
ಬೆಳಗಾವಿ (ನ.23): ದೇಶಸೇವೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಸಹಸ್ರಾರು ಯುವಕರ ದಂಡು ಬೆಳಗಾವಿಯಲ್ಲಿ ಜಮಾವಣೆಗೊಂಡಿದ್ದು, ಮೈ ಕೊರೆವ ಚಳಿಯನ್ನೂ ಲೆಕ್ಕಿಸದೆ ಸೇನಾ ಭರ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಬೆಳಗಾವಿಯ ಟೆರಿಟೋರಿಯಲ್ ಆರ್ಮಿ (Territorial Army) ನೇತೃತ್ವದಲ್ಲಿ ಈ ಬೃಹತ್ ಸೇನಾ ಭರ್ತಿ ರ್ಯಾಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ಬೆಳಗಾವಿಯ ಕ್ಲಬ್ ರೋಡ್ ಮತ್ತು ಸಿಪಿಎಡ್ ಮೈದಾನದ ಸುತ್ತಮುತ್ತ ಯುವಕರು ಕಿಕ್ಕಿರಿದು ಸೇರಿದ್ದಾರೆ.
ಮಧ್ಯರಾತ್ರಿ 2 ಗಂಟೆಯಿಂದಲೇ ಯುವಕರು ರ್ಯಾಲಿಗೆ ಸಜ್ಜಾಗಿದ್ದು, ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸಿಲ್ಲ. ಬಹುತೇಕರು ಬೀದಿ ಬಳಿಯ ಪುಟ್ ಪಾತ್ ಮೇಲೆಯೇ ಹಾಗೂ ಸಿಪಿಎಡ್ ಮೈದಾನವನ್ನೇ ತಮ್ಮ ತಾತ್ಕಾಲಿಕ ಹಾಸಿಗೆ ಮಾಡಿಕೊಂಡು ರಾತ್ರಿ ಕಳೆದಿದ್ದಾರೆ.
ಇಂದು (ಭಾನುವಾರ) ದೈಹಿಕ ಪರೀಕ್ಷೆ (Physical Test) ಮತ್ತು ದಾಖಲೆಗಳ ಪರಿಶೀಲನೆ (Document Verification) ನಡೆಯುತ್ತಿದೆ. ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಮೈಸೂರು, ರಾಮನಗರ, ಮಂಡ್ಯ, ದಾವಣಗೆರೆ ಮತ್ತು ಬೆಳಗಾವಿ ಸೇರಿ ಒಟ್ಟು ಏಳು ಜಿಲ್ಲೆಗಳ ಸೇನಾ ಆಕಾಂಕ್ಷಿಗಳು ಈ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.
ದೇಶ ಕಾಯುವ ಸೈನಿಕನಾಗುವ ಕನಸಿನೊಂದಿಗೆ ಆಗಮಿಸಿರುವ ಈ ಯುವ ಸಮೂಹದ ಉತ್ಸಾಹವು ನಿಜಕ್ಕೂ ಪ್ರಶಂಸನೀಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ