ಕರ್ಫ್ಯೂ ವೇಳೆ ಸಂಬಳ ಕಡಿತ ಬೇಡ: ಹೈಕೋರ್ಟ್‌ಗೆ ಮೊರೆ

By Kannadaprabha News  |  First Published Apr 29, 2021, 6:56 AM IST

ಕೊರೋನಾ ಮಹಾಮಾರಿ ಜನರ ಜೀವನ ಜೀವನ ಎಲ್ಲವನ್ನೂ ತಿನ್ನುತ್ತಿದೆ. ಇದರ ನಡುವೆ ಕರ್ಫ್ಯೂ ವೇಳೆ ಸಂಬಳ ಕಡಿತ ಮಾಡದಂತೆ ಕಾರ್ಮಿಕ ಒಕ್ಕೂಟವು ಹೈ ಕೋರ್ಟ್ ಮೊರೆ ಹೋಗಿದೆ. 


ಬೆಂಗಳೂರು (ಏ.29): ಜನತಾ ಕರ್ಫ್ಯೂ ಅವಧಿಯಲ್ಲಿ ಕಾರ್ಮಿಕರ ಸಂಬಳಕ್ಕೆ ಕತ್ತರಿ ಹಾಕದಂತೆ ಉದ್ದಿಮೆಗಳಿಗೆ ನಿರ್ದೇಶಿಸಬೇಕು ಹಾಗೂ ಆಹಾರ ಕಿಟ್‌ಗಳನ್ನು ಪೂರೈಸಲು ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್‌ (ಎಐಸಿಟಿಯು) ಹೈಕೋರ್ಟ್‌ಗೆ ಮನವಿ ಮಾಡಿದೆ. ಈ ಕುರಿತು ಎಐಸಿಟಿಯು ಪರ ವಕೀಲ ಕ್ಲಿಫ್ಟನ್‌ ರೋಝಾರಿಯೊ ಹೈಕೋರ್ಟ್‌ಗೆ ಮೆಮೊ ಸಲ್ಲಿಸಿ ಈ ಹಿಂದೆ ಲಾಕ್‌ಡೌನ್‌ನಿಂದ ರಾಜ್ಯದಲ್ಲಿರುವ ಬಡವರ್ಗದವರು ಆರ್ಥಿಕವಾಗಿ ನಷ್ಟಅನುಭವಿಸಿದ್ದಾರೆ. 

ಸಣ್ಣ ರೈತರು, ಕೃಷಿ ಕಾರ್ಮಿಕರು, ಮನೆಗೆಲಸದವರು, ಬೀದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಗಾರ್ಮೆಂಟ್ಸ್‌ ಕಾರ್ಮಿಕರು, ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು ಅಧೋಗತಿಗೆ ತಲುಪಿದ್ದಾರೆ. ಹೀಗಾಗಿ ರೈತರಿಗೆ, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಮೆಮೋನಲ್ಲಿ ಕೋರಲಾಗಿದೆ. ಮೇಮೋವನ್ನು ಮುಂದಿನ ವಿಚಾರಣೆ ಸಂದರ್ಭದಲ್ಲಿ ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ತಿಳಿಸಿದೆ.

Latest Videos

undefined

 ಸರ್ಕಾರಕ್ಕೆ ಸೂಚಿಸಲು ಕಾರ್ಮಿಕ ಸಂಘಟನೆ ಮನವಿ
 
ಜನತಾ ಕರ್ಫ್ಯೂ ಅವಧಿಯಲ್ಲಿ ಕಾರ್ಮಿಕರ ಸಂಬಳಕ್ಕೆ ಕತ್ತರಿ ಹಾಕದಂತೆ ಉದ್ದಿಮೆಗಳಿಗೆ ನಿರ್ದೇಶಿಸಬೇಕು ಹಾಗೂ ಆಹಾರ ಕಿಟ್‌ಗಳನ್ನು ಪೂರೈಸಲು ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್‌ (ಎಐಸಿಟಿಯು) ಹೈಕೋರ್ಟ್‌ಗೆ ಮನವಿ ಮಾಡಿದೆ.

ಈ ಕುರಿತು ಎಐಸಿಟಿಯು ಪರ ವಕೀಲ ಕ್ಲಿಫ್ಟನ್‌ ರೋಝಾರಿಯೊ ಹೈಕೋರ್ಟ್‌ಗೆ ಮೆಮೊ ಸಲ್ಲಿಸಿ ಈ ಹಿಂದೆ ಲಾಕ್‌ಡೌನ್‌ನಿಂದ ರಾಜ್ಯದಲ್ಲಿರುವ ಬಡವರ್ಗದವರು ಆರ್ಥಿಕವಾಗಿ ನಷ್ಟಅನುಭವಿಸಿದ್ದಾರೆ. ಸಣ್ಣ ರೈತರು, ಕೃಷಿ ಕಾರ್ಮಿಕರು, ಮನೆಗೆಲಸದವರು, ಬೀದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಗಾರ್ಮೆಂಟ್ಸ್‌ ಕಾರ್ಮಿಕರು, ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು ಅಧೋಗತಿಗೆ ತಲುಪಿದ್ದಾರೆ. ಇದೀಗ ಮತ್ತೊಮ್ಮೆ ಜನತಾ ಕಫä್ರ್ಯ ಜಾರಿಯಾಗಿದೆ. ಈ ಅವಧಿಯಲ್ಲಿ ಇವರ ಜೀವಿಸುವ ಹಕ್ಕಿನ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸರ್ಕಾರ ವಿಶೇಷ ಗಮನ ಹರಿಸಬೇಕು. ಅವರಿಗೆ ಅಗತ್ಯ ಆಹಾರ ಹಾಗೂ ವೈದ್ಯಕೀಯ ಸೌಲಭ್ಯ ನೀಡಬೇಕಿದೆ ಎಂದರು.

ಕೊರೋನಾದಿಂದ ಕೆಲಸ ಕಳೆದುಕೊಂಡಿದ್ದೀರಾ? ಮನೆಯಲ್ಲಿ ಈ ಕೆಲ್ಸ ಮಾಡ್ಬಹುದು!

ಕಾರ್ಮಿಕರ ಕೂಲಿ-ವೇತನ ಕಡಿತಗೊಳಿಸದಿರಲು, ಸಾಮಾನ್ಯ ಹಾಗೂ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯದಿರಲು ಉದ್ದಿಮೆಗಳಿಗೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು. ಹಾಗೆಯೇ, ಒಂದು ತಿಂಗಳ ಮನೆ ಬಾಡಿಗೆ ಕೇಳದಂತೆ ಮತ್ತು ಮನೆ ಖಾಲಿ ಮಾಡಿಸಿದರೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಆದೇಶ ಹೊರಡಿಸಬೇಕು. ಕಾರ್ಮಿಕರ ಕೆಲಸ ಹಾಗೂ ಮನೆ ಬಾಡಿಗೆ ಸಮಸ್ಯೆಗಳ ಕುರಿತು ನೆರವು ನೀಡಲು ಪ್ರತ್ಯೇಕ ಸಹಾಯವಾಣಿ ಆರಂಭಿಸಬೇಕು. ರೈತರಿಗೆ, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಮೆಮೋನಲ್ಲಿ ಕೋರಲಾಗಿದೆ.

ಮೇಮೋವನ್ನು ಮುಂದಿನ ವಿಚಾರಣೆ ಸಂದರ್ಭದಲ್ಲಿ ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ತಿಳಿಸಿದೆ.

click me!