ಅಮೃತ ಕಲಶ ಯಾತ್ರೆ ರೈಲು ಇಂದು ಬೆಂಗಳೂರಿಂದ ದಿಲ್ಲಿಗೆ

Published : Oct 27, 2023, 06:15 AM IST
ಅಮೃತ ಕಲಶ ಯಾತ್ರೆ ರೈಲು ಇಂದು ಬೆಂಗಳೂರಿಂದ ದಿಲ್ಲಿಗೆ

ಸಾರಾಂಶ

ಕರ್ನಾಟಕದಿಂದ 234 ಕಲಶವನ್ನು ದಿಲ್ಲಿಗೆ ಕೊಂಡೊಯ್ಯಲಾಗುತ್ತಿದೆ. ಈ ಅಮೃತ ಕಲಶ ಯಾತ್ರೆಗೆ ಅನುಕೂಲವಾಗುವಂತೆ. ಈ ವಿಶೇಷ ರೈಲು ಎಸ್‌ಎಂವಿಟಿ ಬೆಂಗಳೂರಿನಿಂದ ನಿಜಾಮುದ್ದೀನ್‌ಗೆ ತಲುಪಿ ಮರಳಿ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣಕ್ಕೆ ಬರಲಿದೆ. 

ಬೆಂಗಳೂರು(ಅ.27):  ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯುವ ‘ಅಮೃತ್ ಕಲಶ ಯಾತ್ರೆ’ಗೆ ರಾಜ್ಯದಿಂದ ಕಲಶ ಹೊತ್ತ ವಿಶೇಷ ರೈಲು ನಗರದ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (ಎಸ್‌ಎಂವಿಟಿ) ದಿಲ್ಲಿಗೆ ಶುಕ್ರವಾರ (ಅ.27) ಹೊರಡಲಿದೆ.

ಎಸ್‌ಎಂವಿಟಿ ಬೆಂಗಳೂರು- ನಿಜಾಮುದ್ದೀನ್-ಎಂಎಸ್‌ವಿಟಿ ಬೆಂಗಳೂರು ವಿಶೇಷ ರೈಲಿಗೆ ( 06507/06508) ಅ.27ರ ಮಧ್ಯಾಹ್ನ 1.30ಕ್ಕೆ ಎಸ್‌ಎಂವಿಟಿ ಬೆಂಗಳೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಗುತ್ತದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ದಿಲ್ಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ನಿರ್ಮಿಸಿರುವ ‘ಅಮೃತ ವಾಟಿಕಾ’ ಉದ್ಯಾನದಲ್ಲಿ ದೇಶದ ಮೂಲೆ ಮೂಲೆಯಿಂದ ತರಿಸಿದ ಮಣ್ಣು ಹಾಗೂ ಸಸಿಗಳನ್ನು ಬೆಳೆಸಲಾಗುವುದು.
ಇದಕ್ಕಾಗಿ ‘ಅಮೃತ ಕಲಶ ಯಾತ್ರೆ’ಯ ಹೆಸರಿನಲ್ಲಿ ದೇಶದ 7500 ಕಡೆಗಳಿಂದ 7500 ಕುಂಡಗಳಲ್ಲಿ ಅಲ್ಲಿನ ಮಣ್ಣು ಹಾಗೂ ಸಸಿಯನ್ನು ದಿಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅವುಗಳನ್ನು ‘ಅಮೃತ ವಾಟಿಕಾ’ದಲ್ಲಿ ನೆಡಲಾಗುವುದು. ಈ ಅಮೃತ ವಾಟಿಕಾ ಉದ್ಯಾನವು ‘ಏಕ ಭಾರತ ಶ್ರೇಷ್ಠ ಭಾರತ’ದ ಭವ್ಯ ಸಂಕೇತವಾಗಿ ತಲೆಯೆತ್ತಲಿದೆ.

ಟಿಕೆಟ್‌ ಕಾದಿರಿಸಿದರೂ ದಂಡ ವಿಧಿಸಿದ್ದ ರೈಲ್ವೆಗೆ ‘ದಂಡ’..!

ಕರ್ನಾಟಕದಿಂದ 234 ಕಲಶವನ್ನು ದಿಲ್ಲಿಗೆ ಕೊಂಡೊಯ್ಯಲಾಗುತ್ತಿದೆ. ಈ ಅಮೃತ ಕಲಶ ಯಾತ್ರೆಗೆ ಅನುಕೂಲವಾಗುವಂತೆ. ಈ ವಿಶೇಷ ರೈಲು ಎಸ್‌ಎಂವಿಟಿ ಬೆಂಗಳೂರಿನಿಂದ ನಿಜಾಮುದ್ದೀನ್‌ಗೆ ತಲುಪಿ ಮರಳಿ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣಕ್ಕೆ ಬರಲಿದೆ ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ