
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ತೂರು ಮೂಲದ ಅಪೂರ್ವ ಕೆ ಭಟ್ ಅವರು ಕಳೆದ 134 ದಿನಗಳಿಂದ ಕೋಮಾದಲ್ಲಿದ್ದರು. ಅಪೂರ್ವ ಬದುಕಿ ಬರಲಿ ಎಂದು ಪತಿ ಆಶೀಶ್ ಸರಡ್ಕ ಅವರು ಮಿತಿ ಮೀರಿ ಪ್ರಯತ್ನಪಟ್ಟಿದ್ದರು. ಚಿಕಿತ್ಸೆಯಿಂದ ಹಿಡಿದು ಅನೇಕ ಧಾರ್ಮಿಕ ಕೆಲಸಗಳನ್ನು ಕೂಡ ಮಾಡಿದ್ದರು. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಅಪೂರ್ವಗೋಸ್ಕರ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು. ಕೊನೆಗೂ ಅಪೂರ್ವಳನ್ನು ಉಳಿಸಿಕೊಳ್ಳಲಾಗಲಿಲ್ಲ. ಅಪೂರ್ವ ಅವರು ಇಂದು ಸಂಜೆ ಆರು ಗಂಟೆಗೆ ನಿಧನರಾಗಿದ್ದಾರೆ ಎಂದು ಆಶೀಶ್ ಅವರೇ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.
ಅಪೂರ್ವ ಕೆ ಭಟ್ ಪುತ್ತೂರಿನವರು. ಬೆಂಗಳೂರಿನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಆಶೀಶ್ ಸರಡ್ಕ ಅವರನ್ನು ಮದುವೆಯಾಗಿದ್ದ ಅಪೂರ್ವಗೆ ಮೂರು ವರ್ಷದ ಮಗಳಿದ್ದಳು. ಇವರು ಕಾರ್‌ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅಪಘಾತ ಆಯ್ತು. ಮೆಸ್ಸಿ ಬಸ್ ಇವರ ಕಾರ್‌ಗೆ ಗುದ್ದಿತ್ತು. ಕಳೆದ ಮೇ ತಿಂಗಳ ಅಂತ್ಯದಲ್ಲಿ ಅಪಘಾತ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಪೂರ್ವ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ನಾಲ್ಕು ತಿಂಗಳಿನಿಂದ ಕೋಮಾದಲ್ಲಿದ್ದ ಅಪೂರ್ವ ಈಗ ಇಹಲೋಕ ತ್ಯಜಿಸಿದ್ದಾರೆ. ಅಪೂರ್ವಗೆ ಈಗ 32 ವರ್ಷ ವಯಸ್ಸು.
ಒಂದೇ ಒಂದು ಮನವಿ.. ನಾವು ಆತ್ಮಕ್ಕೆ ಸದ್ಗತಿ ಸಿಗಲಿ ಅನ್ನುವ ಪ್ರಾರ್ಥನೆ ಮಾಡುವವರು... Rest in Peace ಅಲ್ಲಿ ನಂಬಿಕೆ ಇಲ್ಲ.. ಅಪೂರ್ವ ಈ ಜೀವನದ ಕೊನೆಯ 134 ದಿನಗಳಲ್ಲಿ ಅನುಭವಿಸಿದ ನೋವು, ನರಳಾಟ, ಬೇನೆ, ವೇದನೆ, ಕಣ್ಣೀರು, ಹಿಂಸೆ ಎಲ್ಲವನ್ನೂ ನಾನು ಸ್ವತಃ ನಿಂತು ನೋಡಿದ್ದೇನೆ.. ಅವಳು ಕರ್ಮ ತೊಳೆದುಕೊಳ್ಳಲು ಏನು ಮಾಡಬೇಕಿತ್ತೋ ಅದೆಲ್ಲಾ ಮಾಡಿದಳು. ತುಂಬಾ ಶುದ್ಧ ಮನಸ್ಸಿನ ಹುಡುಗಿ ಅವಳು.. ಯಾರಿಗೂ ಕೇಡು ಬಯಸಿದವಳು ಅಲ್ಲಾ.. ಹಾಗಾಗಿ ಅವಳು ಪ್ರಾಯಶಃ ದೇವರ ಸಾನಿಧ್ಯಕ್ಕೇ ಹೋಗಿರುವುದು. ಆಕೆ ಆರಾಮಾಗಿ ಇರಲಿ ಅನ್ನುವ ಕೋರಿಕೆ ಒಂದೇ ನನ್ನದು. ನೀವೂ ಅದನ್ನೇ ಪ್ರಾರ್ಥಿಸಿ. 2 ಗಂಟೆ ಆಯ್ತು ಈಗ ಅದು ನಿಧಾನಕ್ಕೆ ನನ್ನ ಮನಸ್ಸಿಗೆ ನಾಟುತ್ತಾ ಇದೆ.. ಕಳೆದ 134 ದಿನದಲ್ಲಿ ಆಕೆಯ ಮೌನ ಅಭ್ಯಾಸ ಆಗಿತ್ತು.. ಆದರೆ ನನ್ನ ಕಣ್ಣ ಎದುರಿಗೇ ಇದ್ಲು ಅವಳು ಅನ್ನುವ ಒಂದು ಸಣ್ಣ ಸಮಾಧಾನ ಇತ್ತು.. ಇನ್ನು ಅದು, ಈ ನಗು ಬರೀ ನೆನಪು ಮಾತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ