ಶ್ರೀರಾಮ ತಂಗಿದ್ದ ಸ್ಥಳಗಳಿಗೆ ಭೇಟಿ; ಯುವಕನ 6000 ಕಿಮೀ ಸೈಕಲ್‌ ಯಾತ್ರೆ!

By Kannadaprabha News  |  First Published Jul 13, 2023, 4:43 AM IST

ಉತ್ತರಪ್ರದೇಶದ ಅಯೋಧ್ಯೆ ನಿವಾಸಿ ಶ್ರೀರಾಮ ಸಾವಂತ ಎಂಬ ಯುವಕ ಸುಮಾರು 6000 ಕಿಮೀ ಸæೖಕಲ್‌ ಯಾತ್ರೆ ಕæೖಗೊಂಡಿದ್ದು, ಜಿಲ್ಲೆಯ ಆಲಮೇಲದಲ್ಲಿ ಪೌರಾಣಿಕ ಮಂದಿರಕ್ಕೆ ಭೇಟಿ ನೀಡಿ ಸೋಮವಾರ ವಿಜಯಪುರ ನಗರಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು.


 ವಿಜಯಪುರ (ಜು.13) : ಮರ್ಯಾದಾ ಪುರುಷೋತ್ತಮ ಭಗವಾನ ಶ್ರೀ ರಾಮ ವನವಾಸ ಸಾಗಿದ ಸ್ಥಳಗಳನ್ನು ಜನರಲ್ಲಿ ಪರಿಚಯಿಸಿ ವಿವಿಧ ಸ್ಥಳಗಳಲ್ಲಿ ಇದ್ದ ಪೌರಾಣಿಕ ಮಂದಿರಗಳಿಗೆ ಹಾಗೂ ಭಗವಾನ ಶ್ರಿ ರಾಮ ತಂಗಿದ 250ಕ್ಕಿಂತ ಹೆಚ್ಚಿನ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಮತ್ತು ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಉತ್ತರಪ್ರದೇಶದ ಅಯೋಧ್ಯೆ ನಿವಾಸಿ ಶ್ರೀರಾಮ ಸಾವಂತ ಎಂಬ ಯುವಕ ಸುಮಾರು 6000 ಕಿಮೀ ಸæೖಕಲ್‌ ಯಾತ್ರೆ ಕæೖಗೊಂಡಿದ್ದು, ಜಿಲ್ಲೆಯ ಆಲಮೇಲದಲ್ಲಿ ಪೌರಾಣಿಕ ಮಂದಿರಕ್ಕೆ ಭೇಟಿ ನೀಡಿ ಸೋಮವಾರ ವಿಜಯಪುರ ನಗರಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು.

98 ದಿನಗಳ ಹಿಂದೆ ಅಯೋಧ್ಯಾ ನಗರದಿಂದ ಆರಂಭಿಸಿದ ಯಾತ್ರೆ ಉತ್ತರಪ್ರದೇಶ ಮಧ್ಯಪ್ರದೇಶ, ಜಾರ್ಖಂಡ, ಛತ್ತಿಸಗಡ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮಾರ್ಗವಾಗಿ ಪ್ರತಿದಿನ ಕನಿಷ್ಠ 100 ಕಿಮೀ ಶ್ರಮಿಸಿ ರಾಮೇಶ್ವರಂಗೆ ತಲುಪಲಿದೆ.

Tap to resize

Latest Videos

ರಾಮ ಮಂದಿರಕ್ಕೆ ಹನುಮ ನಾಡಿನಿಂದ ಮೃತ್ತಿಕೆ ಸಂಗ್ರಹ ಶೀಘ್ರ: ಸೂಲಿಬೆಲೆ

ವಿಜಯಪುರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಭಿಷೇಕ ಸಾವಂತ, ಶ್ರೀರಾಮ ಅವರು ಸೀತಾಣ್ವೇಷಣೆ ಹಾಗೂ ವನವಾಸದ ಸಂದರ್ಭದಲ್ಲಿ ತಂಗಿದ್ದ ಸ್ಥಳಗಳನ್ನು ಆಯಾ ರಾಜ್ಯ ಸರ್ಕಾರಗಳು ಅಭಿವೃದ್ಧಿಪಡಿಸಿ ಆಯಾ ಸ್ಥಳಗಳಿಗೆ ಮೂಲ ಸೌಕರ್ಯ ಒದಗಿಸಿ, ಜೀರ್ಣೋದ್ಧಾರ ಮಾಡಲು ಮನವಿ ಮಾಡಿದ್ದಾರæ. ನನ್ನ ಈ 6000 ಕಿಮೀ ಸæೖಕಲ್‌ ಯಾತ್ರೆಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತರ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ವಿಜಯಪುರದ ಡಾ.ಜಾವೇದ್‌ ಜಮಾದ್‌ ಮಾರ್ಗದರ್ಶನ ನೀಡಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ನನಗೆ ಸಹಾಯ, ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದರು.

ಶ್ರೀರಾಮ ನವಮಿ ಉತ್ಸವ ಸಮಿತಿ ಅದ್ಯಕ್ಷ ಉಮೇಶ ವಂದಾಲ ಮಾತನಾಡಿ, ಯುವಕರು ಶ್ರೀರಾಮನ ಆದರ್ಶಗಳನ್ನು ರೂಢಿಸಿಕೊಂಡು ಮುಂಬರುವ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಾಮ ಮಂದಿರ, ಶಿಲಾಸ್ತಂಭಗಳು ಇರುವ ಐತಿಹಾಸಿಕ ಮಂದಿರಗಳ ಜೀರ್ಣೋದ್ಧಾರ ಮಾಡಲು ನಾವೆಲ್ಲರೂ ಶ್ರಮಿಸುತ್ತೇವೆ ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತರ ಫೆಡರೇಶನ್‌ನ ಅಧ್ಯಕ್ಷರ ಡಾ.ಜಾವೇದ್‌ ಜಮಾದಾರ, ಯುವ ಮುಖಂಡ ರಾಜು ಗಚ್ಚಿನಮಠ, ಶಿವಾನಂದ ಭೂಯ್ಯಾರ, ಮಹೇಶ ಬಿದನೂರ, ಪ್ರಕಾಶ ರಾಠೋಡ, ಸಂತೋಷ ಯಂಕಪ್ಪಗೋಳ, ಅಪ್ಪು ಪೆದ್ದಿ, ಅಯುಬ್‌ ಕರಜಗಿ, ಶ್ರೀಶೈಲ ಹಿರೇಮಠ, ಬಾಷಾ ಕಾಳೆ, ಸಂದೀಪ ಕುಲಕರ್ಣಿ ಉಪಸ್ಥಿತರಿದ್ದರು.

 

ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ರಾಮಮಂದಿರ ಪೂರ್ಣ

click me!