ಜಮೀನಿನ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು,ತಡೆಯಾಜ್ಞೆ ಇದ್ದರೂ ಸಹ ಆದಾನಿ ಲ್ಯಾಜಿಸ್ಟಿಕ್ ಪ್ರವೈಟ್ ಕಂಪನಿಯವರು ಅಕ್ರಮವಾಗಿ ಜಮೀನಿನಲ್ಲಿ ಪ್ರವೇಶಿಸಿ ವಾಸವಿದ್ದ ಮನೆಯನ್ನು ಧ್ವಂಸಗೊಳಿಸಿರುವ ಆರೋಪ ಕೇಳಿಬಂದಿದೆ.
ಕೋಲಾರ (ಆ.25): ಜಮೀನಿನ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು,ತಡೆಯಾಜ್ಞೆ ಇದ್ದರೂ ಸಹ ಆದಾನಿ ಲ್ಯಾಜಿಸ್ಟಿಕ್ ಪ್ರವೈಟ್ ಕಂಪನಿಯವರು ಅಕ್ರಮವಾಗಿ ಜಮೀನಿನಲ್ಲಿ ಪ್ರವೇಶಿಸಿ ವಾಸವಿದ್ದ ಮನೆಯನ್ನು ಧ್ವಂಸಗೊಳಿಸಿರುವ ಆರೋಪ ಕೇಳಿಬಂದಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ದ್ಯಾಪಸಂದ್ರ ಗ್ರಾಮದ ಅಧಾನಿ ಲ್ಯಾಜಿಸ್ಟಿಕ್ ಬಳಿ ನಡೆದಿದೆ.
ಅನುಮತಿ ಪಡೆಯದೆ ತರಾತುರಿಯಲ್ಲಿ 957 ಕೋಟಿ ಮಹದಾಯಿ ಟೆಂಡರ್, ಅಧಿಕಾರಿಗಳ ಅಮಾನತಿಗೆ ಆಗ್ರಹ
undefined
ಮುನಿತಾಯಮ್ಮ ಹಾಗೂ ಅವರ ಮಕ್ಕಳಾದ ಮಂಜುನಾಥ್ ಎಂಬುವರಿಗೆ ಸೇರಿದ ಸರ್ವೇ ನಂಬರ್ 146 ರ 2,14 ಎಕರೆ ಜಮಿನಿದ್ದು,ಈ ಜಮೀನಿನಲ್ಲಿ ವ್ಯವಸಾಯ ಮಾಕೊಂಡು ಜೀವನ ಸಾಗಿಸುತ್ತಿದ್ದರು.ಹೆಣ್ಣು ಮಕ್ಕಳು ಸಹಾ ಆಸ್ತಿ ಪಾಲಿಗಾಗಿ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ದಾವೇ ಹೂಡಿದ್ದು,ನ್ಯಾಯಾಲಯ ತಡೆಯಾಜ್ಞೆ ಸಹ ನೀಡಿದೆ,ಆದರೆ ಈ ಹಿಂದೆ ಜಮೀನನ್ನು ಅದಾನಿ ಲಾಸ್ಟಿಕ್ ಕಂಪನಿಯವರು ಕೇಳಿದ್ದು,ಈ ಜಮೀನನ್ನು ಮಾರಾಟ ಮಾಡುವುದಿಲ್ಲವೆಂದು ತಿಳಿಸಿದ್ದು ಲ್ಯಾಜಿಸ್ಟಿಕ್ ಕಂಪನಿಯವರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಕುಟುಂಬವು ಆರೋಪ ಮಾಡ್ತಿದೆ.
ಬೆಂಗಳೂರಿನಲ್ಲಿ ಬೀದಿ ನಾಯಿ ಕಮ್ಮಿ ಆಗಿದೆಯಂತೆ: ಬಿಬಿಎಂಪಿಯಿಂದ ನಾಯಿಗಳ ಗ
ಇನ್ನು ಮಾಲೂರು ತಾಲೂಕಿನ ದಂಡ ಅಧಿಕಾರಿಗಳು, ಜಿಲ್ಲಾ ಉಪಾಧಿಕಾರಿಗಳ,ಜಿಲ್ಲಾಧಿಕಾರಿಗಳ ಗಮನಕ್ಕೆ ಸಹ ತರಲಾಗಿತ್ತು. ಮುನಿತಾಯಮ್ಮ ಮಕ್ಕಳು ಜಮೀನನ್ನು ಕಂಪನಿಗೆ ಮಾರಾಟ ಮಾಡಿರಲಿಲ್ಲ ಆದರೂ ಸಹ ಲಾಜೆಸ್ಟಿಕ್ ಕಂಪನಿಯವರು ಜಮೀನಿನ ಒಳ ಅಕ್ರಮವಾಗಿ ನುಗ್ಗಿ ಜೆಸಿಪಿ ವಾಹನದ ಮೂಲಕ ಜಮೀನಿನಲ್ಲಿ ನಿರ್ಮಿಸಿದ ಮನೆಯನ್ನು ಧ್ವಂಸ ಗೊಳಿಸಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ನಾಶ ಮಾಡಿದ್ದಾರೆ.ಮನೆಯನ್ನು ಧ್ವಂಸಗೊಳಿಸಿರುವ ಲಾಜಿಸ್ಟಿಕ್ ಕಂಪನಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ಸಹ
ನೀಡಲಾಗಿದೆ.ಒಂದು ವೇಳೆ ನಮಗೆ ನ್ಯಾಯ ಸಿಗದಿದ್ದರೆ ಕುಟುಂಬದ ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಒಂದೇ ಇರುವ ದಾರಿ ಎಂದು ಮುನಿತಾಯಮ್ಮ ಹಾಗೂ ಆವರ ಮಕ್ಕಳು ತಮ್ಮ ಅಳಲನ್ನು ತೊಡಗಿಕೊಂಡಿದ್ದಾರೆ.