Bribe: ಪೊಲೀಸರಿಂದಲೂ ಎಂಜಲು ಕಾಸು ತಿನ್ನೋರ ಬಗ್ಗೆಯೂ ಜ್ಞಾನೇಂದ್ರ ಮಾತಾಡ್ಲಿ: ಬಿಜೆಪಿ ಮುಖಂಡ

Kannadaprabha News   | Asianet News
Published : Dec 05, 2021, 08:10 AM ISTUpdated : Dec 05, 2021, 08:18 AM IST
Bribe: ಪೊಲೀಸರಿಂದಲೂ ಎಂಜಲು ಕಾಸು ತಿನ್ನೋರ ಬಗ್ಗೆಯೂ ಜ್ಞಾನೇಂದ್ರ ಮಾತಾಡ್ಲಿ: ಬಿಜೆಪಿ ಮುಖಂಡ

ಸಾರಾಂಶ

*  ಕೆಲ ಠಾಣೆಗಳಿಗೆ ವರ್ಗ ಆಗಲು ಲಕ್ಷಗಟ್ಟಲೇ ಎಂಜಲು ನೀಡಬೇಕು *  ಪ್ರತಿ ಹಂತದಲ್ಲಿಯೂ ಎಂಜಲು ಕೊಡುವುದು ಸಾಮಾನ್ಯ  *  ಗೃಹ ಸಚಿವರು ಎಂಜಲು ಪಟ್ಟಿ ನೋಡಿದರೆ ಒಳ್ಳೆಯದು  

ಬೆಂಗಳೂರು(ಡಿ.05): ‘ಪೊಲೀಸರು(Police) ಕೆಟ್ಟು ಹಾಳಾಗಿದ್ದಾರೆ. ಎಂಜಲು ಕಾಸು ತಿನ್ನುತ್ತಾರೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರ ಹೇಳಿಕೆ ವೈರಲ್‌ ಆಗಿದೆ. ಇದೇ ರೀತಿ ಪೊಲೀಸರಿಂದ ಎಂಜಲು ಕಾಸು ತಿನ್ನುವವರ ಕುರಿತೂ ಗೃಹಸಚಿವರು ಮಾತನಾಡಬೇಕು’ ಎಂದು ಆಡಳಿತಾರೂಢ ಬಿಜೆಪಿ ಮುಖಂಡರೂ ಆಗಿರುವ ಮಾಜಿ ಪೊಲೀಸ್‌ ಅಧಿಕಾರಿ ಗಿರೀಶ್‌ ಮಟ್ಟೆಣ್ಣವರ್‌(Girish Mattennavar) ಆಗ್ರಹಿಸಿದ್ದಾರೆ.

ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ಬಳಿಕ ಪೊಲೀಸರ ಕುರಿತು ಇಂತಹ ಹೇಳಿಕೆಗಳು ಬರುತ್ತಲೇ ಇವೆ. ಆದರೆ, ವರ್ಗಾವಣೆ ಎಂಜಲು ದಂಧೆ ಗೃಹ ಸಚಿವರಿಗೆ ಗೊತ್ತಿಲವೇ ಎಂದು ಪ್ರಶ್ನಿಸಿರುವ ಅವರು, ಬೆಂಗಳೂರಿನ(Bengaluru) ಉಪ್ಪಾರಪೇಟೆ, ಚಿಕ್ಕಪೇಟೆ, ಕಬ್ಬನ್‌ ಪಾರ್ಕ್ ಸೇರಿದಂತೆ ಕೆಲ ಪ್ರಮುಖ ಠಾಣೆಗಳಿಗೆ ವರ್ಗವಾಗಿ ಬರುವ ಠಾಣಾಧಿಕಾರಿಗಳು 50 ಲಕ್ಷದವರೆಗೂ ಎಂಜಲು ನೀಡಬೇಕು. ರಾಜ್ಯದ(Karnataka) ಯಾವುದೇ ಠಾಣೆಗೆ ಪೋಸ್ಟಿಂಗ್‌ ಬರುವ ಅಧಿಕಾರಿ ಕನಿಷ್ಠ 25 ಲಕ್ಷ ಎಂಜಲು ನೀಡಲೇಬೇಕು. ಪೊಲೀಸ್‌ ಪೇದೆಯಿಂದ ಐಪಿಎಸ್‌ ಅಧಿಕಾರಿ(IPS Officer) ವರ್ಗಾವಣೆವರೆಗೂ ಪ್ರತಿ ಹಂತದಲ್ಲಿಯೂ ಎಂಜಲು ಕೊಡುವುದು ಸಾಮಾನ್ಯವಾಗಿದೆ. ಶಾಸಕರು ಬೇಡ ಎಂದರೆ, ಸಚಿವರಿಗೆ, ಸಚಿವರು ಬೇಡವೆಂದರೆ, ಶಾಸಕರಿಗೆ ಈ ಇಬ್ಬರೂ ಬೇಡವೆಂದರೆ ಕೇಂದ್ರ ಕಚೇರಿಗೆ ಎಂಜಲು ಕಾಸು ಕೊಡಲೇಬೇಕಾದ ಸ್ಥಿತಿಯಿದೆ ಎಂದು ಆರೋಪಿಸಿದ್ದಾರೆ.

Complaint Against Home Minister : ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು

ಪುಕ್ಕಟೆ ವರ್ಗಾವಣೆ(Transfer) ಎಂದರೆ ಶಿಕ್ಷೆ ರೂಪದ ವರ್ಗಾವಣೆ ಅಷ್ಟೇ. ರಾಜ್ಯದ ಯಾವ ಠಾಣೆ, ಯಾವ ಹುದ್ದೆಗೆ ಎಷ್ಟುಎಂಜಲು ನೀಡಬೇಕು ಎನ್ನುವ ಪಟ್ಟಿ ವಿಧಾನಸೌಧದ ಒಳ-ಹೊರಗೆ ಓಡಾಡುವ ದಲ್ಲಾಳಿಗಳ ಹತ್ತಿರವಿರುತ್ತದೆ. ವರ್ಷಕ್ಕೊಮ್ಮೆ ಅದಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟುತ್ತಿರುತ್ತದೆ. ಗೃಹ ಸಚಿವರು ಆ ಎಂಜಲು ಪಟ್ಟಿಯನ್ನು ನೋಡಿದರೆ ಒಳ್ಳೆಯದು ಎಂದಿದ್ದಾರೆ.

ಈ ಹಿಂದೆ ಸುಪ್ರೀಂಕೋರ್ಟ್‌(Supreme Court) ನಿರ್ದೇಶನದ ಮೇರೆಗೆ ವರ್ಗಾವಣೆ ಅವಧಿಯನ್ನು ಕನಿಷ್ಠ ಎರಡು ವರ್ಷಕ್ಕೆ ನಿಗದಿಗೊಳಿಸಲಾಗಿತ್ತು. ಇದು ರಾಜ್ಯದಲ್ಲಿಯೂ ಜಾರಿಗೆ ಬಂದಿತ್ತಾದರೂ ರಾಜ್ಯ ಸರ್ಕಾರ ವರ್ಗಾವಣೆ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿತ್ತು. ಹೀಗಾಗಿ ಪೊಲೀಸ್‌ ಅಧಿಕಾರಿ(Police Officer) ಒಂದು ವರ್ಷದ ಗುತ್ತಿಗೆದಾರನಾಗಿ ಕೆಲಸ ಮಾಡುವ ಸ್ಥಿತಿಯಿದೆ. ರಾಜ್ಯ ಗುತ್ತಿಗೆದಾರ ಸಂಘದವರು ಪರ್ಸೆಂಟೇಜ್‌ ಕುರಿತು ಪ್ರಧಾನಿಗೆ(Prime Minister) ಪತ್ರ ಬರೆದು ಬೇಸರ ಹೊರಹಾಕಿದ್ದಾರೆ. ಆದರೆ ಪೊಲೀಸ್‌ ಸಿಬ್ಬಂದಿಗೆ ಆ ಅಧಿಕಾರವಿಲ್ಲ, ಧ್ವನಿಯೂ ಇಲ್ಲ. ಈ ಸಮಸ್ಯೆಯನ್ನು ಗೃಹ ಸಚಿವರೇ ಪರಿಹರಿಸಬೇಕು ಎಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

Karnataka Politics| ನಾವೇನ್‌ ಕುಮಾರಸ್ವಾಮಿ ಕೇಳಿ ಕೆಲಸ ಮಾಡಬೇಕಾ?: ಆರಗ ಜ್ಞಾನೇಂದ್ರ

ಯೋಗ್ಯತೆ ಇಲ್ಲದ ಪೊಲೀಸರು ಯೂನಿಫಾರಂ ಬಿಚ್ಚಿಟ್ಟು ಸಾಯ್ರಿ

‘ಈ ರೀತಿ ದನ ರೆಗ್ಯುಲರ್ ಕಳ್ಳ ಸಾಗಾಣಿಕೆ ಮಾಡುವವರು ಯಾರೆಂದು ನಿಮ್ಮವರಿಗೆ ಗೊತ್ತಿರುತ್ತೆ. ಲಂಚ (Bribe) ತಿನ್ಕೊಂಡು ಅವರ ಜೊತೆ ಬಿದ್ದಿರ್ತಾರೆ ನಾಯಿ ಹಂಗೆ. ಎಂಜಲು ಕಾಸಿಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಯೋಗ್ಯತೆ ಇಲ್ಲ ದಿದ್ದರೆ ಯೂನಿಫಾರಂ ಬಿಚ್ಚಿಟ್ಟು ಸಾಯ್ರಿ ಮನೆ ಕಡೆ.’ ಅಕ್ರಮ ಗೋ ಸಾಗಣೆ ಮತ್ತು ಗೋ ಕಳ್ಳರು ಹೆಚ್ಚುತ್ತಿರುವ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು (Senior Police Officer ) ಗೃಹ ಸಚಿವ ಆರಗ ಜ್ಞಾನೇಂದ್ರ ತರಾಟೆಗೆ ತೆಗೆದುಕೊಂಡಿದ್ದರು. 

ಗೃಹ ಸಚಿವರ ಕ್ಷೇತ್ರದಲ್ಲಿ ಗೋ ಕಳ್ಳರನ್ನು ತಡೆಯಲು ಬಂದ ಹಿಂದೂಪರ ಸಂಘಟನೆಯ ಇಬ್ಬರು ಕಾರ್ಯಕರ್ತರ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಇಲಾಖೆಯ ವಿರುದ್ಧ ಕೆಂಡಾ ಮಂಡಲವಾಗಿರುವ ವೀಡಿಯೋ ವೈರಲ್ ಕೂಡ ಆಗಿತ್ತು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್