Fake news ಸಿಕ್ಕಿಂ ಮೂಲದ ವ್ಯಕ್ತಿಗೆ ಚೈನೀಸ್‌ ಎಂದು ಹಲ್ಲೆ ಆರೋಪ ಸುಳ್ಳು ಸುದ್ದಿ

By Kannadaprabha News  |  First Published Aug 20, 2023, 5:14 AM IST

ಸಿಕ್ಕಿಂ ಮೂಲದ ವ್ಯಕ್ತಿ ಪಾರ್ಟಿ ಮುಗಿಸಿ ಮನೆಗೆ ಬರುವಾಗ ಮಾರ್ಗ ಮಧ್ಯೆ ಮೂರು ದುಷ್ಕರ್ಮಿಗಳು ಚೈನೀಸ್‌ ಎಂದು ಕಿಚಾಯಿಸಿ ಹಲ್ಲೆ ಮಾಡಿದ ಆರೋಪದ ಸುಳ್ಳು ಎಂಬುದು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.


ಬೆಂಗಳೂರು (ಆ.20) :  ಸಿಕ್ಕಿಂ ಮೂಲದ ವ್ಯಕ್ತಿ ಪಾರ್ಟಿ ಮುಗಿಸಿ ಮನೆಗೆ ಬರುವಾಗ ಮಾರ್ಗ ಮಧ್ಯೆ ಮೂರು ದುಷ್ಕರ್ಮಿಗಳು ಚೈನೀಸ್‌ ಎಂದು ಕಿಚಾಯಿಸಿ ಹಲ್ಲೆ ಮಾಡಿದ ಆರೋಪದ ಸುಳ್ಳು ಎಂಬುದು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಹಲ್ಲೆ ಆರೋಪದಡಿ ದೂರು ನೀಡಿದ್ದ ಸಿಕ್ಕಂ ಮೂಲದ ದಿನೇಶ್‌ ಸುಬ್ಬ(Dinesh subba) (30) ಮದ್ಯದ ಅಮಲಿನಲ್ಲಿ ಕಟ್ಟಡವೊಂದರ ಮೆಟ್ಟಿಲುಗಳ ಮೇಲಿಂದ ಆಯತಪ್ಪಿ ಬಿದ್ದು ಗಾಯಗೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Tap to resize

Latest Videos

ಸುಳ್ಳು ಸುದ್ದಿ ತಡೆ ಕಾನೂನು ರಚನೆಗೆ ತಜ್ಞ ಸಮಿತಿ: ಸಚಿವ ಪರಮೇಶ್ವರ್‌

ಪಶ್ಚಿಮ ಸಿಕ್ಕಂನ ರಿಂನ್‌ಚೆನ್ಪಾಂಗ್‌ ಮೂಲದ ದಿನೇಶ್‌ ಸುಬ್ಬ ಕಳೆದ ಏಳು ತಿಂಗಳಿಂದ ಎಲೆಕ್ಟ್ರಾನಿಕ್‌ ಸಿಟಿಯ ರೆಸ್ಟೋರೆಂಟ್‌ವೊಂದರಲ್ಲಿ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ. ಪತ್ನಿ ಮತ್ತು ಮೂರು ತಿಂಗಳ ಮಗು ಜತೆಗೆ ದೊಡ್ಡತೋಗೂರಿನಲ್ಲಿ ನೆಲೆಸಿದ್ದಾನೆ. ಆ.14ರಂದು ದಿನೇಶ್‌ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಹೋದ್ಯೋಗಿ ಹಾಗೂ ಸಿಕ್ಕಿಂ ಮೂಲದ ಸ್ನೇಹಿತ ಪಾರ್ಟಿ ಕೊಡಿಸುವಂತೆ ಕೇಳಿದ್ದಾರೆ. ಹೀಗಾಗಿ ಆ.15ರಂದು ರಾತ್ರಿ 11.30ರ ವರೆಗೆ ಕೆಲಸ ಮಾಡಿ ಬಳಿಕ ಮೂವರು ಬಾರ್‌ಗೆ ತೆರಳಿ ಮುಂಜಾನೆ 2ರವರೆಗೆ ಪಾರ್ಟಿ ಮಾಡಿದ್ದಾರೆ. ಬಳಿಕ ಬಾರ್‌ನಿಂದ ಹೊರಗೆ ಬಂದು ಕೆಲ ಹೊತ್ತು ಮಾತನಾಡಿ ನಂತರ ಮೂವರು ತಮ್ಮ ಮನೆಗಳತ್ತ ಹೊರಟ್ಟಿದ್ದಾರೆ.

ಆಯತಪ್ಪಿ ಮೆಟ್ಟಿಲ ಮೇಲೆ ಬಿದ್ದ!

ಅದರಂತೆ ದಿನೇಶ್‌ ಮುಂಜಾನೆ 3ರ ಸುಮಾರಿಗೆ ದೊಡ್ಡತೋಗೂರಿನ ಪಿಸಿಆರ್‌ ಗಾರ್ಡನ್‌ ರಸ್ತೆಯಲ್ಲಿ ಮನೆಗೆ ನಡೆದು ಹೋಗುತ್ತಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿ ಕಟ್ಟಡವೊಂದರ ಮೆಟ್ಟಿಲು ಹತ್ತಿದ್ದಾನೆ. ಈ ವೇಳೆ ಆಯತಪ್ಪಿ ಮೆಟ್ಟಿಲುಗಳ ಮೇಲೆ ಬಿದ್ದಿದ್ದಾನೆ. ಈ ವೇಳೆ ಮುಖಕ್ಕೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಆದರೆ, ಮದ್ಯದ ಅಮಲಿನಲ್ಲಿದ್ದ ದಿನೇಶ್‌ ಪೊಲೀಸರಿಗೆ ಹೇಳಿಕೆ ನೀಡುವಾಗ ಚೈನೀಸ್‌ ಎಂದು ಕಿಚಾಯಿಸಿ ಮೂವರು ಹಲ್ಲೆ ಮಾಡಿದರು ಎಂದು ತಪ್ಪು ಮಾಹಿತಿ ನೀಡಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು, ಆರೋಪಿ ನಡೆದು ಬಂದ ಮಾರ್ಗದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಸಿದಾಗ, ಮದ್ಯದ ಅಮಲಿನಲ್ಲಿ ದಿನೇಶ್‌ ಆಯತಪ್ಪಿ ಕಟ್ಟಡವೊಂದರ ಮೆಟ್ಟಿಲುಗಳ ಮೇಲೆ ಬಿದ್ದಿರುವುದು ಗೊತ್ತಾಗಿದೆ. ಚೈನೀಸ್‌ ಎಂದು ಕಿಚಾಯಿಸಿ ಹಲ್ಲೆ ಮಾಡಿದ ಆರೋಪ ಸುಳ್ಳು ಎಂಬುದು ಖಚಿತವಾಗಿದೆ.

ಮಣಿಪುರ ಮಹಿಳೆಯ ಬೆತ್ತಲೆ ಪರೇಡ್‌: ಪರೇಡ್‌ಗೆ ಆರ್‌ಎಸ್ಎಸ್ ನಂಟು ಎಂದವರ ವಿರುದ್ಧ ಕೇಸ್

ಸಿಕ್ಕಿಂ ಮೂಲದ ವ್ಯಕ್ತಿಗೆ ಚೈನೀಸ್‌ ಎಂದು ಕಿಚಾಯಿಸಿ ಹಲ್ಲೆ ಮಾಡಿದ ಆರೋಪ ಸುಳ್ಳು. ಮದ್ಯದ ಅಮಲಿನಲ್ಲಿ ಬಿದ್ದು ಗಾಯಗೊಂಡಿದ್ದ ಆತ ಗಾಬರಿಯಲ್ಲಿ ಪೊಲೀಸರ ಬಳಿ ಹಲ್ಲೆಯಾಗಿದೆ ಎಂದು ತಪ್ಪು ಮಾಹಿತಿ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

-ಸಿ.ಕೆ.ಬಾಬಾ, ಆಗ್ನೇಯ ವಿಭಾಗದ ಡಿಸಿಪಿ.

click me!