ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ನಡುವೆ ಅಪ್ರಾಪ್ತ ಮುಸ್ಲಿಂ ಯುವಕನಿಂದ ಉದ್ರೇಕಕಾರಿ ಸಂದೇಶ!

By Ravi Janekal  |  First Published Jan 22, 2024, 8:39 PM IST

(ಜ.22): ಅಯೋಧ್ಯೆಯ ರಾಮಮಂದಿರ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದು ದಶಕಗಳ ಕನಸು ನನಸಾದ ಸಂಭ್ರಮದ ನಡುವೆ ಆಪ್ರಾಪ್ತ ಮುಸ್ಲಿಂ ಯುವಕನೋರ್ವ ಕೋಮು ಭಾವನೆ ಕೆರಳಿಸುವ ಸಂದೇಶ ಹಾಕಿದ ಘಟನೆ ಕಾರವಾರದಲ್ಲಿ ನಡೆದಿದೆ.


ಕಾರವಾರ,ಉತ್ತರಕನ್ನಡ (ಜ.22): ಅಯೋಧ್ಯೆಯ ರಾಮಮಂದಿರ ಗರ್ಭಗುಡಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದು ದಶಕಗಳ ಕನಸು ನನಸಾದ ಸಂಭ್ರಮದ ನಡುವೆ ಆಪ್ರಾಪ್ತ ಮುಸ್ಲಿಂ ಯುವಕನೋರ್ವ ಕೋಮು ಭಾವನೆ ಕೆರಳಿಸುವ ಸಂದೇಶ ಹಾಕಿದ ಘಟನೆ ಕಾರವಾರದಲ್ಲಿ ನಡೆದಿದೆ.

ಕಾರವಾರದ ಖಾಸಗಿ ಕಾಲೇಜು ವಿದ್ಯಾರ್ಥಿಯಾಗಿರುವ ಅಪ್ರಾಪ್ತ ಯುವಕ ರಹೀಲ್ ಎಸ್‌ಎಚ್‌ಕೆ ತನ್ನ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಬಾಬರಿ ಮಸೀದಿ ಫೋಟೊ ಶೇರ್ ಮಾಡಿ 'ಸಬರ್ ಜಬ್ ವಕ್ತ್ ಹಮಾರಾ ಆಯೇಗಾ ತಬ್ ಸಿರ್ ದಡ್ ಸೇ ಅಲಗ್ ಕಿಯೇ ಜಾಯೇಂಗೆ' ಎಂಬ ಉದ್ರೇಕಕಾರಿ ಸಂದೇಶ ಬರೆದುಕೊಂಡಿದ್ದಾನೆ.

Tap to resize

Latest Videos

undefined

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ, ಕೇಜ್ರಿವಾಲ್‌ ಜಾಣತನ, ಕಾಂಗ್ರೆಸ್‌ ಹಿಟ್‌ವಿಕೆಟ್‌!

ಯುವಕನ ಇನ್ಸ್‌ಸ್ಟಾಗ್ರಾಮ್ ಸಂದೇಶದಿಂದ ಆಕ್ರೋಶಗೊಂಡ ಕಾರವಾರದ ನೂರಾರು ಜನರು. ಚಿತ್ತಾಕುಲ ಪೊಲೀಸ್ ಠಾಣೆ ಎದುರು ಜಮಾಯಿಸಿ ಯುವಕನ ಬಂಧನಕ್ಕೆ ಆಗ್ರಹಿಸಿದ್ದಾರೆ. ಇತ್ತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಪ್ಪೊಪ್ಪಿಗೆ ಸಂದೇಶ ಹಾಕಿರುವ ಯುವಕ. ಆಪ್ರಾಪ್ತ ಯುವಕನನ್ನು ವಶಕ್ಕೆ ವಿಚಾರಣೆ ನಡೆಸಿದ ಚಿತ್ತಾಕುಲ ಪೊಲೀಸರು. ಯುವಕನಿಂದ ತಪ್ಪೊಪ್ಪಿಗೆ ಬಳಿಕ ಠಾಣೆ ಮುಂದೆ ಜಮಾಯಿಸಿದ್ದ ನೂರಾರು ಯುವಕರು ವಾಪಸ್ ತೆರಳಿದ್ದಾರೆ. ಯಾರೂ ದೂರು ನೀಡದ ಹಿನ್ನೆಲೆ ಆಪ್ರಾಪ್ತ ಯುವಕನಿಗೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ.

click me!