American Cleans Bengaluru Roads: ಪೌರ ಕಾರ್ಮಿಕನಾಗಿ ಪೊರಕೆ ಹಿಡಿದು ರಸ್ತೆ ಗುಡಿಸಿದ ಅಮೆರಿಕ ಪ್ರಜೆ!

Kannadaprabha News, Ravi Janekal |   | Kannada Prabha
Published : Nov 04, 2025, 08:10 AM IST
American cleans Bengaluru streets

ಸಾರಾಂಶ

ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್ ನಡೆಸುತ್ತಿರುವ ಅಮೆರಿಕದ ಪ್ರಜೆ ಟೋನಿ ಕ್ಲೋರ್, ಬಿಬಿಎಂಪಿ ಪೌರ ಕಾರ್ಮಿಕನ ವೇಷ ಧರಿಸಿ ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದಾರೆ. ನಗರದ ರಸ್ತೆ ಮತ್ತು ಫುಟ್‌ಪಾತ್‌ಗಳ ದುಸ್ಥಿತಿಯನ್ನು ಎತ್ತಿ ತೋರಿಸುವ ಅವರ ವ್ಯಂಗ್ಯಭರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು (ನ.4): ನಗರದಲ್ಲಿ ಸ್ಟಾರ್ಟ್‌ಅಪ್ ನಡೆಸುತ್ತಿರುವ ಅಮೆರಿಕ ಪ್ರಜೆ ಟೋನಿ ಕ್ಲೋರ್ ಎಂಬುವರು ಜಿಬಿಎ ಪೌರ ಕಾರ್ಮಿಕನಂತೆ ವಸ್ತ್ರ ಧರಿಸಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಯನ್ನು ಗುಡಿಸುವ ಮೂಲಕ ನಗರದ ರಸ್ತೆ, ಫುಟ್‌ಪಾತ್ ಮತ್ತು ಕಸದ ಅದ್ವಾನ, ಅವಾಂತರದ ಕುರಿತು ಬೆಳಕು ಚೆಲ್ಲಿದ್ದಾನೆ.

ಟೋನಿ ಕ್ಲೋರ್ ಕಸಗೂಡಿಸುವ ವಿಡಿಯೋ ವೈರಲ್

ನಗರದ ಫುಟ್‌ತಾಪ್ ಮೇಲೆ 1 ಕಿ.ಮೀ ನಡೆದರೆ ನೀವು ಸರ್ಕಾರದಿಂದ ಪಿಂಚಣಿಗೆ ಅರ್ಹರಾಗುತ್ತೀರಿ ಎಂದು ವ್ಯಂಗ್ಯಭರಿತವಾಗಿ ಮಾಡಿರುವ ಕಿರು ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ನಿಮ್ಮನ್ನು ನೋಡಿಯಾದರು ಪಾಲಿಕೆಯವರು ರಸ್ತೆಗಳನ್ನು ಸರಿಪಡಿಸಲಿ ಎಂದು ಜನರು ಕಮೆಂಟ್ ಮಾಡಿದ್ದಾರೆ.

ವಿಡಿಯೋದಲ್ಲೇನಿದೆ?

ಇವತ್ತು ನಾನು ಬಿಬಿಎಂಪಿ ಸರ್ವೀಸ್ ಸ್ಕ್ವಾಡ್ ಸೇರಿದ್ದೇನೆ. ಆದರೆ, ಬಿಬಿಎಂಪಿ ನನ್ನನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ. ನಾನೇ ಬಿಬಿಎಂಪಿ ಸೇರಿದ್ದೇನೆ. ಪಾದಚಾರಿಗಳು ಓಡಾಡುವ ಜನರ ಪಾಲಿಗೆ ಅಪಾಯಕಾರಿಯಾಗಿವೆ ಎಂದು ನನ್ನ ಸಹೋದ್ಯೋಗಿಗಳು (ಪೌರ ಕಾರ್ಮಿಕರು) ಹೇಳಿದ್ದಾರೆ. ಹೌದು, ಬೆಂಗಳೂರು ಗಲೀಜಾಗಿಲ್ಲ. ಶಾಶ್ವತವಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬಂತೆ ಭಾಸವಾಗುತ್ತದೆ. ರಸ್ತೆಯಲ್ಲಿ ಓಡಾಡಿದರೆ ಟೆಕ್ಕಿಗಳ ಕಾಲು ಮೂಳೆಗಳು ಮುರಿಯುತ್ತವೆ. ನಗರದ ಫುಟ್‌ತಾಪ್ ಮೇಲೆ 1 ಕಿ.ಮೀ ನಡೆದರೆ ನೀವು ಸರ್ಕಾರದಿಂದ ಪಿಂಚಣಿಗೆ ಅರ್ಹರಾಗುತ್ತೀರಿ! ಎಂದು ಟೋನಿ ಕ್ಲೋರ್ ವ್ಯಂಗ್ಯವಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌