ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರನ್ನು ಅಟಲ್ ಬಿಹಾರಿ ವಾಜಪೇಯಿ 9ನೇ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಟಲ್‌ಜಿ ಸಂಸ್ಕಾರ ಭಾರತ್ ಪ್ರತಿಷ್ಠಾನದ ಮಖ್ಯಸ್ಥ ಬಿ.ಆರ್.ನಟರಾಜ್ ಜೋಯಿಸ್ ತಿಳಿಸಿದ್ದಾರೆ.
ಮೈಸೂರು (ಡಿ.26): ಮತ್ತು ಸುವರ್ಣ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ರವಿ ಹೆಗಡೆ ಅವರನ್ನು ಅಟಲ್ ಬಿಹಾರಿ ವಾಜಪೇಯಿ 9ನೇ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಟಲ್ ಜಿ ಸಂಸ್ಕಾರ ಭಾರತ್ ಪ್ರತಿಷ್ಠಾನದ ಮಖ್ಯಸ್ಥ ಬಿ.ಆರ್. ನಟರಾಜ್ ಜೋಯಿಸ್ ತಿಳಿಸಿದ್ದಾರೆ.
ಸಂಧ್ಯಾ ಸುರಕ್ಷಾ ಟ್ರಸ್ಟ್, ಜಿಲ್ಲಾ ಬ್ರಾಹ್ಮಣ ಮಹಾಸಭಾ, ಶಾಕಂಬರಿ ಧಾರ್ಮಿಕ ಶ್ರದ್ಧಾ ಕೇಂದ್ರ,ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರೀಕ ವೇದಿಕೆಯ ಸಹಯೋಗದಲ್ಲಿ ಡಿ.28 ರಂದು ಬೆಳಗ್ಗೆ10.30ಕ್ಕೆ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ಗಾನಭಾರತೀ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಸ್ ಗುಂಡೂರಾವ್ ಅವರ ಸಮ್ಮಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
undefined
ಕೇವಲ ಕಾಂಗ್ರೆಸ್ ಅಲ್ಲ, ಎಲ್ಲರ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್
ಇದೇ ಸಂದರ್ಭದಲ್ಲಿ ಕಾಮಾಕ್ಷಿ ಆಸ್ಪತ್ರೆ ಮುಖ್ಯಸ್ಥ ಮಹೇಶ್ ಶೆಣೈ ಅವರಿಗೆ ಆರ್. ಗುಂಡೂರಾವ್ 9ನೇ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಬ್ರಾಹ್ಮಣ ಸಮಾಜದ ಮುಖಂಡ ಕೆ. ರಘುರಾಂ ವಾಜಪೇಯಿ ಮಾತನಾಡಿ, ಜಿಲ್ಲಾ ಬ್ರಾಹ್ಮಣ ಮಹಿಳಾ ಸಮ್ಮೇಳನ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಸುವರ್ಣ ವರ್ಷದ ಮಹಾ ಸಮ್ಮೇಳನ 'ವಿಶ್ವಾಮಿತ್ರ' ಕಾರ್ಯಕ್ರಮದ ಸವಿನೆನಪಿಗಾಗಿ ಬ್ರಾಹ್ಮಣ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ಸನ್ಮಾನ ಹಾಗೂ 2025ರ ದಿನದರ್ಶಿಕೆ ಬಿಡುಗಡೆ ಸಮಾರಂಭ ನಡೆಯಲಿದೆ ಎಂದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಸಕ ಟಿ.ಎಸ್. ಶ್ರೀವತ್ಸ, ಉದ್ಯಮಿ ರಘುನಾಥ, ಧರ್ಮ ಪ್ರವರ್ತಕ ಇಳೈ ಆಳ್ವಾರ್ ಸ್ವಾಮೀಜಿ, ವಿಪ್ರ ಮುಖಂಡ ನವೀನ್ ಕುಮಾರ್ ಪಾಲ್ಗೊಳ್ಳುವರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾದ ಪುಷ್ಪಾ ಅಯ್ಯಂಗಾರ್, ಬಿ.ವಿ. ಶೇಷಾದ್ರಿ, ಹಿರಿಯ ವಿಪ್ರ ಮುಖಂಡ ಆರ್. ಲಕ್ಷ್ಮೀಕಾಂತ್, ಕಲ್ಯಾಣ ಭವನ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸ್, ಬಬ್ಬರು ಕಮ್ಮೆ ಮಹಾಸಭಾ ಅಧ್ಯಕ್ಷ ಎನ್. ಸೂರ್ಯನಾರಾಯಣ್, ಕೌಶಿಕ ಸಂಕೇತಿ ಸಂಘದ ಅಧ್ಯಕ್ಷೆ ಸರೋಜಾ,
ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ 6ನೇ ವೈದ್ಯಕೀಯ ಕಾಲೇಜು ಆರಂಭಕ್ಕೆ ಸಿದ್ಧತೆ
ಬೆಟ್ಟದಪುರ ಸಂಕೇತಿ ಸಂಘದ ಅಧ್ಯಕ್ಷೆ ಅನ್ನಪೂರ್ಣ, ಮುಲಕನಾಡು ಸಭಾದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಮೂಗೂರು ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ವಿಶ್ವನಾಥಯ್ಯ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ, ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ, ಜಿಲ್ಲಾ ಕಸಾಪ ಕಾರ್ಯದರ್ಶಿ ಮ.ನ. ಲತಾ ಮೋಹನ್ ಅವರನ್ನು ಗೌರವಿಸಲಾಗುವುದು ಎಂದು ಅವರು ತಿಳಿಸಿದರು. ಇದೇ ವೇಳೆ ಮೈಸೂರಿನ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಗುವುದು ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಆರ್. ನಟರಾಜ ಜೋಯಿಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಲತಾ ಮೋಹನ್, ವಿಜಯಲಕ್ಷ್ಮಿ ಇದ್ದರು.