ಹೊನ್ನಾವರ ಪೊಲೀಸ್ ಠಾಣೆಯಲ್ಲೇ ಆರೋಪಿ ಆತ್ಮಹತ್ಯೆ: ಪಿಐ, ಪಿಎಸ್‌ಐ ಸೇರಿ ಐವರು ಅಮಾನತು!

Published : Jun 25, 2023, 12:44 PM ISTUpdated : Jun 25, 2023, 12:55 PM IST
ಹೊನ್ನಾವರ ಪೊಲೀಸ್ ಠಾಣೆಯಲ್ಲೇ ಆರೋಪಿ ಆತ್ಮಹತ್ಯೆ: ಪಿಐ, ಪಿಎಸ್‌ಐ ಸೇರಿ ಐವರು ಅಮಾನತು!

ಸಾರಾಂಶ

ಕಳ್ಳತನದ ಆರೋಪದ ಮೇಲೆ ವಿಚಾರಣೆಗೆ ಕರೆತಂದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ಉತ್ತರ ಕನ್ನಡದ ಹೊನ್ನಾವರ ಠಾಣಾ ಪಿಐ, ಪಿಎಸ್‌ಐ ಸೇರಿ ಐವರು ಅಮಾನತ್ತುಗೊಂಡಿದ್ದಾರೆ.

ಕಾರವಾರ, ಉತ್ತರಕನ್ನಡ (ಜೂ.25) ಕಳ್ಳತನದ ಆರೋಪದ ಮೇಲೆ ವಿಚಾರಣೆಗೆ ಕರೆತಂದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ಉತ್ತರ ಕನ್ನಡದ ಹೊನ್ನಾವರ ಠಾಣಾ ಪಿಐ, ಪಿಎಸ್‌ಐ ಸೇರಿ ಐವರು ಅಮಾನತ್ತುಗೊಂಡಿದ್ದಾರೆ.

ಆರೋಪಿ ಬಿಹಾರ ಮೂಲದ ವ್ಯಕ್ತಿಯಾಗಿದ್ದು, ಪಾಲೀಷ್ ಮಾಡುವ ನೆಪದಲ್ಲಿ ಬಂಗಾರ ಕದಿಯುತ್ತಿದ್ದ. ಈ ಪ್ರಕರಣದಲ್ಲಿ ಬಿಹಾರ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು. ನಿನ್ನೆ ವಿಚಾರಣೆಗೆ ಕರೆತಂದಿದ್ದರು. ಆರೋಪಿ ಬಾಯಾರಿಕೆಯೆಂದು ನೀರು ಕುಡಿಯಲು ಹೋಗಿದ್ದ ವೇಳೆ ನೀರಿನೊಂದಿಗೆ ಬೆರೆಸಿ ವಿಷ ಸೇವನೆ. ವಿಷದ ವಾಸನೆಯಿಂದ ಕೃತ್ಯ ಗಮನಕ್ಕೆ ಬರುತ್ತಿದ್ದಂತೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಆರೋಪಿ. 

ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿ ಮೃತಪಟ್ಟ ಹಿನ್ನೆಲೆ ಈ  ಪ್ರಕರಣದಲ್ಲಿ ಹೊನ್ನಾವರ ಠಾಣೆಯ  ಪಿ.ಐ ಮಂಜುನಾಥ್, ಠಾಣೆಯ ಕ್ರೈ ಪಿ.ಎಸ್.ಐ ಮಂಜೇಶ್ವರ್ ಚಂದಾವರ, ಪೊಲೀಸ್ ಸಿಬ್ಬಂದಿ ಮಹಾವೀರ, ರಮೇಶ್, ಸಂತೋಷ್ ಅಮಾನತುಗೊಳಿಸಲಾಗಿದೆ. 

ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕು ತುಂಬಿದ ಲಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್