ಪೇಜ್‌ ವ್ಯೂವ್ಸ್‌ನಲ್ಲಿ ಏಷ್ಯಾನೆಟ್‌ ನ್ಯೂಸ್‌ ನಂ. 1; ಕನ್ನಡಿಗರಿಗೆ ಧನ್ಯವಾದ

Published : Jun 30, 2022, 12:49 PM ISTUpdated : Jul 01, 2022, 01:33 PM IST
ಪೇಜ್‌ ವ್ಯೂವ್ಸ್‌ನಲ್ಲಿ ಏಷ್ಯಾನೆಟ್‌ ನ್ಯೂಸ್‌ ನಂ. 1; ಕನ್ನಡಿಗರಿಗೆ ಧನ್ಯವಾದ

ಸಾರಾಂಶ

ComScore Ranking: ಕನ್ನಡ ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಏಷಿಯಾನೆಟ್‌ ನ್ಯೂಸ್ ಕನ್ನಡ ಅತಿಹೆಚ್ಚು ಪೇಜ್‌ ವ್ಯೂವ್ಸ್‌ ಪಡೆಯುವ ಮೂಲಕ ಮೊದಲ ಸ್ಥಾನಕ್ಕೇರಿದೆ. ಪ್ರತಿಸ್ಪರ್ಧಿಗಳೆಲ್ಲರನ್ನೂ ಹಿಂದಿಕ್ಕಿ ಅತಿ ಹೆಚ್ಚು ಓದುಗರನ್ನು ಮತ್ತು ಅತಿ ಹೆಚ್ಚು ಎಂಗೇಜ್‌ಮೆಂಟ್‌ ಪಡೆದು ಕಾಮ್‌ಸ್ಕೋರ್‌ ಪಟ್ಟಿಯಲ್ಲಿ ನಂಬರ್‌ 1 ಆಗಿದೆ. ಏಷಿಯಾನೆಟ್‌ ತಂಡವನ್ನು ಬೆಂಬಲಿಸಿ, ಪ್ರೋತ್ಸಾಹಿಸುತ್ತಿರುವ ಎಲ್ಲ ಕನ್ನಡಿಗರಿಗೆ ವಂದನೆಗಳು. 

ಬೆಂಗಳೂರು: ಏಷ್ಯಾನೆಟ್‌ ನ್ಯೂಸ್‌ ಕನ್ನಡ ವೆಬ್‌ಸೈಟ್‌ ಮೇ ತಿಂಗಳ ಕಾಮ್‌ಸ್ಕೋರ್‌ ಶ್ರೇಣಿಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. 4 ಕೋಟಿ 10 ಲಕ್ಷಕ್ಕೂ ಅಧಿಕ ಪೇಜ್‌ ವ್ಯೂವ್ಸ್‌ ಪಡೆದು ಓದುಗರನ್ನು ಅತಿ ಹೆಚ್ಚು ಎಂಗೇಜ್‌ ಮಾಡಿದ ಹೆಗ್ಗಳಿಕೆ ಏಷ್ಯಾನೆಟ್‌ ನ್ಯೂಸ್‌ ಕನ್ನಡಕ್ಕೆ ಸಂದಿದೆ. ಕನ್ನಡ ಡಿಜಿಟಲ್‌ ಮಾರುಕಟ್ಟೆಯಲ್ಲಿ ಕನ್ನಡದ ಎಲ್ಲ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳೂ ವೆಬ್‌ಸೈಟ್‌ಗಳನ್ನು ಹೊಂದಿದ್ದು, ಪ್ರತಿ ತಿಂಗಳು ComScore Ranking ಪಟ್ಟಿ ಬಿಡುಗಡೆಯಾಗುತ್ತದೆ. ಮೇ ತಿಂಗಳಲ್ಲಿ ಏಷ್ಯಾನೆಟ್‌ ನ್ಯೂಸ್‌ ಕನ್ನಡದ ಇತರ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ, ಜನಪ್ರಿಯ ವೆಬ್‌ಸೈಟ್‌ ಆಗಿ ಹೊರಹೊಮ್ಮಿದೆ. ಕನ್ನಡಿಗರ ಬೆಂಬಲವಿಲ್ಲದಿದ್ದರೆ ಈ ಸಾಧನೆ ಏಷ್ಯಾನೆಟ್‌ ನ್ಯೂಸ್‌ ಕನ್ನಡ ತಂಡಕ್ಕೆ ಅಸಾಧ್ಯವಾಗಿತ್ತು. ನಿಷ್ಪಕ್ಷಪಾತ, ಖಚಿತ, ಪರಿಪಕ್ವ ಮತ್ತು ನೇರ ವರದಿಗಾರಿಕೆಯನ್ನು ಮತ್ತು ಲೇಖನಗಳನ್ನು ಅಪ್ಪಿಕೊಂಡು ಮೊದಲ ಸ್ಥಾನಕ್ಕೆ ತಲುಪಿಸಿದ ಎಲ್ಲ ಓದುಗರಿಗೆ ಏಷ್ಯಾನೆಟ್‌ ತಂಡದಿಂದ ವಂದನೆಗಳು. 

ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಕರ್ನಾಟಕದಲ್ಲಿ ಅತಿದೊಡ್ಡ ನೆಟ್‌ವರ್ಕ್‌ ಹೊಂದಿರುವ ಸಂಸ್ಥೆ. ಕನ್ನಡಪ್ರಭ, ಸುವರ್ಣ ನ್ಯೂಸ್‌ ಕನ್ನಡಿಗರ ಮನಸ್ಸಿನಲ್ಲಿ ಗಟ್ಟಿಯಾಗಿ ಸ್ಥಾನ ಪಡೆದಿರುವ ಎರಡು ಬೃಹತ್‌ ಮಾಧ್ಯಮವಾಗಿದೆ. ಕನ್ನಡಪ್ರಭ ದಶಕಗಳಿಂದ ಮನೆಮನೆಗಳನ್ನು ತಲುಪಿದರೆ, ಕಳೆದ 14 ವರ್ಷಗಳಿಂದ ಕರ್ನಾಟಕದ ಜನರ ಮನೆ ಮಾತಾಗಿದೆ. ಸಮಾಜಮುಖಿ, ಜನಪರ ಕಾಳಜಿಯೇ ಏಷ್ಯಾನೆಟ್‌ ನ್ಯೂಸ್‌ ಸಮೂಹ ಸಂಸ್ಥೆಯ ಜೀವಾಳ. ಜನಪರ ಕಾಳಜಿ ಹೊತ್ತ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಸ್ಥೆ ಪ್ರತಿನಿತ್ಯ ಮಾಡುತ್ತಲೇ ಇರುತ್ತದೆ. ಜನರ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ತಲುಪಿಸಿ ಪರಿಹಾರ ಕೊಡಿಸುವ ಸುದ್ದಿಗಳನ್ನು ಸಂಸ್ಥೆ ಮಾಡುತ್ತಲೇ ಬಂದಿವೆ. 

ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ರಾಜ್ಯಾದ್ಯಂತ ವರದಿಗಾರರನ್ನು ಹೊಂದಿದೆ. ಕನ್ನಡ ಮಾಧ್ಯಮದಲ್ಲಿ ಪತ್ರಿಕೆ, ಟಿವಿ ಮತ್ತು ಡಿಜಿಟಲ್‌ ಮಾಧ್ಯಮವನ್ನು ಹೊಂದಿರುವ ಬೃಹತ್‌ ಸಮೂಹ ಸಂಸ್ಥೆ ಏಷ್ಯಾನೆಟ್‌. ಪತ್ರಿಕೆ ಮತ್ತು ವಾಹಿನಿಯ ಎಲ್ಲಾ ವರದಿಗಳು ವೆಬ್‌ಸೈಟ್‌ ಮೂಲಕವೂ ಜನರನ್ನು ತಲುಪುತ್ತಿವೆ. ಅತಿದೊಡ್ಡ ನೆಟ್‌ವರ್ಕ್‌ ಹೊಂದಿರುವುದೇ ಏಷ್ಯಾನೆಟ್‌ನ ದೊಡ್ಡ ಬಲ. ಏಷ್ಯಾನೆಟ್‌ ನೆಟ್‌ವರ್ಕ್‌ ಮೂಲಕ ನಾವು ರಾಜ್ಯದ ಪ್ರತಿಯೊಂದು ಹಳ್ಳಿಯನ್ನೂ ತಲುಪಲು ಸಾಧ್ಯವಾಗಿದೆ. ಪತ್ರಿಕೆ ಹೋಗದ ಕಡೆ ವಾಹಿನಿ, ವಾಹಿನಿ ಮತ್ತು ಪತ್ರಿಕೆ ಎರಡೂ ಇರದ ಕಡೆ ವೆಬ್‌ಸೈಟ್‌ ಮೂಲಕ ನಾವು ತಲುಪಿದ್ದೇವೆ. ದೇಶ ವಿದೇಶದ ಸುದ್ದಿಗಳಿಂದ ಹಿಡಿದು, ಸಣ್ಣ ಹಳ್ಳಿಯ ಸುದ್ದಿವರೆಗೂ ಏಷ್ಯಾನೆಟ್‌ ನ್ಯೂಸ್‌ ಕನ್ನಡ ವೆಬ್‌ಸೈಟ್‌ ವರದಿ ಮಾಡುತ್ತದೆ. ಆ ಮೂಲಕ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ದನಿಯಾಗಿದೆ. 

ಗುಣಮಟ್ಟದ ಪತ್ರಿಕೋದ್ಯಮವನ್ನು ನಂಬಿರುವ ಏಷ್ಯಾನೆಟ್ ನ್ಯೂಸನ್ನು ಜನರು ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ. 4 ಕೋಟಿಗೂ ಹೆಚ್ಚು ಪೇಜ್ ವ್ಯೂಸ್ ಪಡೆದ ಏಷ್ಯಾನೆಟ್ ನ್ಯೂಸ್ ಕನ್ನಡ ಡಿಜಿಟಲ್ ಮಾಧ್ಯಮದಲ್ಲೊಂದು ಮೈಲಿಗಲ್ಲು ಸಾಧಿಸಿದೆ. ಭಾರತದ ಕನ್ನಡ ವೆಬ್‌ಸೈಟಿನಲ್ಲಿಯೇ ಏಷ್ಯಾನೆಟ್ ನ್ಯೂಸ್ ಕನ್ನಡ ಹೆಚ್ಚು ಕ್ಲಿಕ್ಸ್ ಪಡೆದುಕೊಂಡಿದೆ. ಗುಣಮಟ್ಟದ ಸುದ್ದಿಯೊಂದಿಗೆ ಏಷ್ಯಾನೆಟ್ ಕನ್ನಡ ನಮ್ಮ ಓದುಗರಿಗೆ ಮತ್ತಷ್ಟು ಹತ್ತಿರವಾಗಲು ಶ್ರಮಿಸಲಿದೆ. ಈ ಪ್ರಗತಿ ಮುಂದಿವರಿಯಲಿದ್ದು, ಮತ್ತಷ್ಟು ಗುರಿ ಸಾಧಿಸಲು ಯತ್ಸಿಸುತ್ತೇವೆ. ಮತ್ತಷ್ಟು ಮೈಲಿಗಲ್ಲುಗಳನ್ನು ದಾಟುವ ನಿರೀಕ್ಷೆಯಲ್ಲಿ ನಾವಿದ್ದೇವೆ.

- ರುಚಿರ್‌ ಖನ್ನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌

ಮೇ ತಿಂಗಳ ComScore Rankingನಲ್ಲಿ ಏಷ್ಯಾನೆಟ್‌ ಪೇಜ್‌ ವ್ಯೂವ್ಸ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದು, ಇನ್ನೂ ಹೆಚ್ಚು ಜನರನ್ನು ತಲುಪುವ ವಿಶ್ವಾಸವಿದೆ. ಪೇಜ್‌ ವ್ಯೂವ್ಸ್‌ ಹೆಚ್ಚು ಬಂದರೆ, ಓದುಗರು ವೆಬ್‌ಸೈಟನ್ನು ಹೆಚ್ಚು ಹೊತ್ತು ಓದುತ್ತಿದ್ದಾರೆ ಎಂದರ್ಥ. ಜತೆಗೆ ಓದುಗರು, ಒಂದು ಸುದ್ದಿಯನ್ನು ಓದಿದ ನಂತರ ಬೇರೆ ಬೇರೆ ಸುದ್ದಿಗಳನ್ನು ಓದುತ್ತಿದ್ದಾರೆ ಎಂದರ್ಥ. ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಲೇಖನಗಳಿಲ್ಲದಿದ್ದರೆ, ಓದುಗರು ವಾಪಸಾಗುತ್ತಾರೆ. ಆಗ ಪೇಜ್‌ ವ್ಯೂವ್ಸ್‌ ಕಡಿಮೆಯಾಗುತ್ತದೆ. ಓದುಗರು ಇಷ್ಟಪಟ್ಟು ಓದಿದರೆ ಮಾತ್ರ ಪೇಜ್‌ ವ್ಯೂವ್ಸ್‌ ಹೆಚ್ಚುತ್ತದೆ. ಮತ್ತೊಮ್ಮೆ ಮೊದಲ ಸ್ಥಾನಕ್ಕೇರಿಸಿದ್ದಕ್ಕೆ ಕನ್ನಡಗರಿಗೆ ವಂದನೆಗಳು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ