನಿರೀಕ್ಷೆ ನಾಳೆ (ಸೋಮವಾರ) ಕೈಗೂಡುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದೆಲ್ಲಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ.ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಕಟೌಟ್ಗಳು ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿದೆ.ಹನುಮಂತಪ್ಪ ವೃತ್ತ, ಸಿಂಡಿಕೇಟ್ ಬ್ಯಾಂಕ್ ವೃತ್ತ, ಓಂಕಾರೇಶ್ವರ ಗಣಪತಿ ದೇವಸ್ಥಾನ ಇನ್ನಿತರೆ ಕಡೆಗಳಲ್ಲಿ ಕೇಸರಿ ಬಾವುಟ, ಬಂಟಿಂಗ್ಗಳನ್ನು ಅಳವಡಿಸಲಾಗಿದೆ.ಐಜಿ ರಸ್ತೆಯ ಶ್ರೀರಾಮ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ನಾಳೆ ವಿಶೇಷ ಪೂಜೆ, ರಾಮ ಭಜನೆ, ಸಂಕೀರ್ತನೆಗಳು, ಸಾರ್ವಜನಿಕ ಅನ್ನಸಂತರ್ಪಣೆ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Tap to resize

Latest Videos

ದೇವಸ್ಥಾನಗಳಲ್ಲಿ ವಿಶೇಷ ಪೂಜೆ : 

ಅಯೋಧ್ಯ ರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಜಿಲ್ಲೆದ್ಯಾಂತ ಹಲವು ಸಂಘ ಸಂಸ್ಥೆಗಳಿಂದ ರಾಮ ನಾಮ ಜಪಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.  ಹಿರೇಮಗಳೂರು ಕೋದಂಡರಾಮೇಶ್ವರ ದೇವಾಲಯ ವಿಶೇಷ ಪೂಜೆ ಹೋಮ ಹವನದ ಜೊತೆಗೆ ಇಡೀ ದಿನ ರಾಮ ನಾಮ ಜಪ ನಡೆಯುಲಿದೆ. ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯ ಶೃಂಗೇಶ್ವರನ ಸನ್ನಿಧಿಯಲ್ಲಿ ರಾಮತಾರಕ ಹೋಮ ಜಪ ವಿಶೇಷ ಪೂಜೆ ನಡೆಯುಲಿದೆ. ಅಲ್ಲದೆ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಿಕೊಳ್ಳಲು ನಿವಾಸಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಧಾನ ಮಂತ್ರಿಗಳ ಕೋರಿಕೆ ಹಿನ್ನೆಲೆಯಲ್ಲಿ ಮನೆಗಳಲ್ಲಿ ಹಣತೆಗಳನ್ನು ಹಚ್ಚಲು ಸಜ್ಜಾಗಿದ್ದಾರೆ. 

 

ಕಾಫಿನಾಡಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ; ಹಿಂದು ಯುವತಿ ಜೊತೆಗಿದ್ದ ಅನ್ಯಕೋಮಿನ ಯುವಕ, ಸ್ನೇಹಿತರ ಮೇಲೆ ಹಲ್ಲೆ!

ತೋರಣಗಳು, ಧ್ವಜಗಳು ಭರ್ಜರಿಯಾಗಿ ಮಾರಾಟ : 

ರಾಮಲಲ್ಲಾರ ಪ್ರಾಣ ಪ್ರತಿಷ್ಠೆ ಕಾರಣಕ್ಕೆ ಹಲವು ಮಂದಿ ಹಲವು ದಿನಗಳಿಂದ ಮಾಂಸಹಾರವನ್ನು ತ್ಯಜಿಸಿದ್ದಾರೆ. ಪ್ರಾಣ ಪ್ರತಿಷ್ಠೆ ಮುನ್ನಾದಿನವಾದ ಭಾನುವಾರವೂ ಬಹುತೇಕರು ಮಾಂಸಹಾರ ಸೇವನೆಯಿಂದ ದೂರ ಉಳಿದ ಪರಿಣಾಮ ನಗರದಲ್ಲಿ ಕುರಿ, ಕೋಳಿ ಮಾಂಸದ ಅಂಗಡಿಗಳಲ್ಲಿ ವ್ಯಾಪಾರ ಕ್ಷೀಣಿಸಿದೆ.ಪ್ರತಿಯೊಬ್ಬರ ಬಾಯಲ್ಲೂ ಅಯೋಧ್ಯೆ ಶ್ರೀರಾಮ ಮಂದಿರದ್ದೇ ಚರ್ಚೆ ನಡೆಯುತ್ತಿದೆ. ಶ್ರೀರಾಮನ ಭಾವ ಚಿತ್ರಗಳಿರುವ ರುಮಾಲುಗಳು, ತೋರಣಗಳು, ಧ್ವಜಗಳು ಭರ್ಜರಿಯಾಗಿ ಮಾರಾಟವಾಗಿವೆ. ಸೋಮವಾರ ಮಧ್ಯಾಹ್ನ ೧೨.೨೯ ರಿಂದ ೧೨.೩೦ ರ ವರೆಗೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಜರುಗಲಿದ್ದು, ಈ ಕ್ಷಣಕ್ಕಾಗಿ ಜನತೆ ಭಕ್ತಿ, ಭಾವದಿಂದ ಕುತೂಹಲದ ನಿರೀಕ್ಷೆಯಲ್ಲಿದ್ದಾರೆ.

 

ಜ.22 ರಂದು ರಜೆ ಬೇಕೋ ಬೇಡ್ವೋ?: ನಾನೂ ಹಿಂದೂನೇ, ಆದರೆ ನನಗೆ ರಜೆ ಬೇಡ ಎಂದ ಮಹಿಳೆ!

click me!