ನಡು ರಸ್ತೆಯಲ್ಲಿ ಯೋಧನ ಪತ್ನಿ ಏಕಾಂಗಿ ಹೋರಾಟ: ಯಾಕೆ ಗೊತ್ತಾ?

By Govindaraj SFirst Published Jul 15, 2023, 12:13 PM IST
Highlights

ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಆರೋಪ ಹಿನ್ನಲೆಯಲ್ಲಿ ನಡು ರಸ್ತೆಯಲ್ಲಿ ಯೋಧನ ಪತ್ನಿ ಏಕಾಂಗಿ ಹೋರಾಟ ನಡೆಸಿದ ಘಟನೆ ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಹಂಗರಹಳ್ಳಿಯಲ್ಲಿ ನಡೆದಿದೆ.

ತುಮಕೂರು (ಜು.15): ವಶಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಆರೋಪ ಹಿನ್ನಲೆಯಲ್ಲಿ ನಡು ರಸ್ತೆಯಲ್ಲಿ ಯೋಧನ ಪತ್ನಿ ಏಕಾಂಗಿ ಹೋರಾಟ ನಡೆಸಿದ ಘಟನೆ ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಹಂಗರಹಳ್ಳಿಯಲ್ಲಿ ನಡೆದಿದೆ. ಮಾಗಡಿ, ಹುಲಿಯೂರುದುರ್ಗ, ಸೋಮವಾರಪೇಟೆ ಮಧ್ಯೆ ನಿರ್ಮಾಣ ಆಗುತ್ತಿರುವ ಕೆಶಿಪ್ ರಸ್ತೆಯಲ್ಲಿ ಯೋಧನ ಪತ್ನಿ ಶಶಿಕಲಾ ಮತ್ತು ಮಕ್ಕಳು ಧರಣಿ ಕೂತಿದ್ದಾರೆ. 

2017ರಿಂದ ನಡೆಯುತ್ತಿರುವ ಕಾಮಗಾರಿಗೆ  ನಮ್ಮ ಅಕ್ಕಪಕ್ಕದವರ ಒಂದು ಗುಂಟೆ ಜಮೀನಿಗೆ 1.30ಲಕ್ಷ ಪರಿಹಾರ ನೀಡಿದ್ದಾರೆ. ನಮ್ಮ ಜಮೀನಿಗೆ ಮಾತ್ರ ಒಂದು ಗುಂಟೆಗೆ ಕೇವಲ 6 ಸಾವಿರ ಕೊಟ್ಟಿದ್ದಾರೆ. ನ್ಯಾಯಯುತವಾಗಿ ನಮಗೆ ಪರಿಹಾರ ಬೇಕು ಎಂದು ಶಶಿಕಲಾ ಮನವಿ ಮಾಡಿದ್ದಾರೆ. 15 ಗುಂಟೆ ಜಮೀನಿಗೆ ಪರಿಹಾರ‌ ಸಿಕ್ಕಿಲ್ಲ, ಎಲ್ಲಾ ದಾಖಲೆ‌ ನೀಡಿದ್ದರೂ ನಮಗೆ ಪರಿಹಾರ ನೀಡಿಲ್ಲ. 2021ರಿಂದ ಹೋರಾಟ ಮಾಡುತ್ತಿದ್ದೇವೆ.

Latest Videos

ಜುಲೈ 19 ರಿಂದ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಆರಂಭ: ಲಕ್ಷ್ಮೀ ಹೆಬ್ಬಾಳ್ಕರ್

ಆದ್ರೂ ಯಾರೂ ತಲೆ‌ ಕೆಡಿಸಿಕೊಂಡಿಲ್ಲ. ನ್ಯಾಯಾಲಯದಲ್ಲಿ ನಿಮ್ಮ ಹಣ ಇದೆ ಅಲ್ಲಿಯೇ ಬಿಡಿಸಿಕೊಳ್ಳಿ ಎಂದು ಭೂ ಸ್ವಾಧೀನ ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನು ಶಶಿಕಲಾ ಪತಿ ಕಂಬಯ್ಯ ಜಮ್ಮು ಕಾಶ್ಮೀರದ ಸಿಆರ್‌ಪಿಎಫ್‌ನಲ್ಲಿ ದೇಶ ಕಾಯುತ್ತಿದ್ದಾರೆ. ಕಂಬಯ್ಯರಿಗೆ ರಜೆ ಇಲ್ಲದ ಕಾರಣ ಜನವರಿಯಿಂದ ಅವರು ಊರಿಗೆ ಬಂದಿಲ್ಲ. ಶಶಿಕಲಾ ಅವರಿಗೆ ಗೊತ್ತಿಲ್ಲದೆ ರಾತ್ರೋ ರಾತ್ರಿ ರಸ್ತೆ ಕಾಮಗಾರಿ ಮಾಡುವುದಕ್ಕೆ ಮುಂದಾಗಿದ್ದರಿಂದ ರಸ್ತೆಯಲ್ಲಿಯೇ ಮಕ್ಕಳ ಸಮೇತ  ಶಶಿಕಲಾ ಧರಣಿ ಕುಳಿತಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

ಯೋಧರ ಕವಾಯತ್‌ಗೆ ಅಡ್ಡಿಯಾದ ಮಳೆ: ವಿಜಯಪುರದ ಸೈನಿಕ ಸ್ಕೂಲ್‌ ವಜ್ರ ಮಹೋತ್ಸವ (1963-2023) ಅಂಗವಾಗಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಡೆದ ಭಾರತೀಯ ವಾಯುಸೇನೆ ಯೋಧರಿಂದ ಕವಾಯತು ಪ್ರದರ್ಶನ ಹಾಗೂ ವಾಯುದಳದ ಆರ್ಕೆಸ್ಟ್ರಾ ತಂಡದ ಸಂಗೀತ ಕಾರ್ಯಕ್ರಮ ಮಳೆಯ ಹಿನ್ನಲೆಯಲ್ಲಿ ಪ್ರಾರಂಭದಲ್ಲೇ ರದ್ದಗೊಂಡಿತು. ನಗರದ ವಿವಿಧ ಶಾಲೆ, ಕಾಲೇಜುಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕವಾಯತ್ತು ಕಾರ್ಯಕ್ರಮ ವೀಕ್ಷಿಸಲಾಗದೇ ನಿರಾಶೆಯಿಂದ ವಾಪಸ್‌ ತೆರಳಿದರು.

ಕಾಂಗ್ರೆಸ್‌ನ ಕಣ, ಕಣದಲ್ಲೂ ಹಿಂದೂ ವಿರೋಧಿ ಗುಣವಿದೆ: ಮುತಾಲಿಕ್‌

ನವದೆಹಲಿಯಿಂದ ಆಗಮಿಸಿದ್ದ ವಾಯುಸೇನೆ ಯೋಧರು ಸಂಗೀತ ನಿನಾದಕ್ಕೆ ಆಕರ್ಷಕ ಮತ್ತು ರೋಮಾಂಚನಕಾರಿಯಾದ ರೈಫಲ್‌ ಡ್ರಿಲ್‌ ಪ್ರದರ್ಶಿಸಿದರು. ಪ್ರೇಕ್ಷಕರಿಂದ ಚಪ್ಪಾಳೆ ಬರುತ್ತಿದ್ದಂತೆ ಮಳೆಯೂ ಪ್ರಾರಂಭವಾಯಿತು. ಅತ್ಯಾಕರ್ಷಕ ಹಾಗೂ ಅಭೂತಪೂರ್ವ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸೈನಿಕ ಶಾಲೆ ಪ್ರಾಚಾರ್ಯ ಗ್ರೂಪ್‌ ಕ್ಯಾಪ್ಟನ್‌ ಪ್ರತಿಭಾ ಬಿಸ್ಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಇದ್ದರು.

click me!