Aero India 2025: ಬೆಂಗ್ಳೂರಲ್ಲಿ ಏಷ್ಯಾದ ಅತಿದೊಡ್ಡ ಏರ್‌ ಶೋ ಆರಂಭ

Published : Feb 11, 2025, 05:30 AM IST
Aero India 2025: ಬೆಂಗ್ಳೂರಲ್ಲಿ ಏಷ್ಯಾದ ಅತಿದೊಡ್ಡ ಏರ್‌ ಶೋ ಆರಂಭ

ಸಾರಾಂಶ

90 ದೇಶಗಳು ಏರ್‌ ಶೋದಲ್ಲಿ ಪಾಲ್ಗೊಂಡಿದ್ದು, 70 ವಿಮಾನಗಳು ಚಿತ್ತಾಕರ್ಷಕ ಪ್ರದರ್ಶನ ನೀಡಲಿವೆ. 5 ದಿನಗಳ ಅವಧಿಯಲ್ಲಿ 30 ದೇಶಗಳ ರಕ್ಷಣಾ ಮಂತ್ರಿಗಳು ಹಾಗೂ 7 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.

ಬೆಂಗಳೂರು(ಫೆ.11):  ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿರುವ, ಐದು ದಿನಗಳ ಕಾಲ ನಡೆಯಲಿರುವ 15ನೇ ಆವೃತ್ತಿಯ ‘ಏರೋ ಇಂಡಿಯಾ’ಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸೋಮವಾರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸೋಮವಾರ ಚಾಲನೆ ನೀಡಿದರು. 

90 ದೇಶಗಳು ಏರ್‌ ಶೋದಲ್ಲಿ ಪಾಲ್ಗೊಂಡಿದ್ದು, 70 ವಿಮಾನಗಳು ಚಿತ್ತಾಕರ್ಷಕ ಪ್ರದರ್ಶನ ನೀಡಲಿವೆ. 5 ದಿನಗಳ ಅವಧಿಯಲ್ಲಿ 30 ದೇಶಗಳ ರಕ್ಷಣಾ ಮಂತ್ರಿಗಳು ಹಾಗೂ 7 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.

ಏಷ್ಯಾದ ಅತಿದೊಡ್ಡ ಏರ್ ಶೋಗೆ ಬೆಂಗಳೂರೇ ವೇದಿಕೆ | Aero India 2025 | Suvarna News

ಶಕ್ತಿ, ಸಂಶೋಧನೆಯ ಮಹಾ ಕುಂಭಮೇಳ

ಪ್ರಯಾಗರಾಜ್‌ನಲ್ಲಿ ದೇಶದ ಭಕ್ತಿ ಸಂಸ್ಕೃತಿಯ ಪ್ರತಿರೂಪವಾದ ಮಹಾಕುಂಭ ನಡೆಯುತ್ತಿದ್ದರೆ, ಯಲಹಂಕ ವಾಯುನೆಲೆಯಲ್ಲಿ ದೇಶದ ಶಕ್ತಿ ಹಾಗೂ ಸಂಶೋಧನೆ ಅನಾವರಣ ಮಾಡುವ ಮಹಾ ಕುಂಭಮೇಳ ಶುರುವಾಗಿದೆ. ಈ ಸಮ್ಮೇಳನ ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹುಬ್ಬಳ್ಳಿ: ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರಿಡಲು ಆಗ್ರಹ; ಜೋಶಿ ಕಚೇರಿ ಮುಂದೆ ಪೂಜಾ ಗಾಂಧಿ, ಕೋನರೆಡ್ಡಿ ಪ್ರತಿಭಟನೆ!
ರಾಯಚೂರು: ಬಸ್ ಇಲ್ಲದೆ ರಾತ್ರಿವರೆಗೆ ಪರದಾಡಿದ ಶಾಲಾ ಮಕ್ಕಳು; ಅಧಿಕಾರಿಗಳಿಗೆ ಬೆವರಿಳಿಸಿದ ಶಾಸಕಿ ಕರೆಮ್ಮ ನಾಯಕ್!