ಹಸಿವು ಮುಕ್ತ, ಸ್ವಾಭಿಮಾನದ ಬದುಕಿಗೆ ಅನ್ನಭಾಗ್ಯ ಆಸರೆ-ಸಚಿವ ಎಚ್ಕೆ ಪಾಟೀಲ್‌ 

By Kannadaprabha News  |  First Published Jul 17, 2023, 6:08 AM IST

ರಾಜ್ಯದ ಜನಸಾಮಾನ್ಯರ ಬದುಕು ಹಸನಾಗಬೇಕು, ಹಸಿವು ಮುಕ್ತವಾಗಬೇಕು, ನೆಮ್ಮದಿಯ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನ್ನಭಾಗ್ಯ ಯೋಜನೆ ಆಸರೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಹೇಳಿದರು.


ಗದಗ (ಜು.17) :  ರಾಜ್ಯದ ಜನಸಾಮಾನ್ಯರ ಬದುಕು ಹಸನಾಗಬೇಕು, ಹಸಿವು ಮುಕ್ತವಾಗಬೇಕು, ನೆಮ್ಮದಿಯ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನ್ನಭಾಗ್ಯ ಯೋಜನೆ ಆಸರೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಹೇಳಿದರು.

ಭಾನುವಾರ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದಿಂದ ಅನ್ನಭಾಗ್ಯ ಯೋಜನೆ ನೇರ ನಗದು ವರ್ಗಾವಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೇಳಿದ್ದನ್ನು ಸರಿಯಾಗಿ ಅನುಷ್ಠಾನ ಮಾಡುವ ಮೂಲಕ ನುಡಿದಂತೆ ಸರ್ಕಾರ ನಡೆದಿದೆ. ರಾಜ್ಯದ ಜನಸಾಮಾನ್ಯರ ಹಸಿವು ನೀಗಿಸಿದ ಸಾರ್ಥಕ ಭಾವ ಮೂಡಿದೆ. ನಮ್ಮನ್ನು ನಂಬಿ ನಿವೇಲ್ಲರೂ ಆಶೀರ್ವದಿಸಿದ್ದೀರಿ. ನಿಮ್ಮ ಆಶೀರ್ವಾದದ ಶಕ್ತಿಯಿಂದ ಇಂದು ನಿಮಗೆಲ್ಲ ಹತ್ತು ಕೆ.ಜಿ. ಅಕ್ಕಿ ನೀಡಲು ಸಾಧ್ಯವಾಗಿದೆ. ಸದ್ಯ ಪ್ರತಿ ಪಡಿತರ ಕುಟುಂಬದ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ 5 ಕೆ.ಜಿ.ಗೆ ತಗಲಬಹುದಾದ ದುಡ್ಡನ್ನು ನೀಡಲಾಗುತ್ತಿದೆ ಎಂದು ಹೇಳಿದರು.

Tap to resize

Latest Videos

undefined

ವಿಪಕ್ಷ ನಾಯಕರಿಲ್ಲದೆ ರಾಜ್ಯಪಾಲರ ಭಾಷಣ ದುರ್ದೈವ: ಸಚಿವ ಎಚ್‌.ಕೆ.ಪಾಟೀಲ್‌

ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆಗೆ ಜಿಲ್ಲೆಯಲ್ಲಿ ಸದ್ಯ ಬಿಪಿಎಲ್‌ ಹಾಗೂ ಎಎಪಿ ಒಟ್ಟಾರೆ ಅರ್ಹ 1,88,833 ಪಡಿತರ ಚೀಟಿದಾರರಿದ್ದು, 6,43,423 ಫಲಾನುಭವಿಗಳಿಗೆ 10,36,55,120 ನೇರ ನಗದು ಜಮೆ ಮಾಡಲು ಚಾಲನೆ ದೊರಕಿದೆ. ಇದೊಂದು ಕ್ರಾಂತಿಕಾರಕ ಕಾರ್ಯವಾಗಿದ್ದು, ಹಸಿವು ಮುಕ್ತ ರಾಜ್ಯ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ದಿಟ್ಟಹೆಜ್ಜೆ ಇಟ್ಟಿದೆ ಎಂದರು.

ಬೆಲೆ ಏರಿಕೆಯಿಂದ ಬೇಸತ್ತ ಜನಸಾಮಾನ್ಯರಿಗೆ ಆರ್ಥಿಕ ಆಧಾರ ನೀಡುವ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಕಾರ್ಯಕ್ಕೆ ಜು. 19ರಂದು ಚಾಲನೆ ನೀಡಲಾಗುತ್ತಿದೆ. ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು .2000 ನೆರವು ನೀಡುವ ಯೋಜನೆ ಇದಾಗಿದೆ. ಬಡವರ ಬದುಕು ಅಸಹನೀಯವಾಗಿರುವುದನ್ನು ಮನಗಂಡು ಕುಟುಂಬದ ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿದೆ. ಆ. 16, 17ರಂದು ಗೃಹಲಕ್ಷ್ಮೀ ಯೋಜನೆಯ . 2000 ಆರ್ಥಿಕ ನೆರವು ಅರ್ಹರಿಗೆ ತಲುಪಲಿದೆ. ಈ ಮೊತ್ತದಿಂದ ಆರ್ಥಿಕ ಅಡಚಣೆ ನೀಗಿಸಲು ನೆರವು ನೀಡಿದಂತಾಗುತ್ತದೆ. ಈಗಾಗಲೇ ಶಕ್ತಿ ಯೋಜನೆ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದು, ಒಂದೇ ತಿಂಗಳಲ್ಲಿ . 17 ಕೋಟಿ ಮೊತ್ತದ ಪ್ರಯಾಣವನ್ನು ಮಹಿಳೆಯರು ಮಾಡಿದ್ದು ಖುಷಿ ತಂದಿದೆ ಎಂದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಮಾತನಾಡಿ, ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಯಡಿ ರಾಜ್ಯದಲ್ಲಿ . 1.36 ಕೋಟಿ ಬಿಪಿಎಲ್‌ ಪಡಿತರ ಕುಟುಂಬಗಳಿವೆ. ಸರ್ಕಾರದ ಪ್ರತಿ ಪೈಸೆ ಅರ್ಹರಿಗೆ ತಲುಪಬೇಕು ಮತ್ತು ಅದು ಸದುಪಯೋಗ ಆಗಬೇಕು. ಸರ್ಕಾರ ಅಥವಾ ಅಧಿಕಾರಿ ಉತ್ತಮ ಕೆಲಸ ಮಾಡಿದಾಗ ಅದನ್ನು ಮೆಚ್ಚಿ ಬೆನ್ನು ತಟ್ಟುವ ಕಾರ್ಯವಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕ ಜಿ.ಎಸ್‌. ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ…., ಜಿಪಂ ಸಿಇಒ ಡಾ. ಸುಶೀಲಾ ಬಿ., ಎಸ್ಪಿ ಬಿ.ಎಸ್‌. ನೇಮಗೌಡ, ಎಡಿಸಿ ಅನ್ನಪೂರ್ಣಾ, ಎಲ….ಡಿ. ಚಂದಾವರಿ ಹಾಜರಿದ್ದರು. ಆಹಾರ ಇಲಾಖೆ ಉಪನಿರ್ದೇಶಕ ಗಂಗಪ್ಪ ಎಂ. ಸ್ವಾಗತಿಸಿದರು. ಜಿಲ್ಲಾ ಖಜಾನೆ ಉಪನಿರ್ದೇಶಕ ಹರಿನಾಥಬಾಬು ವಿ. ವಂದಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

 

17 ಜನರಲ್ಲೇ ಒಬ್ರನ್ನ ವಿಪಕ್ಷ ನಾಯಕ ಮಾಡಿ: ಪಾಟೀಲ ವ್ಯಂಗ್ಯ


ಮನೆಯ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿಯ ಮೊತ್ತ . 170ರಂತೆ ನಮಗೆ . 680 ಪ್ರತಿ ತಿಂಗಳು ಸಿಗಲಿದೆ. ಇದರಿಂದ ನಾವು ಅಕ್ಕಿ, ಬೆಳೆ, ಸಕ್ಕರೆಯಂತಹ ಪದಾರ್ಥಗಳನ್ನು ಖರೀದಿಸಲು ತುಂಬಾ ಸಹಕಾರಿಯಾಗಲಿದೆ. ಈ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್‌.ಕೆ. ಪಾಟೀಲ ಅವರಿಗೆ ತುಂಬು ಹೃದಯದ ಧನ್ಯವಾದಗಳು.

ಯಾಕೂಬ, ಫಲಾನುಭವಿ
 

click me!