ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್

By Kannadaprabha NewsFirst Published Oct 16, 2021, 7:15 AM IST
Highlights
  • ಸಾರಿಗೆ ನೌಕರರ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ
  • ಆಗಸ್ಟ್‌ ತಿಂಗಳ ಬಾಕಿ ಶೇ.50ರಷ್ಟುವೇತನ ಪಾವತಿಗಾಗಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಒಟ್ಟು 171.69 ಕೋಟಿ ರು. ಅನುದಾನ ಬಿಡುಗಡೆ

 ಬೆಂಗಳೂರು (ಅ.16):  ಸಾರಿಗೆ ನೌಕರರ (Transport Department) ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ (Karnataka Govt), ಆಗಸ್ಟ್‌ ತಿಂಗಳ ಬಾಕಿ ಶೇ.50ರಷ್ಟು ವೇತನ ಪಾವತಿಗಾಗಿ ರಾಜ್ಯದ ನಾಲ್ಕು ರಸ್ತೆ (Road) ಸಾರಿಗೆ ನಿಗಮಗಳಿಗೆ ಒಟ್ಟು 171.69 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಕೆಎಸ್‌ಆರ್‌ಟಿಸಿಗೆ (KSRTC) 55.48 ಕೋಟಿ ರು., ಬಿಎಂಟಿಸಿಗೆ 50.58 ಕೋಟಿ ರು., ಎನ್‌ಡಬ್ಲ್ಯೂಕೆಆರ್‌ಟಿಸಿಗೆ (NWRTC) 34.41 ಕೋಟಿ ರು. ಹಾಗೂ ಕೆಕೆಆರ್‌ಟಿಸಿಗೆ 31.23 ಕೋಟಿ ರು. ಸೇರಿದಂತೆ ಒಟ್ಟು 171.69 ಕೋಟಿ ರು. ಅನುದಾನ ಬಿಡುಗಡೆಗೊಳಿಸಿದೆ. ಆಯುಧ ಪೂಜೆ ಹಾಗೂ ನಾಡಹಬ್ಬ ದಸರಾಗೂ (Dasara) ಬಂದರೂ ವೇತನ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದ ಸಾರಿಗೆ ನೌಕರರು ಇದೀಗ ಕೊಂಚ ಸಮಾಧಾನಗೊಂಡಿದ್ದಾರೆ.

Bengaluru| 300 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ BMTC ಹಸಿರು ನಿಶಾನೆ

ಕೊರೋನಾದಿಂದ (Corona) ಸಾರಿಗೆ ಆದಾಯ (income) ಕುಸಿತವಾಗಿ ಆರ್ಥಿಕ ಸಂಕಷ್ಟದಲ್ಲಿರುವ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಕಳೆದ ಒಂದು ವರ್ಷದಿಂದ ಸರ್ಕಾರದಿಂದ ಅನುದಾನ ಪಡೆದು ನೌಕರರಿಗೆ ವೇತನ ಪಾವತಿಸುತ್ತಿವೆ. ಕೊರೋನಾ ಪೂರ್ವದಲ್ಲಿ ಪ್ರತಿ ತಿಂಗಳ 10ರೊಳಗೆ ವೇತನ ಪಡೆಯುತ್ತಿದ್ದ ಸಾರಿಗೆ ನೌಕರರಿಗೆ ಕೊರೋನಾ ಬಳಿಕ ಸಕಾಲಕ್ಕೆ ವೇತನ ಸಿಗುತ್ತಿಲ್ಲ. ಆಗಸ್ಟ್‌ ತಿಂಗಳ ವೇತನದ ಶೇ.50ರಷ್ಟನ್ನು ಸೆಪ್ಟೆಂಬರ್‌ನಲ್ಲಿ ಪಾವತಿಸಲಾಗಿತ್ತು. ಇದೀಗ ಸೆಪ್ಟೆಂಬರ್‌ ಕಳೆದರೂ ಉಳಿದ ಶೇ.50ರಷ್ಟುವೇತನ ಪಾವತಿಸಿರಲಿಲ್ಲ.

ಹೀಗಾಗಿ ಸಾರಿಗೆ ನೌಕರರು ಕೂಡಲೇ ಬಾಕಿ ವೇತನ (Salary) ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಸರ್ಕಾರ ಆಗಸ್ಟ್‌ ತಿಂಗಳ ಬಾಕಿ ಶೇ.50ರಷ್ಟುವೇತನ ಪಾವತಿಗೆ ಸಾರಿಗೆ ನಿಗಮಗಳಿಗೆ ಅನುದಾನ ಬಿಡುಗಡೆಗೊಳಿಸಿದೆ. ಅಕ್ಟೋಬರ್‌ ಅರ್ಧ ತಿಂಗಳು ಕಳೆದರೂ ಸೆಪ್ಟೆಂಬರ್‌ ವೇತನ ಬಿಡುಗಡೆಯಾಗಿಲ್ಲ. ಅಕ್ಟೋಬರ್‌ ಕಡೆಯ ವಾರ ಅಥವಾ ನವೆಂಬರ್‌ನಲ್ಲಿ ಸೆಪ್ಟೆಂಬರ್‌ ಬಾಕಿ ವೇತನ ಪಾವತಿಸುವ ಸಾಧ್ಯತೆಯಿದೆ.

100 ರು. ಕೊಟ್ಟ ಸರ್ಕಾರ

 

ಆಯುಧ ಪೂಜೆ(Ayudha Puja) ದಿನ ರಾಜ್ಯ ರಸ್ತೆ ಸಾರಿಗೆ ನಿಗಮಗಳ(KSRTC) ಬಸ್‌ಗಳು ಹಾಗೂ ಯಂತ್ರೋಪಕರಣಗಳನ್ನು ಸಾಂಪ್ರದಾಯಿಕವಾಗಿ ಪೂಜಿಸುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಪ್ರತಿ ಬಸ್‌ಗೆ(Bus) ತಲಾ 100 ರು. ಹಾಗೂ ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1 ಸಾವಿರ ರು. ಮುಂಗಡ ನಗದು ಪಡೆದು ಪೂಜಾ ಕಾರ್ಯ ನೆರವೇರಿಸಬೇಕು ಎಂದು ಸೂಚಿಸಿದ್ದಾರೆ. ಇದೇ ವೇಳೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಮಸ್ತ ನೌಕರರು ಹಾಗೂ ಅಧಿಕಾರಿಗಳಿಗೆ ನಾಡಹಬ್ಬ ದಸರಾಕ್ಕೆ(Dasara) ಸಚಿವರು ಶುಭಾಶಯ ಕೋರಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ(Chamundeshwari Devi) ಎಲ್ಲರಿಗೂ ಸುಖ, ಸಂತೋಷ, ಆರೋಗ್ಯವನ್ನು ಅನುಗ್ರಹಿಸಲಿ. ಸಾಂಕ್ರಾಮಿಕದ ಕರಿನೆರಳು ದೂರಸರಿದು, ಸಂಭ್ರಮ, ಸಮೃದ್ಧಿಗಳ ಹೊಂಗಿರಣ ಮೂಡಲಿ ಎಂದು ಸಚಿವರು ಹಾರೈಸಿದ್ದಾರೆ.

click me!