ಕೆಪಿಟಿಸಿಎಲ್‌ ಅಕ್ರಮ ನೇಮಕಾತಿ: ಮತ್ತೋರ್ವ ಆರೋಪಿ ಬಂಧನ

By Girish Goudar  |  First Published Jan 20, 2023, 12:30 AM IST

ಮೈಕ್ರೋಚಿಪ್ ಉಪಯೋಗಿಸಿ ಪರೀಕ್ಷೆ ಬರೆಯಲು ಸಹಕಾರ ನೀಡಿದ್ದ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಪೊಲೀಸರು. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 51 ಕ್ಕೆ ಏರಿಕೆಯಾಗಿದೆ.


ಬೆಳಗಾವಿ(ಜ.20): ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ)ಯಿಂದ ನಡೆಸಲಾಗಿರುವ ಕೆಪಿಟಿಸಿಎಲ್‌ನ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಡಿವೈಸ್‌ಗಳ ಮೂಲಕ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು ತಮ್ಮ ಸಮರ ಮುಂದುವರಿಸಿದ್ದು, ಮೈಕ್ರೋಚಿಪ್ ಉಪಯೋಗಿಸಿ ಪರೀಕ್ಷೆ ಬರೆಯಲು ಸಹಕಾರ ನೀಡಿದ್ದ ವ್ಯಕ್ತಿಯನ್ನು  ನಿನ್ನೆ(ಗುರುವಾರ) ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 51 ಕ್ಕೆ ಏರಿಕೆಯಾಗಿದೆ. ಗೋಕಾಕ್ ತಾಲೂಕಿನ  ಉಪ್ಪಾರಟ್ಡಿ ಗ್ರಾಮದ ಹನಮಂತ ಮಲ್ಲಪ್ಪ ಗುದಿಗೊಪ್ಪ (22)  ಬಂಧಿತ ಆರೋಪಿಯಾಗಿದ್ದಾನೆ. 

ಈತ 2022 ಆಗಷ್ಟ 7 ರಂದು  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ)ಯಿಂದ ನಡೆಸಲಾಗಿರುವ ಕೆಪಿಟಿಸಿಎಲ್‌ನ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಯುಳ್ಳ ಡಿವೈಸ್‌ಗನ್ನು ಉಪಯೋಗಿಸಿ ಪರೀಕ್ಷೆ ಬರೆಯಲು  ಸಹಕಾರ  ನೀಡಿದ್ದಾನೆ. 

Latest Videos

undefined

KPTCL Recruitment Scam: ಅರ್ಧ ಶತಕ ಪೂರೈಸಿದ ಬಂಧಿತರ ಸಂಖ್ಯೆ!

ಅಲ್ಲದೇ ಈ ಪರೀಕ್ಷಾ ಅಕ್ರಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ ಅವರು, ಅಕ್ರಮದಲ್ಲಿ ಪಾಲ್ಗೊಂಡ ಹಾಗೂ ಈ ಜಾಲಕ್ಕೆ ಸಂಪರ್ಕ ಹೊಂದಿದವರನ್ನು ಹೆಡೆಮುರಿ ಕಟ್ಟುವ ಕಾರ್ಯವನ್ನು ತಮ್ಮ ತಂಡದೊಂದಿಗೆ ಮುಂದುವರಿಸಿದ್ದಾರೆ. ಈ ಕುರಿತು ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!