ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವಹೇಳನ; ಆರೋಪಿ ಬಂಧನ

By Ravi JanekalFirst Published Feb 11, 2024, 5:17 PM IST
Highlights

ಫೆಬ್ರವರಿ 8ರಂದು ನಡೆದ ರಾಜ್ಯಮಟ್ಟದ ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಅವಹೇಳನಕಾರಿ ಪದ ಬಳಸಿ ನಿಂದಿಸಿದ ಪ್ರಕರಣದಲ್ಲಿ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು (ಫೆ.11) : ಫೆಬ್ರವರಿ 8ರಂದು ನಡೆದ ರಾಜ್ಯಮಟ್ಟದ ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಅವಹೇಳನಕಾರಿ ಪದ ಬಳಸಿ ನಿಂದಿಸಿದ ಪ್ರಕರಣದಲ್ಲಿ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮುನೇಗೌಡ(50) ಬಂಧಿತ ಆರೋಪಿ. ದೊಡ್ಡಬಳ್ಳಾಪುರ ನಿವಾಸಿಯಾಗಿರುವ ಮುನೇಗೌಡ. ಫೆ.8ರಂದು ಜನಸ್ಪಂದನ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದ ಮುನೇಗೌಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದ ವೇಳೆ ಕೂಗಾಡಿದ್ದ ಆರೋಪಿ. ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಅವಹೇಳನಕಾರಿ ಪದ ಬಳಸಿ ನಿಂದಿಸಿದ್ದರು. ಅಲ್ಲದೇ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂಬ ಆರೋಪಿಸಿ ಮುನೇಗೌಡರ ವಿರುದ್ಧ ದೂರು ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು.

Latest Videos

ಬೆಂಗಳೂರು ಜನ ಸ್ಪಂದನ: ನೂರ್ ಫಾತಿಮಾಗೆ ಎಂಬಿಬಿಎಸ್‌ ಮಾಡಲು 10 ಲಕ್ಷ ರೂ. ಕೊಟ್ಟ ಸಿಎಂ ಸಿದ್ದರಾಮಯ್ಯ!

ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಮುನೇಗೌಡ, ಡಿಎಲ್‌ ವಿಚಾರದಲ್ಲಿ ತಾಳ್ಮೆ ಕಳೆದುಕೊಂಡು ಮಾತಾಡ್ಬಿಟ್ಟೆ ತಪ್ಪಾಯ್ತು ಎಂದಿರೋ ಮುನೇಗೌಡ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಧಾನಸೌಧ ಪೊಲೀಸರು.

ಮುಖ್ಯಮಂತ್ರಿಗೆ ಅಹವಾಲು ನೀಡಬೇಕೆ? ಫೆ.8ರಂದು ವಿಧಾನಸೌಧದ ಎದುರು ನಡೆಯಲಿರುವ ಬೃಹತ್ ಜನಸ್ಪಂದನ ಮಿಸ್ ಮಾಡಬೇಡಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ‘ಜನಸ್ಪಂದನ’ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸು ಕಂಡ ಎರಡೂವರೆ ತಿಂಗಳ ಬಳಿಕ ಫೆ.8ರಂದು ವಿಧಾನಸೌಧದ ಮುಂಭಾಗ ರಾಜ್ಯಮಟ್ಟದ 2ನೇ ಜನಸ್ಪಂದನ ಕಾರ್ಯಕ್ರಮಕ್ಕೆ ಆಯೋಜಿಸಿದ್ದರು. ಎರಡನೇ ಜನಸ್ಪಂದನ ಕಾರ್ಯಕ್ರಮದಲ್ಲೂ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿ ಬರೋಬ್ಬರಿ 12,372 ಮಂದಿ ಅಹವಾಲು ಸಲ್ಲಿಕೆ ಮಾಡಿದ್ದರು. ಈ ಪೈಕಿ ಸ್ಥಳದಲ್ಲೇ 246 ಅರ್ಜಿ ಇತ್ಯರ್ಥಪಡಿಸಿದ್ದು ವಿಶೇಷವಾಗಿತ್ತು. ಇನ್ನುಳಿದ 12,126 ಅರ್ಜಿಗಳನ್ನು ಒಂದು ತಿಂಗಳ ಒಳಗಾಗಿ ಇತ್ಯರ್ಥಪಡಿಸುವಂತೆ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ.  

click me!