Vijayapura: ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಮಾಸ್ಟರ್ ಕಿಶನ್!

Published : Aug 12, 2023, 08:25 PM IST
Vijayapura: ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಮಾಸ್ಟರ್ ಕಿಶನ್!

ಸಾರಾಂಶ

ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆಗಳ ಬಗ್ಗೆ ಆಗಾಗ್ಗ ವಿಶ್ವಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುತ್ವೆ.‌ ಅದ್ರಲ್ಲು ಪರಿಸರ ಕಾಳಜಿಯ ಬಗ್ಗೆ ದೊಡ್ಡದೊಡ್ಡ ನಗರ ಪ್ರದೇಶ, ಮೆಟ್ರೋ ಸಿಟಿಗಳಲ್ಲಿ ಸಭೆ, ಭಾಷಣಗಳು ನಡೆದು ಅಲ್ಲಿಗೆ ನಿಂತು ಬಿಡುತ್ವೆ.

ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.12): ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆಗಳ ಬಗ್ಗೆ ಆಗಾಗ್ಗ ವಿಶ್ವಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುತ್ವೆ.‌ ಅದ್ರಲ್ಲು ಪರಿಸರ ಕಾಳಜಿಯ ಬಗ್ಗೆ ದೊಡ್ಡದೊಡ್ಡ ನಗರ ಪ್ರದೇಶ, ಮೆಟ್ರೋ ಸಿಟಿಗಳಲ್ಲಿ ಸಭೆ, ಭಾಷಣಗಳು ನಡೆದು ಅಲ್ಲಿಗೆ ನಿಂತು ಬಿಡುತ್ವೆ. ಆದ್ರೆ ವಿಜಯಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಪರಿಸರ ಜಾಗೃತಿಗಾಗಿ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಜರುಗಿತು. ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿರುವ ಸಚಿವ ಎಂ ಬಿ ಪಾಟೀಲ್ ಪುತ್ರ ಧ್ರುವ ಜೊತೆಗೆ ಕೇರ್ ಆಫ್ ಪುಟ್ಪಾಥ್ ಸಿನಿಮಾ ಖ್ಯಾತಿಯ ಮಾಸ್ಟರ್ ಕಿಶನ್ ಪಾಲ್ಗೊಂಡು ಗ್ರಾಮೀಣ ಮಟ್ಟದಲ್ಲಿ ಪರಿಸರ ಜಾಗೃತಿ ಮೂಡಿಸುವ ಸಂದೇಶ ಸಾರಿದ್ದು ಗಮನಸೆಳೆಯಿತು‌.

ಪರಿಸರ ಜಾಗೃತಿ ಮೂಡಿಸಿದ ನಟ ಮಾಸ್ಟರ್ ಕಿಶನ್: ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಎಸ್.ಪಿ.ಪಿ.ಎ ಸಂಸ್ಥಾಪಕ ಧ್ರುವ ಪಾಟೀಲ ಜೊತೆ ನಡೆದ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಕುರಿತು ವಿನೂತನ ಮತ್ತು ವಿಶಿಷ್ಠ ಸಂವಾದ ಕಾರ್ಯಕ್ರಮವನ್ನು ನಟ ಮಾಸ್ಟರ್ ಕಿಶನ್ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಎಸ್.ಪಿ.ಪಿ.ಎ(ಸೊಸಾಯಿಟಿ ಆಫ್ ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ಸ್ ಆ್ಯಂಡ್ ಎನಿಮಲ್ಸ್), ಶಾಲಾ ಶಿಕ್ಷಣ ಇಲಾಖೆ ಮತ್ತು ಅರ್ಜುಣಗಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಸ್ಟರ್ ಕಿಶನ್ ಮಾತನಾಡಿದರು.

ಕಾಂಗ್ರೆಸ್​​ ಶಾಸಕನ ವಿರುದ್ಧ ಸಮರಕ್ಕಿಳಿದ ಮಹಿಳಾ ಪೇದೆ ಅಮಾನತು: ವಾಟ್ಸಾಪ್ ​ಸ್ಟೇಟಸ್​​ನಲ್ಲಿ ಆಕ್ರೋಶ!

ಪರಿಸರ ರಕ್ಷಣೆ ಎಲ್ಲರ ಕರ್ತವ್ಯ, ಮಾಸ್ಟರ್ ಕಿಶನ್: ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುವ ಅಗತ್ಯತೆ ಕುರಿತು ಮಾಸ್ಟರ್ ಕಿಶನ್ ಮಾತನಾಡಿದರು.  ಪರಿಸರ, ಕಾಡು, ಪ್ರಾಣಿಗಳ ಸಂರಕ್ಷಣೆಯಲ್ಲಿ ಎಸ್.ಪಿ.ಪಿ.ಎ ಸಂಘಟನೆ ಇತರರಿಗೆ ಮಾದರಿಯಾಗಿದೆ.  ಈ ಸಂಸ್ಥೆಯ ಧ್ಯೇಯೋದ್ದೇಶಗಳು ಸುಂದರ ಪರಿಸರ ನಿರ್ಮಿಸಿ ಪ್ರಾಣಿ, ಪಕ್ಷಿ ಸಂಕುಲಗಳನ್ನು ಸಂರಕ್ಷಿಸಿ ಮನುಕುಲದ ಒಳತಿಗಾಗಿ ಪೂರಕವಾಗಿವೆ ಎಂದರು, ಈ ಸಂಘಟನೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ.  ಮರಗಳನ್ನು ಸಂರಕ್ಷಿಸುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯ.  ಜಲ, ವಾಯು, ಭೂ ಮಾಲಿನ್ಯ ಇಂದು ಗಂಭೀರ ಸಮಸ್ಯೆ ತಂದೊಡ್ಡುತ್ತಿವೆ.  ಪರಿಸರ ನಾಶದಿಂದ ಜನಜೀವನಕ್ಕೂ ತೊಂದರೆಯಾಗುತ್ತಿದೆ.  ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ ಅವರು, ಗೆಲುವು ನಿನ್ನ ಕೈಯಲ್ಲಿದೆ ಎಂದು ಹಾಡು ಹೇಳಿದರು.  ಅಲ್ಲದೇ, ಪ್ರತಿಯೊಬ್ಬರು ಕನಿಷ್ಠ ತಲಾ ಒಂದು ಮರ ನೆಡುವಂತೆ ಕರೆ ನೀಡಿದರು.

ನಗರಕ್ಕಿಂತ ಹಳ್ಳಿ ಜೀವನ ಲೇಸು, ಧ್ರುವ ಪಾಟೀಲ್: ಎಸ್.ಪಿ.ಪಿ.ಎ ಸಂಸ್ಥಾಪಕ ಧ್ರುವ ಪಾಟೀಲ ಮಾತನಾಡಿ, ಜಗತ್ತಿನ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ.  ಈ ಮುಂಚೆ ಬರಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಹೊಂದಿದ್ದ ವಿಜಯಪುರ ಜಿಲ್ಲೆಯಲ್ಲಿ ಈಗ ಕೋಟಿ ವೃಕ್ಷ ಅಭಿಯಾನದಿಂದಾಗಿ ಹಸಿರಿನ ಪ್ರಮಾಣ ಹೆಚ್ಚಾಗುತ್ತಿದೆ.  ನಾವು ಪರಿಸರವನ್ನು  ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ.  ನಗರೀಕರಣದಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.  ಈಗ ಹಳ್ಳಿಯಲ್ಲಿದ್ದುಕೊಂಡೆ ನಗರದಲ್ಲಿ ಗಳಿಸುವಷ್ಟು ಹಣ ಗಳಿಸಬಹುದು.  ಪ್ಯಾಟಿಗಿಂತ ಹಳ್ಳಿ ಜೀವನವೇ ಶ್ರೇಷ್ಠವಾಗಿದೆ.  ನಾವು ಪರಿಸರವನ್ನು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ.  ಪ್ರತಿಯೊಬ್ಬರು ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ಒದಗಿಸಲು ಮುಂದಾಗಬೇಕು.  ರೈತರು ಎಲ್ಲರಿಗಿಂತಲೂ ಹೆಚ್ಚು ಶ್ರೇಷ್ಠ ಕಾಯಕಯೋಗಿಯಾಗಿದ್ದಾನೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ SPPS ಸಂಘಟನೆ: ಎಸ್.ಪಿ.ಪಿ.ಎ ಸಂಘಟನೆ ಸ್ಥಾಪಿಸಲು ಕಾರಣ, ಅದರ ಧ್ಯೇಯೋದ್ದೇಶಗಳ ಕುರಿತು ಮಾತನಾಡಿದ ಧ್ರುವ ಪಾಟೀಲ್ ಕೊರೊನಾ ಸಂದರ್ಭದಲ್ಲಿ ಸಸಿ ಬೆಳೆಸಿರುವ ಬಗ್ಗೆ, ಬೀದಿ ನಾಯಿಗಳಿಗೆ ಆಹಾರ ನೀಡಿರುವ ಬಗ್ಗೆ, ವಿಶ್ವದ 12 ನಗರಗಳ 6000 ನಾಯಿಗಳಿಗೆ ಆಹಾರ ನೀಡಿರುವ ಬಗ್ಗೆ ಮಾಹಿತಿ ಹಂಚಿಕೊಂಡರು. ಮುಂದುವರೆದು ಮಾತನಾಡಿ  ಕೋಟಿ ವೃಕ್ಷ ಅಭಿಯಾನ ಮಾಡಿದ್ದೇವೆ.  ಪರಿಸರ ಮತ್ತು ಪ್ರಾಣಿಗಳ ಜೊತೆ ಬದುಕಿದರೆ ಜೀವನ್ ಸುಂದರವಾಗಿರುತ್ತದೆ.  ಈ ಮುಂಚೆ ಕಬಿನಿ ಅರಣ್ಯದಲ್ಲಿ 10 ವರ್ಷ ಕಾಯ್ದು ಕಪ್ಪು ಚಿರತೆ ಕುರಿತು ಸಾಕ್ಷ್ಯಚಿತ್ರ ತಯಾರಿಸಿದ್ದೇನೆ.  ವಿಜಯಪುರ ಜಿಲ್ಲೆಯಲ್ಲಿ 200 ಕೃಷ್ಣ ಮೃಗಗಳಿವೆ. ಗುಜರಾತ ಮತ್ತು ಚೈನಾದಿಂದ ರಾಜಹಂಸ ಪಕ್ಷಿಗಳು ವಿಜಯಪುರ ಜಿಲ್ಲೆಗೆ ಪ್ರತಿವರ್ಷ ವಲಸೆ ಬರುತ್ತವೆ. ಆಲಮಟ್ಟಿ ಹಿನ್ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ.  ವಿಜಯಪುರ ಜಿಲ್ಲೆಯಲ್ಲಿರುವ ಪ್ರಾಣಿ, ಪಕ್ಷಿ ಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡಲಿದ್ದೇವೆ ಎಂದು ತಿಳಿಸಿದರು.  

ವಿದ್ಯಾರ್ಥಿಗಳ ಜೊತೆಗೆ ಮಾಸ್ಟರ್ ಕಿಶನ್ ಸಂವಾದ: ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಮಾಸ್ಟರ್ ಕಿಶನ್ ಮತ್ತು ಧ್ರುವ  ಪಾಟೀಲ, ಜಾಗತಿಕ ತಾಪಮಾನ, ನಗರೀಕರಣ, ಪರಿಸರ ಮಾಲಿನ್ಯಕ್ಕೆ ಕಾರಣಗಳನ್ನು ವಿವರಿಸಿದರು.  ಅಲ್ಲದೇ, ಗಿಡ ಕಡಿಯುವುದು ಅನಿವಾರ್ಯವಾದರೆ, ಒಂದು ಗಿಡ ಕಡಿದರೆ ಎರಡು ಗಿಡ ನೆಡಬೇಕು ಎಂದು ಹೇಳಿದರು.  ಓಝೋನ್ ಪದರದಲ್ಲಿ ರಂಧ್ರ ಉಂಟಾಗಿದ್ದು, ಗಿಡ, ಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಇದರಿಂದಾಗುವ ಹೆಚ್ಚಿನ ಹಾನಿ ತಪ್ಪಿಸಬಹುದು.  ಇಲ್ಲದಿದ್ದರೆ ಪ್ರಾಣಿ, ಪಕ್ಷಿಗಳು ಬದುಕುವುದು ಕಷ್ಟ. ಭಾರತದಲ್ಲಿ ಸುಮಾರು 3000 ಚಿರತೆಗಳಿವೆ. ದೇಶದಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ.  

ಗ್ಯಾರಂಟಿಗಳಿಂದ ಪ್ರತಿ ಬಡ ಕುಟುಂಬಕ್ಕೂ ಸಿಗ್ತಿದೆ ₹5000: ಸಿದ್ದರಾಮಯ್ಯ

ಕಾಡು ಬೆಳೆಸಿದಾಗ ಮಾತ್ರ ಇವುಗಳ ಸಂರಕ್ಷಣೆ ಸಾಧ್ಯ. ಕಾಡಿನಿಂದ ಗಿಡ ಕಡಿಯಬೇಡಿ ಎಂದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ವೇಳೆ ಎಸ್.ಪಿ.ಪಿ.ಎ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ, ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ ಮಾತನಾಡಿದರು. ಇದೇ ವೇಳೆ, ಎಸ್.ಪಿ.ಪಿ.ಎ ಸಂಘಟನೆಯ ಧ್ಯೇಯೋದ್ಧೇಶಗಳು ಮತ್ತು ಸಮಾಜ ಸೇವೆ ಕುರಿತು ಕಿರು ವಿಡಿಯೋ ಪ್ರದರ್ಶನ ನಡೆಯಿತು.  ಅಲ್ಲದೇ, ಪರಿಸರ ಸಂರಕ್ಷಣೆ,  ಸಸ್ಯ ಮತ್ತು ಪ್ರಾಣಿಗಳ ರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಕೈಗೊಳ್ಳಲಾಯಿತು. ಅರ್ಜುಣಗಿ, ಕಾತ್ರಾಳ, ಹೆಬ್ಬಾಳಟ್ಟಿ, ಯಕ್ಕುಂಡಿ ತೋಟದ ಶಾಲೆ ಸೇರಿದಂತೆ ಎಂಟು ಶಾಲೆಗಳು ಮತ್ತು ಒಂದು ಪಿಯು ಕಾಲೇಜಿನ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ