ಬಳ್ಳಾರಿ: ಗೃಹಲಕ್ಷ್ಮೀ ಹಣ ಕೂಡಿಟ್ಟು ಟಿವಿ ಖರೀದಿಸಿದ ಮಹಿಳೆ!

By Kannadaprabha NewsFirst Published Apr 11, 2024, 2:36 PM IST
Highlights

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುವ ₹2 ಸಾವಿರ ಕೂಡಿಟ್ಟುಕೊಂಡು ಸಂಗನಕಲ್ಲು ಗ್ರಾಮದ ಜೆ.ಅರುಣಾ ಹಾಗೂ ಬಸವರಾಜ್ ಬಡ ದಂಪತಿ ಯುಗಾದಿ ಹಬ್ಬಕ್ಕೆ ಹೊಸ ಟಿವಿ ಖರೀದಿಸಿದ್ದಾರೆ.

ಬಳ್ಳಾರಿ (ಏ.11): ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುವ ₹2 ಸಾವಿರ ಕೂಡಿಟ್ಟುಕೊಂಡು ಸಂಗನಕಲ್ಲು ಗ್ರಾಮದ ಜೆ.ಅರುಣಾ ಹಾಗೂ ಬಸವರಾಜ್ ಬಡ ದಂಪತಿ ಯುಗಾದಿ ಹಬ್ಬಕ್ಕೆ ಹೊಸ ಟಿವಿ ಖರೀದಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮಹಿಳೆಯರ ಆಸರೆಗೆಂದು ನೀಡುವ ಹಣವನ್ನು ಕೂಡಿಟ್ಟುಕೊಂಡು ಬಹುದಿನದ ಆಸೆಯಂತೆ ಟಿವಿ ಖರೀದಿಸಿದ್ದು, ದಂಪತಿ ಈ ಕುರಿತು ನೀಡಿರುವ ಹೇಳಿಕೆ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ವೀಡಿಯೋವನ್ನು ಹೆಚ್ಚು ವೈರಲ್ ಮಾಡಿದ್ದು, ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಬಡಜನರಿಗೆ ಸಹಾಯಕ್ಕೆ ಬಂದಿವೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಪ್ರತಿಕ್ರಿಯಿಸಿದ್ದಾರೆ.

ಯುಗಾದಿ ಹಬ್ಬದಂದೇ ಗೃಹಲಕ್ಷ್ಮೀ ಹಣದಿಂದ ಫ್ರಿಡ್ಜ್ ಖರೀದಿಸಿದ ಮಹಿಳೆ!

ಮನೆಯಲ್ಲಿ ಟಿವಿ ಇರಲಿಲ್ಲ. ದೊಡ್ಡ ಮೊತ್ತ ಕೊಟ್ಟು ಖರೀದಿಸುವ ಶಕ್ತಿಯೂ ನಮಗಿರಲಿಲ್ಲ. ಹೀಗಾಗಿ ಗೃಹಲಕ್ಷ್ಮಿಯ ಹಣವನ್ನು ಹಾಗೆಯೇ ಇಟ್ಟುಕೊಂಡಿದ್ದೆವು. ಯುಗಾದಿ ಹಬ್ಬಕ್ಕೆ ಟಿವಿಗೆ ರಿಯಾಯಿತಿ ಸಿಗುತ್ತದೆ ಎಂಬ ಕಾರಣಕ್ಕಾಗಿ ಕಾದಿದ್ದೆವು. ಹಬ್ಬದ ದಿನದಂದು ₹13,600 ಕೊಟ್ಟು ಟಿವಿ ಖರೀದಿಸಿದ್ದೇವೆ. ಗೃಹಜ್ಯೋತಿಯಿಂದ ಕರೆಂಟ್ ಬಿಲ್ ಸಹ ಕಟ್ಟುತ್ತಿಲ್ಲ. ಹೀಗಾಗಿ ಬಡವರಿಗೆ ಅನುಕೂಲವಾಗಿದೆ ಎಂದು ಜೆ.ಅರುಣಾ ದಂಪತಿ ಹೇಳಿದ್ದಾರೆ.

ಟಿವಿ ಖರೀದಿಸಿದ ಬಿಲ್ ಸಮೇತವಾಗಿ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಕಾಂಗ್ರೆಸ್ ಪಕ್ಷ ಮಹಿಳೆಯರ ಪರವಾಗಿದೆ. ಬಡವರ ಪರವಾಗಿದೆ ಎಂದು ಹೇಳಿಕೊಂಡಿದ್ದಾರೆ.

click me!