ಕಂಠೀರವ ಸ್ಟುಡಿಯೋಗೆ ಫಿಲ್ಮ್ ಆ್ಯಂಡ್ ಟೆಲಿವಿಷನ್ ಸಂಸ್ಥೆ ಸ್ಥಳಾಂತರಕ್ಕೆ ಕ್ರಮ: ಸಚಿವ ಡಾ.ಎಂ.ಸಿ.ಸುಧಾಕರ್

Published : Jun 27, 2025, 05:08 AM IST
MC Sudhakar

ಸಾರಾಂಶ

ಹೆಸರಘಟ್ಟದಲ್ಲಿರುವ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಅನ್ನು ಕಂಠೀರವ ಸ್ಟುಡಿಯೋ ಬಳಿಗೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು : ಹೆಸರಘಟ್ಟದಲ್ಲಿರುವ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಅನ್ನು ಕಂಠೀರವ ಸ್ಟುಡಿಯೋ ಬಳಿಗೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಹಿರಿಯ ಕಲಾವಿದ ಶ್ರೀನಾಥ್ ಹಾಗೂ ಎಸ್.ಜೆ ಪಾಲಿಟೆಕ್ನಿಕ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ತಂಡ ಗುರುವಾರ ಸಚಿವರನ್ನು ಭೇಟಿಯಾಗಿ ಸಂಸ್ಥೆಯ ಸ್ಥಳಾಂತರ ಮತ್ತು ಉನ್ನತೀಕರಣಕ್ಕಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಶೀಘ್ರದಲ್ಲೇ ಹೆಸರುಘಟ್ಟದಲ್ಲಿರುವ ಸಂಸ್ಥೆಗೆ ಭೇಟಿ ನೀಡುತ್ತೇನೆ. ಕಂಠೀರವ ಸ್ಟುಡಿಯೋ ಬಳಿಯೇ ಸಂಸ್ಥೆಯನ್ನು ಆರಂಭಿಸುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು. ಇದರಿಂದ ಕಲಿಕೆಯ ಜೊತೆಗೆ ಪ್ರಾಯೋಗಿಕ ಅನುಭವಕ್ಕೂ ಹೆಚ್ಚು ಅವಕಾಶ ದೊರಕಲಿದೆ. ಸಿನಿಮಾಟೋಗ್ರಾಫಿ, ಸೌಂಡ್ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಸಿನಿಮಾಕ್ಕೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನಗಳ ಹೊಸ ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಮನವಿ: ದೇಶದಲ್ಲೇ ಮೊದಲು ಆರಂಭಿಸಿದ ಫಿಲ್ಮ್ ಆ್ಯಂಡ್ ಟೆಲಿವಿಷನ್ ಸಂಸ್ಥೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಕಲಿಕೆಯ ಆಸಕ್ತಿ ಇದ್ದರೂ ಮೂಲಸೌಕರ್ಯಗಳ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ಹಾಗಾಗಿ, ಆದಷ್ಟು ಶೀಘ್ರವಾಗಿ ಹೆಸರಘಟ್ಟದಲ್ಲಿರುವ ಕೇಂದ್ರವನ್ನು ನಗರ ಭಾಗಕ್ಕೆ ಸ್ಥಳಾಂತರಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳ ತಂಡ ಮನವಿ ಸಲ್ಲಿಸಿತು.ಈ ವೇಳೆ ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಹೆಚ್. ಪ್ರಸನ್ನ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಯನತಾರಾ ಹೊಸ Home Studio: ಲೇಡಿ ಸೂಪರ್‌ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರಾ, ಚೆನ್ನೈನಲ್ಲಿರುವ ತಮ್ಮ ಮನೆಯನ್ನು ನವೀಕರಿಸಿದ್ದಾರೆ. 7000 ಚದರ ಅಡಿ ವಿಸ್ತೀರ್ಣದ ಈ ಐಷಾರಾಮಿ ಮನೆಯ ಚಿತ್ರಗಳು ಹೊರಬಿದ್ದಿವೆ.

ವಸಾಹತುಶಾಹಿ ಶೈಲಿಯ ಸ್ಟುಡಿಯೋ:

ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಲೇಡಿ ಸೂಪರ್‌ಸ್ಟಾರ್ ಅಂತ ಫೇಮಸ್ ಆಗಿರೋ ನಯನತಾರಾ ತಮ್ಮ ಮನೆಯನ್ನು ನವೀಕರಣ ಮಾಡ್ಸಿದಾರೆ. ಇತ್ತೀಚೆಗೆ ತಮ್ಮ ಚೆನ್ನೈ ಮನೆಯನ್ನು ನವೀಕರಿಸಿ ಅದನ್ನು ಸ್ಟುಡಿಯೋ + ಮನೆಯಾಗಿ ಪರಿವರ್ತಿಸಿದ್ದಾರೆ. ವೀನಸ್ ಕಾಲೋನಿಯಲ್ಲಿರುವ ವಸಾಹತುಶಾಹಿ ಶೈಲಿಯ ಸ್ಟುಡಿಯೋವನ್ನು ದಿ ಸ್ಟೋರಿ ಕಲೆಕ್ಟಿವ್‌ನ ವಿನ್ಯಾಸಕಿ ನಿಖಿತಾ ರೆಡ್ಡಿ ಮರು ವಿನ್ಯಾನಗೊಳಿಸಿದ್ದಾರೆ.

700 ಚದರ ಅಡಿಯಲ್ಲಿ ಮನೆ:

ನಯನತಾರಾ ಅವರ ಹೊಸ ಸ್ಟುಡಿಯೋದ ಅದ್ಭುತ ಫೋಟೋಗಳು ಹೊರಬಂದಿವೆ. ಫೋಟೋಗಳಲ್ಲಿ ಮನೆ ತುಂಬಾ ಐಷಾರಾಮಿಯಾಗಿ ಕಾಣುತ್ತದೆ. ಫೋಟೋಗಳಲ್ಲಿ ಮನೆ ತುಂಬಾನೇ ಚೆನ್ನಾಗಿ ಕಾಣ್ತಿದೆ. ನಯನತಾರಾ ಅವರ ಈ ಹೊಸ ಹೋಮ್ ಸ್ಟುಡಿಯೋ ಸುಮಾರು 7000 ಚದರ ಅಡಿಯಲ್ಲಿ ಇದೆ ಎಂದು ವರದಿಯಾಗಿದೆ. ಇದರ ಒಳಾಂಗಣದಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ಕಲೆಯನ್ನು ಕಾಣಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!