ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್; ಸಿಎಂ ಸಿದ್ದರಾಮಯ್ಯಗೆ KUWJ ಅಭಿನಂದನೆ

By Contributor Asianet  |  First Published Sep 27, 2024, 1:29 PM IST

ದಶಕಗಳ ಕನಸಾಗಿದ್ದ ಗ್ರಾಮೀಣ ಬಸ್ ಪಾಸ್ ಸೌಲಭ್ಯವನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕಾವೇರಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಅಭಿನಂದನೆ ಸಲ್ಲಿಸಿತು.


ಬೆಂಗಳೂರು (ಸೆ.27): ದಶಕಗಳ ಕನಸಾಗಿದ್ದ ಗ್ರಾಮೀಣ ಬಸ್ ಪಾಸ್ ಸೌಲಭ್ಯವನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕಾವೇರಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಅಭಿನಂದನೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ‌ ಮುಖ್ಯಮಂತ್ರಿ ಬಸ್ ಪಾಸ್ ಬಗ್ಗೆ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮಾತು ಕೊಟ್ಟಿದ್ದೆ. ಆ ಬೇಡಿಕೆ ಈಡೇರಿಸಿ ಜಾರಿಗೆ ನೀಡಿದ್ದೇನೆ. ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

Tap to resize

Latest Videos

ನುಡಿದಂತೆ ನಡೆದು ಬೇಡಿಕೆ ಈಡೇರಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಅಭಿನಂದನೆ‌ ಸಲ್ಲಿಸಲಾಯಿತು. ಇದೇ ವೇಳೆ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯವನ್ನು ದೊರಕಿಸಿ ಕೊಡಲು ಸಹಕರಿಸಿದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನೂ ಕೆಯುಡಬ್ಲೂಜೆ ಸನ್ಮಾನಿಸಿತು

click me!