ವೀಕ್ ಎಂಡ್ ಪ್ಲಾನ್‌ಗೆ ಹೇಳಿ ಮಾಡಿಸಿದಂತಿವೆ ಈ ರಜೆಗಳು. ವಾರಾಂತ್ಯದಲ್ಲಿ ಒಟ್ಟೊಟ್ಟಿಗೆ ರಜೆಗಳು ಬಂದಿವೆ. ಭಾನುವಾರ, ರಜಾ ದಿನಗಳು, ಸೆಕೆಂಡ್ ಸ್ಯಾಟರ್ಡೆ, ಹಬ್ಬ ಹರಿದಿನ ಇದೆಲ್ಲಾ ಸೇರಿ ಒಟ್ಟು ಸೆಪ್ಟೆಂಬರ್‌ನಲ್ಲಿ 8 ದಿನ ರಜೆಯ ಜಾಕ್ ಪಾಟ್ ಹೊಡೆದಂತಿದೆ.
ಬೆಂಗಳೂರು(ಆ.31): ಅಕ್ಟೊಬರ್‌ನಲ್ಲಿ ಬರುವ ದಸರಾ ರಜೆಗೂ ಮುನ್ನ ಸೆಪ್ಟೆಂಬರ್‌ನಲ್ಲಿ ಸಾಲು ಸಾಲು ಸರ್ಕಾರಿ ರಜೆ ಇವೆ. ಹೌದು, ಸೆಪ್ಟೆಂಬರ್ ತಿಂಗಳ ಕ್ಯಾಲೆಂಡರ್‌ನಲ್ಲಿ ಸಾಲು ಸಾಲು ರಜೆಗಳಿವೆ.
ವೀಕ್ ಎಂಡ್ ಪ್ಲಾನ್‌ಗೆ ಹೇಳಿ ಮಾಡಿಸಿದಂತಿವೆ ಈ ರಜೆಗಳು. ವಾರಾಂತ್ಯದಲ್ಲಿ ಒಟ್ಟೊಟ್ಟಿಗೆ ರಜೆಗಳು ಬಂದಿವೆ. ಭಾನುವಾರ, ರಜಾ ದಿನಗಳು, ಸೆಕೆಂಡ್ ಸ್ಯಾಟರ್ಡೆ, ಹಬ್ಬ ಹರಿದಿನ ಇದೆಲ್ಲಾ ಸೇರಿ ಒಟ್ಟು ಸೆಪ್ಟೆಂಬರ್‌ನಲ್ಲಿ 8 ದಿನ ರಜೆಯ ಜಾಕ್ ಪಾಟ್ ಹೊಡೆದಂತಿದೆ.
ಸೆಪ್ಟೆಂಬರ್‌ನಲ್ಲಿ 15 ದಿನ ಬ್ಯಾಂಕ್‌ಗೆ ರಜೆ, ಬೇಗ ಬೇಗ ನಿಮ್ಮ ಹಣಕಾಸಿನ ಕೆಲಸ ಮುಗಿಸಿಕೊಳ್ಳಿ!
ಸೆಪ್ಟೆಂಬರ್‌ನಲ್ಲಿ ಯಾವ್ಯಾದ ದಿನ ರಜೆ?:
ಸೆಪ್ಟೆಂಬರ್ ಮೊದಲ ದಿನವೇ ಭಾನುವಾರದ ರಜೆ. ಸೆಪ್ಟೆಂಬರ್ 7 ಗಣೇಶ ಚತುರ್ಥಿತ ಪ್ರಯುಕ್ತ ಸರ್ಕಾರಿ ರಜೆ, ಮರುದಿನ ಸೆಪ್ಟೆಂಬರ್ 8 ಭಾನುವಾರದ ರಜೆ. ಇನ್ನು ಸೆಪ್ಟೆಂಬರ್ 14 ರಂದು ತಿಂಗಳ ಎರಡನೇ ಶನಿವಾರ, 15ರಂದು ಮತ್ತೆ ಭಾನುವಾರದ ರಜೆ. 16 ರಂದು ಈದ್ ಮಿಲಾದ್ ಪ್ರಯುಕ್ತ ಸರ್ಕಾರಿ ರಜೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ 3 ದಿನ ರಜೆಯಾದ್ರೇ ಇನ್ನುಳಿದಂತೆ, 22 ರಂದು ಭಾನುವಾರದ ರಜೆ, 29 ರಂದು ಸೆಪ್ಟೆಂಬರ್ ತಿಂಗಳಿನ ಕೊನೆಯ ಭಾನುವಾರದ ರಜೆಗಳಿದ್ದು ಒಟ್ಟು ಎಂಟು ರಜೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಸಿಕ್ಕಂತಾಗಿದೆ.