ನೈಸ್‌ ರಸ್ತೆಯ ಟೋಲ್‌ ಶೇ.17 ಹೆಚ್ಚಳ?

Published : Jun 30, 2022, 06:54 AM IST
ನೈಸ್‌ ರಸ್ತೆಯ ಟೋಲ್‌ ಶೇ.17 ಹೆಚ್ಚಳ?

ಸಾರಾಂಶ

* ಕಡಿಮೆ ದರದಲ್ಲಿ ಉತ್ತಮ ಸೇವೆ: ನೈಸ್‌ * ನೈಸ್‌ ರಸ್ತೆಯ ಟೋಲ್‌ ಶೇ.17 ಹೆಚ್ಚಳ? * -5 ವರ್ಷದ ಬಳಿಕ ಶುಲ್ಕ ಹೆಚ್ಚಿಸಿದ ಸಂಸ್ಥೆ

ಬೆಂಗಳೂರು(ಜೂ.30): ನಂದಿ ಎಕನಾಮಿಕ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಎನ್‌ಇಸಿಎಲ್‌) ನೈಸ್‌ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್‌ ಶುಲ್ಕವನ್ನು ಹೆಚ್ಚಳ ಮಾಡಲು ಮುಂದಾಗಿದೆ. ಜು.1ರಿಂದ ಜಾರಿಯಾಗಲಿದೆ ಎಂದು ತಿಳಿಸಿದ್ದ ಸಂಸ್ಥೆ, ತಾಂತ್ರಿಕ ಕಾರಣದಿಂದ ಟೋಲ್‌ ಫೀಸ್‌ ಹೆಚ್ಚಳವನ್ನು ಮುಂದೂಡಲಾಗಿದೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಪರಿಶೀಲಿಸಿ ಮುಂದಿನ ಆದೇಶ ಹೊರಡಿಸಲಾಗುವುದು ಎಂದು ಎನ್‌ಇಸಿಎಲ್‌ ತಿಳಿಸಿದೆ. ಮೂಲಗಳ ಪ್ರಕಾರ ಶೇ.17ರಷ್ಟುಶುಲ್ಕವನ್ನು ಹೆಚ್ಚಳ ಮಾಡಲಾಗುತ್ತದೆ.

ನೈಸ್‌ ರಸ್ತೆಗೆ ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಐಸಿ)ನಿಂದ ಸಂಪರ್ಕ ಕಲ್ಪಿಸುವ ಪೆರಿಫೆರಲ್‌ ರಸ್ತೆ ಮತ್ತು ಲಿಂಕ್‌ ರಸ್ತೆಗಳಿಗೂ ಅನ್ವಯಿಸಲಿದೆ ಎಂದು ಎನ್‌ಇಸಿಎಲ್‌ ತಿಳಿಸಿದೆ.

ಬೇರೆ ಬೇರೆ ರಸ್ತೆ ನಿರ್ಮಾಣ ಸಂಸ್ಥೆಗಳು ತಮ್ಮ ರಸ್ತೆಗಳಲ್ಲಿನ ಟೋಲ್‌ ದರವನ್ನು ಪ್ರತಿ ವರ್ಷ ಹೆಚ್ಚಳ ಮಾಡಿದ್ದರೂ, ಆರ್ಥಿಕ ಹಿಂಜರಿತ ಮತ್ತು ಕೋವಿಡ್‌ ಕಾರಣದಿಂದ ‘ನೈಸ್‌’ ಕಳೆದ ಐದು ವರ್ಷಗಳಿಂದ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಸರ್ಕಾರದೊಂದಿಗಿನ ಒಪ್ಪಂದದ ಪ್ರಕಾರ ಪ್ರತಿ ವರ್ಷ ಟೋಲ್‌ ಶುಲ್ಕ ಪರಿಷ್ಕರಿಸಲು ನೈಸ್‌ ಸಂಸ್ಥೆಗೂ ಅವಕಾಶವಿದೆ. ಆದರೂ ಐದು ವರ್ಷಗಳ ಬಳಿಕ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಪರಿಷ್ಕೃತ ಶುಲ್ಕ ಕೂಡ ಒಪ್ಪಂದದ ಪ್ರಕಾರ ಸಂಗ್ರಹಿಸಲು ಸಾಧ್ಯವಿರುವ ಶುಲ್ಕಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಕೈಗೆಟಕುವ ದರದಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ ಸೇವೆ ಒದಗಿಸುವುದು ನೈಸ್‌ ಸಂಸ್ಥೆಯ ಉದ್ದೇಶವಾಗಿದೆ ಎಂದು ಎನ್‌ಇಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಷ್ಕೃತ ಶುಲ್ಕ ಹೀಗಿದೆ

ಯಾವ ರಸ್ತೆ ಉದ್ದ (ಕಿ.ಮೀ.) ಕಾರು ಬಸ್ಸು ಟ್ರಕ್‌ ಎಲ್‌ಸಿವಿ ಎಂಎವಿ ಬೈಕ್‌

ಹೊಸೂರಿನಿಂದ ಬನ್ನೇರುಘಟ್ಟರಸ್ತೆ 8.74 45 125 85 45 90 20

ಬನ್ನೇರುಘಟ್ಟದಿಂದ ಕನಕಪುರ ರಸ್ತೆ 6.79 35 100 65 35 70 12

ಕನಕಪುರ ರಸ್ತೆಯಿಂದ ಕ್ಲೋವರ್‌ ಲೀಫ್‌ 4.36 25 65 40 25 40 8

ಕ್ಲೋವರ್‌ ಲೀಫ್‌ನಿಂದ ಮೈಸೂರು ರಸ್ತೆ 3.88 20 55 35 25 40 8

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ 9.55 45 135 90 55 95 20

ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ 7.48 40 105 70 40 75 12

ಲಿಂಕ್‌ ರಸ್ತೆ 8.10 50 130 90 50 105 18

--

ಚಿತ್ರ: ನೈಸ್‌ ರೋಡ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ