ಮಹಾಪ್ರಭುಗಳ ಧಯೆಯಿಂದ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಮಹಾಪ್ರಭುಗಳು ಫಕೀರರು, ನಾನು ಜಂಗಮ ಎಂದು ಪ್ರಧಾನಿ ಮೋದಿ ಹೆಸರು ಹೇಳದೇ ಚಿತ್ರನಟ ಪ್ರಕಾಶ್ ವಾಗ್ದಾಳಿ ನಡೆಸಿದರು.
ಬೆಳಗಾವಿ (ಏ.8): ಮಹಾಪ್ರಭುಗಳ ಧಯೆಯಿಂದ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಮಹಾಪ್ರಭುಗಳು ಫಕೀರರು, ನಾನು ಜಂಗಮ ಎಂದು ಪ್ರಧಾನಿ ಮೋದಿ ಹೆಸರು ಹೇಳದೇ ಚಿತ್ರನಟ ಪ್ರಕಾಶ್ ವಾಗ್ದಾಳಿ ನಡೆಸಿದರು.
ಇಂದು ಬೆಳಗಾವಿಯಲ್ಲಿ ನಡೆದ 'ದೇಶ ಉಳಿಸಿ' ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್ ರೈ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ಪ್ರತಿರೋಧಕ್ಕೆ ಅಳಿವಿಲ್ಲ, ಪ್ರಜೆಗೆ ಅಳಿವಿಲ್ಲ. ಶ್ರೀಶ್ರೀ ಜಗದ್ಗುರು ಮಹಾಸುಳ್ಳುಗಾರ ಮಹಾಪ್ರಭುಗಳು ಹೊಸ ಸುಳ್ಳೊಂದು ಈಗಷ್ಟೇ ಸುದ್ದಿ ಬಂದಿದೆ. ಬರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕೇಳಿ ಸುಪ್ರೀಂ ಕೋರ್ಟ್ಗೆ ಹೋಗಿದ್ದಾರೆ. ಆದ್ರೆ ಕೋರ್ಟ್‌ನಲ್ಲಿ ಮಹಾಪ್ರಭುಗಳ ವಕೀಲರು ಮತ್ತೊಂದು ಸುಳ್ಳು ಹೇಳಿದ್ದಾರೆ. 'ಬರ ಪರಿಹಾರಕ್ಕಾಗಿ ನೀವು ಕೇಂದ್ರ ಸರ್ಕಾರವನ್ನ ಕೇಳಬೇಕಿತ್ತು, ಆದರೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬಂದರೆ ನಾವು ಕೊಡೋಕೆ ಆಗೊಲ್ಲ. ದಯವಿಟ್ಟು ಸುಪ್ರೀಂ ಕೋರ್ಟ್ ನಮಗೆ ನೋಟಿಸ್ ಕಳುಹಿಸಬೇಡಿ. ನೋಟಿಸ್ ಕಳುಹಿಸಿದ್ರೆ ಕರ್ನಾಟಕ ಸರ್ಕಾರದ ಚುನಾವಣೆಗೆ ಸಹಕಾರಿ ಆಗುತ್ತೆ.' ಎಂದಿದ್ದಾರೆ.
ಬಿಜೆಪಿ ಸೇರ್ಪಡೆ ಸುದ್ದಿ: ನನ್ನನ್ನು ಖರೀದಿಸುವಷ್ಟು ಅವರು ಶ್ರೀಮಂತರೇ? ಪ್ರಕಾಶ್ ರಾಜ್ ಪ್ರಶ್ನೆ
ಕರ್ನಾಟಕ ಸರ್ಕಾರ ಅಕ್ಟೋಬರ್ 31ರಲ್ಲಿ ಬರ ಘೋಷಿಸಿ ಪರಿಹಾರ ಕೇಳುತ್ತೆ. ನಂತರವೂ ನವೆಂಬರ್, ಡಿಸೆಂಬರ್‌ನಲ್ಲಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಚಾಣಕ್ಯರನ್ನ ಮಾಹಾಪ್ರಭುಗಳನ್ನ ಭೇಟಿ ಮಾಡಿದ್ದಾರೆ. ಆದರೆ ಇಲ್ಲಿಂದ ಹೋದ ಯಾವ ಸಂಸದನೂ ಬರಪರಿಹಾರ ಬಿಡುಗಡೆ ಮಾಡುವಂತೆ ಮಹಾಪ್ರಭುಗಳ ಮುಂದೆಯಾಗಲಿ, ಚಾಣಕ್ಯನ ಮುಂದೆಯಾಗಲಿ ಬಾಯಿಬಿಟ್ಟಿಲ್ಲ. ಆದರೆ ಈಗ ಚುನಾವಣೆ ಹತ್ರ ಬಂದಿದೆ. ಬರಪರಿಹಾರ ಕೇಳಿ ಸುಪ್ರೀಂ ಕೋರ್ಟ್ ಗೆ ಹೊದ್ರೆ ಇನ್ನೊಂದು ಸುಳ್ಳು ಹೇಳ್ತಿದ್ದಾರೆ. ಇವರಿಗೆ ಮಾನ ಮಾರ್ಯಾದೆ ನಾಚಿಕೆ ಏನಾದ್ರೂ ಇದೆಯಾ? ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾರಿದರು.
ಸುಮ್ಮನೆ ಇರೋಕೆ ಆಗಲಿಲ್ಲ, ನಾನು ಮೊನ್ನೆ ಲಡಾಖ್‌ಗೆ ಹೋಗಿದ್ದೆ. ವಾಂಗ್ಚುಕ್ ಒಬ್ಬ ಸಂತನ ತರಹ ಅಲ್ಲಿ ಕುಳಿತಿದ್ದರು. ಅಲ್ಲಿ ಮಹಾಪ್ರಭುಗಳ ಸ್ನೇಹಿತರು ಗಣಿಗಾರಿಕೆ ಮಾಡಲು ಪ್ರಯತ್ನ ಮಾಡ್ತಿದ್ದಾರೆ. ಹಿಮಾಲಯ ಪರ್ವತ ಗಟ್ಟಿಯಾಗಿದ್ದಲ್ಲ, ವಾತಾವರಣ ಬದಲಾಗುತ್ತಾ ಇದೆ, ಮಳೆ ಇಲ್ಲ, ಮಂಜು ಕರಗಿ ಉತ್ತರ ಭಾರತದ ನದಿಗಳಿಗೆ ಬರುವ ನೀರನ್ನು ನಿಲ್ಲಿಸಬೇಡಿ ತೊಂದರೆ ಆಗುತ್ತೆ ಅಂತಾ ಹೇಳಿದ್ರು. ಇದು ಹೋದ ಚುನಾವಣೆಯಲ್ಲಿ ಮಹಾಪ್ರಭುಗಳು ಕೊಟ್ಟ ಮಾತುಗಳು. 6ನೇ ಶೆಡ್ಯುಲ್ ಸೇರಿಸುತ್ತೇವೆ, ಪ್ರತ್ಯೇಕ ರಾಜ್ಯ ಮಾಡ್ತೆವೆ ಅಂತಾ ಮಾತುಕೊಟ್ಟಿದ್ರು . ಈಗ ಆ ಮಾತುಗಳನ್ನ ನೆನಪಿಸಿದ್ರೆ ದೇಶದ್ರೋಹಿ ಅನ್ನೋ ರೀತಿ ನೋಡ್ತಾರೆ. ಮಹಾಪ್ರಭುಗಳು ಹಾಕಿರುವ ವೇಷಭೂಷಣದಲ್ಲಿ ಬೆವರುತ್ತಿದ್ದಾರೆ.
ಮೋದಿ ಧರ್ಮವನ್ನು ದುರುಪಯೋಗ ಮಾಡ್ಕೊಂಡು, ದುಡ್ಡು ಕೊಟ್ಟು ಚುನಾವಣೆ ಗೆಲ್ತಾರೆ; ಪ್ರಕಾಶ್ ರಾಜ್ ಆರೋಪ
ಭಾರತ ಮತ್ತು ಚೀನಾ ಗಡಿ ಪರಿಸ್ಥಿತಿ ಬಗ್ಗೆ ತಿಳಿಬೇಕೆಂದರೆ ಗಡಿಭಾಗಕ್ಕೆ ಹೋದಾಗ ದೇಶದ ಗಡಿ ಎಷ್ಟು ಹೋಗಿದೆ ಎಂಬುದು ಗೊತ್ತಾಗುತ್ತದೆ. ಕಳಪೆ ಊಟ ನೀಡುತ್ತಿದ್ದಾರೆ ಅಂತಾ ಹೇಳಿದ ಸೈನಿಕನನ್ನೇ ಸಸ್ಪೆಂಡ್ ಮಾಡಿದ್ದಾರೆ ಇವರು. ದೇಶಕ್ಕಾಗಿ ಉಪವಾಸ ಮಾಡಿದವರನ್ನ ನೋಡಿದ್ದೇವೆ. ಆದರೆ ಆದೀಗ ಒಂದು ದೇವಸ್ಥಾನ ಕಟ್ಟಲ್ಲಿಕ್ಕೆ ಉಪವಾಸ ಮಾಡಿದ್ದನ್ನ ನೋಡುತ್ತಿದ್ದೇವೆ. ಇದು ನಮ್ಮ ಹಣೆ ಬರಹ ಎಂದು ಆಕ್ರೋಶ ವ್ಯಕ್ತಪಡಿಸಿದರು.