Vijayapura: ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು 12 ದಿನಗಳಿಂದ ಅರೆಬೆತ್ತಲೆಯಾಗಿ ಕೂಡಿಸಿದ ಪೆಟ್ರೋಲ್ ಬಂಕ್ ಮಾಲೀಕರು!

Published : Jun 26, 2023, 01:21 PM IST
Vijayapura: ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು 12 ದಿನಗಳಿಂದ ಅರೆಬೆತ್ತಲೆಯಾಗಿ ಕೂಡಿಸಿದ ಪೆಟ್ರೋಲ್ ಬಂಕ್ ಮಾಲೀಕರು!

ಸಾರಾಂಶ

ವಾಹನಗಳಿಗೆ ಡೀಸೆಲ್ ಹಾಕಿಸಿದ್ದ ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಬಂಕ್​ನಲ್ಲಿ ಕೂರಿಸಿದ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ (ಜೂ.26): ವಾಹನಗಳಿಗೆ ಡೀಸೆಲ್ ಹಾಕಿಸಿದ್ದ ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಬಂಕ್​ನಲ್ಲಿ ಕೂರಿಸಿದ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಾಹನಗಳಿಗೆ ಡೀಸೆಲ್ ಹಾಕಿಸಿದ್ದ ಬಾಕಿ ಹಣ ವಸೂಲಿಗೆ ಮೌನೇಶ್ ಪತ್ತಾರ ಎಂಬುವವರನ್ನು ಅರೆಬೆತ್ತಲೆಗೊಳಿಸಿ ಮುದ್ದೇಬಿಹಾಳ ಪಟ್ಟಣದಲ್ಲಿರುವ ಭರತ ಭೋಸಲೆ ಬಂಕ್​ನಲ್ಲಿ ಕೂಡಿಹಾಕಿದ್ದಾರೆ. 

10 ರಿಂದ 15 ಲಕ್ಷ ಡೀಸೆಲ್ ಬಾಕಿ ಹಣ ನೀಡುವಂತೆ ಕಳೆದ 12 ದಿನಗಳಿಂದ ಮೌನೇಶ್ ಪತ್ತಾರನನ್ನು ಅರೆಬೆತ್ತಲೆಗೊಳಿಸಿ ಬಂಕ್​ನಲ್ಲೇ ಕೂಡಿ ಹಾಕಿದ್ದಾರೆ. ತಮಿಳುನಾಡು ಮೂಲದ ಶಿವಶಕ್ತಿ ಬೋರ್‌ವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮೌನೇಶ, ವಾಹನಗಳಿಗೆ ಬೋಸಲೆ ಅವರ ಬಂಕ್‌ನಲ್ಲಿ ಡೀಸೆಲ್ ಹಾಕಿಸುತ್ತಿದ್ದ. ಆದರೆ ಶಿವಶಕ್ತಿ ಬೋರ್‌ವೆಲ್ಸ್​ನವರು ಡೀಸೆಲ್ ಬಾಕಿ ಹಣ ನೀಡದೇ ಹೋಗಿದ್ದಾರೆ. 

ಹೀಗಾಗಿ ಬಾಕಿ ಹಣಕ್ಕಾಗಿ ಮೌನೇಶ ಪತ್ತಾರನನ್ನು ಅರೆಬೆತ್ತಲೆಗೊಳಿಸಿ ಕೂರಿಸಿ ಹಣ ವಸೂಲಿಗೆ ಬಂಕ್‌ನವರು ಮುಂದಾಗಿದ್ದೆರೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮೌನೇಶ ಬಿಡುಗಡೆಗಾಗಿ ಕಳೆದ ಮೂರು ದಿನಗಳಿಂದ ಭೋಸಲೆ ಪೆಟ್ರೋಲ್ ಡೀಸೆಲ್ ಬಂಕ್‌ನಲ್ಲಿ ಪತ್ನಿ ರಂಗಮ್ಮ, ಮಕ್ಕಳಾದ ಸೌಮ್ಯ, ಸ್ನೇಹಾ, ಸಂದೇಶ ಹಾಗೂ ಚಂದ್ರು ಕಾದು ಕುಳಿತಿದ್ದಾರೆ. ಇನ್ನು ಮೌನೇಶ ಕುಟುಂಬಸ್ಥರನ್ನು ಪೊಲೀಸ್ ಠಾಣೆಗೂ ತೆರಳಲು ಬಿಡದೇ ಬಂಕ್ ಮಾಲೀಕರು ಸತಾಯಿಸುತ್ತಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದೆ.

ಬಸ್‌ ನಿಲ್ಲಿಸದ ಚಾಲಕ: ತಲೆ ಕೆಟ್ಟು ಬಸ್‌ಗೆ ಕೊಪ್ಪಳದ ಮಹಿಳೆಯಿಂದ ಕಲ್ಲೇಟು!

ಸರ್ಕಾರ ಪೌರ ನೌಕರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ: ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ನೌಕರ ಬಾಂಧವರಿಗೆ ಸರ್ಕಾರ ರೂ.2 ಸಾವಿರ ಸಂಕಷ್ಟಭತ್ಯೆ ನೀಡಬೇಕೆಂದು ಆದೇಶ ಮಾಡಿದ್ದರೂ ವಿಜಯಪುರ ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಈ ಸಂಕಷ್ಟಭತ್ಯೆ ಅಲ್ಲಿನ ಸ್ಥಳೀಯ ನಗರ ಸಂಸ್ಥೆಗಳು ನೀಡುತ್ತಿಲ್ಲ. ಇದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ ಹೇಳಿದರು. ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಪುರಸಭೆಯ ಪೌರ ನೌಕರ ಬಾಂಧವರು ಅವರನ್ನು ಸನ್ಮಾನಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರ ಬಾಂಧವರು ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವೆಡೆ ಕಳೆದ ಆರು ವರ್ಷಗಳಿಂದ ವೇತನ ಇಲ್ಲದೇ ಪೌರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಪ್ರತಿನಿತ್ಯ ಬೆಳಗ್ಗೆ ನೀಡುವ ಉಪಹಾರಕ್ಕೆ 25 ರೂ.ದಿಂದ 35 ರೂ.ಹೆಚ್ಚಳ ಮಾಡಿದರೂ ಕೆಲವೆಡೆ ಸಮರ್ಪಕವಾಗಿ ಅವರಿಗೆ ಉಪಹಾರ ನೀಡುತ್ತಿಲ್ಲ. ಪ್ರತಿನಿತ್ಯ ಮೊಟ್ಟೆನೀಡಬೇಕೆಂದು ಆದೇಶವಿದ್ದರೂ ನೀಡುತ್ತಿಲ್ಲ. ನೂತನ ರಾಜ್ಯ ಸರ್ಕಾರಕ್ಕೆ ನಮ್ಮ ಬಾಂಧವರ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಲಾಗಿದೆ. ಸಿಎಂ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು.

ಕಿಟಕಿಯಿಂದ ಬಸ್‌ ಹತ್ತುವಾಗ ಮಹಿಳೆ ಕೈ ತುಂಡು ಶುದ್ಧಸುಳ್ಳು: ಕೆಎಸ್‌ಆರ್‌ಟಿಸಿ ಸ್ಪಷ್ಟನೆ

ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಿದ್ದಾಗ ರಾಜ್ಯದಲ್ಲಿರುವ 24 ಸಾವಿರ ಪೌರ ನೌಕರ ಬಾಂಧವರನ್ನು ಸಕ್ರಮ ಮಾಡಿ ಆದೇಶ ಮಾಡಲಾಗಿತ್ತು. ಇದುವರೆಗೂ ಅವರನ್ನು ಸಕ್ರಮ ಮಾಡಿಲ್ಲ. ಸ್ಥಳೀಯ ನಗರ ಸಂಸ್ಥೆಗಳಲ್ಲಿ ಚಾಲಕ, ನೀರು ಸರಬರಾಜು ಸಿಬ್ಬಂದಿ, ಲೆಕ್ಕಿಗ ಸೇರಿದಂತೆ ಹಲವಾರು ಜನರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಈಗಾಗಲೇ ಕೆಲವರು ಮೃತ ಪಟ್ಟಿದ್ದಾರೆ, ನಿವೃತ್ತರಾಗಿದ್ದಾರೆ, ಕೆಲವರು ನಿವೃತ್ತ ಅಂಚಿನಲ್ಲಿದ್ದಾರೆ. ಇವರ ನೇಮಕಾತಿ ಖಾಯಂ ಮಾಡಿದರೆ ಅವರ ಜೀವನಕ್ಕೆ ಅನುಕೂಲವಾಗುತ್ತದೆ. ಸರ್ಕಾರ ನಮ್ಮ ಸಿಬ್ಬಂದಿಗಳಲ್ಲಿಯೇ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ರಾಜ್ಯ ಸರ್ಕಾರ ನಮ್ಮ ನೌಕರ ಬಾಂಧವರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್