Murugha Mutt Case; CWC ಅಧಿಕಾರಿಗಳಿಂದ ಮಕ್ಕಳಿಗೆ ಹಿಂಸೆ, ಒಡನಾಡಿ ಸಂಸ್ಥೆ ಆರೋಪ

By Suvarna News  |  First Published Sep 20, 2022, 7:57 PM IST

ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಸಂತ್ರಸ್ತ ಹೆಣ್ಣು ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸ್ತಿಲ್ಲ ಎಂದು ಆರೋಪಿಸಿ ಒಡನಾಡಿ ಸಂಸ್ಥೆ  ಮತ್ತು  ಚಿತ್ರದುರ್ಗದ ವಿವಿಧ ದಲಿತ ಸಂಘಟನೆ‌ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದ್ದಾರೆ


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.20): ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಸಂತ್ರಸ್ತ ಹೆಣ್ಣು ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸ್ತಿಲ್ಲ ಎಂದು ಆರೋಪಿಸಿ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶು ಹಾಗು ಚಿತ್ರದುರ್ಗದ ವಿವಿಧ ದಲಿತ ಸಂಘಟನೆ‌ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು. ಚಿತ್ರದುರ್ಗ ನಗರದ ಡಿಸಿ ಕಚೇರಿ ಬಳಿ ಮಕ್ಕಳೊಂದಿಗೆ ನಾವು ವೇದಿಕೆಯಿಂದ ಸುಮಾರು 100ಕ್ಕೂ ಅಧಿಕ ಮಂದಿ ಸೇರಿ CWC ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಮುರುಘಾ ಶ್ರಿ ವಿರುದ್ದದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತ ಹೆಣ್ಣು ಮಕ್ಕಳು ಸದ್ಯ ಚಿತ್ರದುರ್ಗದ CWC ಕಚೇರಿಯಲ್ಲಿ ಇದ್ದಾರೆ. ಆದರೆ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸ್ತಿಲ್ಲ, ಅವರಿಗೆ ಮಾನಸಿಕ‌ ತೊಂದರೆ ಮಾಡಲಾಗ್ತಿದೆ ಎಂದು ಸಂತ್ರಸ್ತೆಯರ ಪರ ವಕೀಲರಾದ ಶ್ರೀನಿವಾಸ್ ಈ ಹಿಂದೆ ಆರೋಪ‌ ಮಾಡಿದ್ದರು. ಅದಕ್ಕೆ ಪೂರಕವಾಗಿ ಇಂದು ಒಡನಾಡಿ ಸಂಸ್ಥೆಯ ನಿರ್ದೇಶಕರು ಚಿತ್ರದುರ್ಗದ ದಲಿತ ಸಂಘಟನೆಯ ಕಾರ್ಯಕರ್ತರೊಂದಿಗೆ ಸೇರಿ CWC ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಯಾರಿಗೆ ಬಂತು ಎಲ್ಲಿಗೆ ಬಂತು ಸ್ವಾತಂತ್ರ್ಯ ಎಂದು ಘೋಷ ವಾಕ್ಯ ಕೂಗುವ ಮೂಲಕ CWC ಅಧಿಕಾರಿಗಳ ವರ್ತನೆಯನ್ನು ಖಂಡಿಸಿದರು. 

Tap to resize

Latest Videos

ಇನ್ನೂ ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಪರಶು, ಮಕ್ಕಳ ಜೊತೆ ಆಪ್ತ ಸಮಾಲೋಚನೆ ನಡೆಸಲು ನ್ಯಾಯಾಲಯ ಅನುಮತಿ ಕೊಟ್ಟಿದೆ. ನ್ಯಾಯಾಲಯದ ಆದೇಶವನ್ನು ಇವರು ಧಿಕ್ಕರಿಸಿದ್ದಾರೆ. ಮಕ್ಕಳ ಆತಂಕವನ್ನು ಸಮಾಧಾನ ಮಾಡು ಪ್ರಕ್ರಿಯೆ ನಡೆದಿಲ್ಲ ಎಂದು ಕಿಡಿಕಾರಿದರು. ಸಂತ್ರಸ್ತ ಮಕ್ಕಳ ಜೊತೆ ಓದುತ್ತಿದ್ದ ಮಕ್ಕಳನ್ನು ಬೇರೆಡೆ ಕಳುಹಿಸಿದ್ದು ಯಾಕೆ ಎಂದು ಪ್ರಶ್ನಿಸಿದರು. ಬೇರೆ ಮಕ್ಕಳ ಶಿಕ್ಷಣಕ್ಕಾಗಿ ಬೇರೆಡೆ ವರ್ಗಾವಣೆ ಮಾಡುವ ಹಕ್ಕು ಕೊಟ್ಟವರು ಯಾರು? ಸಂತ್ರಸ್ತ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸುವ ಮೂಲಕ ತಬ್ಬಲಿಗಳಾಗಿ ಮಾಡಿದ್ದಾರೆ. JJ-40 ಆಕ್ಟ್ ಪ್ರಕಾರ ಮಕ್ಕಳಿಗೆ ನಿರಂತರ ಆಪ್ತ ಸಮಾಲೋಚನೆ ಇರಬೇಕು ಎಂದರು.

ನೀವು ಯಾರ ಮೂಲಕ ಸಾಂತ್ವಾನ ಹೇಳ್ತಿದ್ದೀರಿ ತಿಳಿಸಿ. ಯಾರು ನೋಡಬಾರದು, ಯಾರು ಕೇಳಿಸಿಕೊಳ್ಳಬಾರದು ಎಂದು ಮಾಡ್ತಿದ್ದೀರಿ. ಒಂದು ಕ್ರೌರ್ಯದ ಜಗತ್ತಿನಲ್ಲಿ ನಾವಿದ್ದೇವೆ ಎಂದು ಗೊತ್ತಾಗ್ತಿದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲಲ್ಲ. ಚಿತ್ರದುರ್ಗ ಜಿಲ್ಲೆಯ ಜನ ಇದು ನಮ್ಮ ಮಕ್ಕಳ ಸಮಸ್ಯೆ ಎಂದು ಹೋರಾಟ. ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಜಾಗೃತಿ ಮೂಡಿಸೋಣ ಎನ್ನುತ್ತಿದ್ದಾರೆ. ನ್ಯಾಯದ ಪರಿದಿಯಲ್ಲಿ ಇವರು ಕೆಲಸ ಮಾಡದಿದ್ರೆ ಹಳ್ಳಿಗಳಿಗೆ ಪಾದಯಾತ್ರೆ ಮಾಡ್ತೀವಿ ಎಂದು ತಿಳಿಸಿದರು.

ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್, ಮುರುಘಾ ಶ್ರೀಗಳಿಗೆ ಮತ್ತೆ ನಿರಾಸೆ

CMC ಅಧಿಕಾರಿಗಳು ಬಾಲ ನ್ಯಾಯ ಕಾಯ್ದೆ, ಫೋಕ್ಸೊ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿದೆ. ಮಕ್ಕಳ ಕಲ್ಯಾಣ ಸಮಿತಿ ಪ್ರಕರಣದ ಆರೋಪಿಗಳ ಪರ ಬ್ಯಾಟಿಂಗ್ ಮಾಡ್ತಿದೆ ಎಂದು ಒಡನಾಡಿ ಸಂಸ್ಥೆ ಸ್ಟ್ಯಾನ್ಲಿ ವಾಗ್ದಾಳಿ ನಡೆಸಿದರು. ಆರೋಪಿಗಳ ಪರ‌ ನಿಂತು ಮಕ್ಕಳನ್ನು ಮಾನಸಿಕವಾಗಿ ಹಿಂಸಿಸುತ್ತಿದೆ.

ಮುರುಘಾ ಮಠದ ವಿರುದ್ಧ ಮತ್ತೊಂದು ಆರೋಪ: ಶ್ರೀಗಳಿಗೆ ಎದುರಾಗುತ್ತಾ ಕಾನೂನು ಕಂಟಕ..?

ಸಂತ್ರಸ್ತೆಯರೊಂದಿಗೆ ಆಪ್ತ ಸಮಾಲೋಚಕರನ್ನು ಬಿಡದೇ ಇರೋದು ಮೂರ್ಖತನದ ಪರಮಾವಧಿ. CWC ಮುಖ್ಯಸ್ಥರಾಗಿದ್ದರು, ನ್ಯಾಯವಾದಿಯಾಗಿ ಸಂವಿಧಾನಕ್ಕೆ ಮಾಡ್ತಿರೊ‌ ಅಪಚಾರ. ಇಂತವರನ್ನು ಸಮತಿಗೆ ಆಯ್ಕೆ ಮಾಡಿದವರು ಇವರ ಅವಿ ವೇಕತನವನ್ನು ಗಮನಿಸಬೇಕು. ಈ ಬೆಳವಣಿಗೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಗಮನಿಸಲಿದ್ದಾರೆಂಬ ಭರವಸೆ ಇದೆ. ಮಕ್ಕಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

click me!