ಮಾಟ, ಮೋಡಿ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದ ಕುಮಟಾ ಮಂತ್ರವಾದಿಗೆ ಯುವಕ ಹಿಗ್ಗಾಮುಗ್ಗಾ ಕ್ಲಾಸ್

Published : Jul 01, 2023, 02:49 PM IST
ಮಾಟ, ಮೋಡಿ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದ ಕುಮಟಾ ಮಂತ್ರವಾದಿಗೆ ಯುವಕ ಹಿಗ್ಗಾಮುಗ್ಗಾ ಕ್ಲಾಸ್

ಸಾರಾಂಶ

ಜನರ ಮುಗ್ಧತೆ ಬಂಡವಾಳ ಮಾಡಿಕೊಂಡು ಮಾಟ, ಮೋಡಿ ಹೆಸರಿನಲ್ಲಿ ಮೋಸ ಮಾಡುತ್ತಿದ್ದ ಕುಮಟಾದ ಮಂತ್ರವಾದಿಗೆ ಯುವಕನೋರ್ವ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

ಕಾರವಾರ (ಜು.1) : ಜನರ ಮುಗ್ಧತೆ ಬಂಡವಾಳ ಮಾಡಿಕೊಂಡು ಮಾಟ, ಮೋಡಿ ಹೆಸರಿನಲ್ಲಿ ಮೋಸ ಮಾಡುತ್ತಿದ್ದ ಕುಮಟಾದ ಮಂತ್ರವಾದಿಗೆ ಯುವಕನೋರ್ವ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

ಮಂಜುನಾಥ್ ಕರಿಯಗೌಡ ಎಂಬ ಆಮದಳ್ಳಿಯ ಯುವಕ ಮಂತ್ರವಾದಿಗೆ ಸರಿಯಾಗಿ ಬೆಂಡೆತ್ತಿದ್ದಾನೆ. ಸುಮಾರು 20 ಮನೆಗಳಿಗೆ ಮಾಟ, ಮೋಡಿ ತೆಗೆಯುವ ಹೆಸರಿನಲ್ಲಿ ತಲಾ 20ರಿಂದ 30 ಸಾವಿರ ರೂ. ಪೀಕಿಸಿದ್ದ ಖತರ್ನಾಕ್ ಮಂತ್ರವಾದಿ. ಅವನ ವಂಚನೆ ತಿಳಿದು ಮನೆಯಿಂದ ಓಡಿಸಿದ ಯುವಕ.

ತನ್ನೆದುರೇ ಸೆಕ್ಸ್‌ ಮಾಡುವಂತೆ ಹೇಳಿ ಅವರ ಮೇಲೆ ಫೆವಿಕ್ವಿಕ್‌ ಸುರಿದು ಕೊಂದ ಮಂತ್ರವಾದಿ!

ನಡೆದಿದ್ದೇನು?

ಮನೆಯ ಸಮಸ್ಯೆಗಳ ಬಗ್ಗೆ ಮಂಜುನಾಥ್ ಕರಿಯಗೌಡ ಹಾಗೂ ಅವರ ಅಕ್ಕನ ಕುಟುಂಬ ತೋಡೂರಿನ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದರು. ಆ ವ್ಯಕ್ತಿ ಆ ವ್ಯಕ್ತಿ ನಿಮ್ಮ ಮನೆಗೆ ಮಾಟ ಮಾಡಿದ್ದಾರೆ, ಅದನ್ನು ತೆಗೆಯಿಸಬೇಕು ಎಂದು ಮಂಜುನಾಥ್ ಹಾಗೂ ಅವರ ಅಕ್ಕನ ಕುಟುಂಬದ ಜತೆ ಹೇಳಿದ್ದ ಮತ್ತು ಇದಕ್ಕಾಗಿ ಕುಮಟಾದ ಮಂತ್ರವಾದಿಯೊಬ್ಬನನ್ನು ಸಂಪರ್ಕಿಸಲು ಕೂಡಾ ಸೂಚಿಸಿದ್ದ ಅದರಂತೆ ಕಳೆದ ಸೋಮವಾರ ಮಧ್ಯಾಹ್ನ 12 ಗಂಟೆಗೆ ಮಂಜುನಾಥ್ ಮನೆಗೆ ಬಂದಿರುವ  ಮಂತ್ರವಾದಿ ನಾಟಕವಾಡಲು ಶುರು ಮಾಡಿದ್ದಾನೆ.

ಮನೆಯವರಿಂದ 12 ಸಾವಿರ ರೂ. ಪೀಕಿದ್ದ ಮಂತ್ರವಾದಿ:

ಯುವಕನ ಮನೆಗೆ ಬಂದ ಮಂತ್ರವಾದಿ ತಾನೇ ಬಟ್ಟೆಯಲ್ಲಿ ತಗಡು ತುಂಡೊಂದನ್ನು ಸುತ್ತಿ ತಂದಿದ್ದಲ್ಲದೇ, ಅದಕ್ಕಾಗಿ ಮನೆಯವರಿಂದ 12,000ರೂ. ಹಣ ಪೀಕಿಸಿದ್ದ ಖತರ್ನಾಕ್ ಮಂತ್ರವಾದಿ.  ಮನೆಯವರ ಎದುರಲ್ಲಿ ಕಾಲ ಬೆರಳಿನಲ್ಲಿ ಮಣ್ಣು ಒತ್ತಿ ಮೋಡಿ ತೆಗೆಯುವ ನಾಟಕ ಮಾಡಿದ್ದಾನೆ. ತನ್ನ ಕೈಯಲ್ಲಿದ್ದ ಬಟ್ಟೆಯಲ್ಲಿ ಸುತ್ತಿದ್ದ ತಗಡನ್ನು ಮೆಲ್ಲಗೆ ನೆಲಕ್ಕೆ ಹಾಕಿ ಮಣ್ಣಿನಡಿಯಿಂದ ತೆಗೆಯುವ ರೀತಿ ಡ್ರಾಮಾ ಮಾಡಿರುವ ಖದೀಮ. ಬಳಿಕ  ಮನೆಯವರನ್ನೆಲ್ಲಾ ಒಂದೊಂದು ಕೆಲಸಕ್ಕೆ ಕಳುಹಿಸಿ ಯಾರೂ ಇಲ್ಲದಾಗ ತಗಡನ್ನು ಮೆಲ್ಲ ಕಾಲಡಿಗೆ  ಹಾಕಿದ್ದಾನೆ. ಬಳಿಕ ಅಲ್ಲಿಂದ ಹಣ ಪೀಕಿಸಿ ನೇರವಾಗಿ  ಬಿಣಗಾದಲ್ಲಿರುವ ಮಂಜುನಾಥ್ ಅವರ ಅಕ್ಕ ನಾಗವೇಣಿ ಎಂಬವರ ಮನೆಗೆ ಮಧ್ಯಾಹ್ನ 3 ಗಂಟೆಗೆ ಬಂದಿರುವ ಮಂತ್ರವಾದಿ. ಅಲ್ಲೂ ಕೂಡಾ ಅದೇ‌ ರೀತಿಯ ನಾಟಕವಾಡಲು ಪ್ರಾರಂಭಿಸಿದ್ದಾನೆ. ಇತ್ತ ಮಂತ್ರವಾದಿಯ ಮೇಲೆ ಸಂಶಯ ಬಂದು ಯುವಕ ಮಂಜುನಾಥ ನೇರವಾಗಿ ತನ್ನ ಅಕ್ಕ ನಾಗವೇಣಿಯ ಮನೆಗೆ ಬಂದಿದ್ದಾನೆ. ಇಲ್ಲೂ ಕೂಡ ಮೋಡಿ ತೆಗೆಯುವ ನಾಟಕವಾಡ್ತಾ ಮನೆಯವರಿಗೆಲ್ಲಾ ಒಂದೊಂದು ಕೆಲಸ ಹೇಳಿ ಕಳಿಸಿದ್ದ ಖದೀಮ!

ಎಲ್ಲರಿಗೂ ಒಂದೊಂದು ಕೆಲಸ ಹೇಳಿದ ಮಂತ್ರವಾದಿ ಮಂಜುನಾಥನಿಗೆ ಹಾರೆಯನ್ನು ತರಲು ಹೇಳಿದ್ದ. ಅದರಂತೆಯೇ ಯುವಕ ಹಾರೆಯನ್ನು ತಂದು ಬಂದ ಸುಳಿವು ಸಿಗದಂತೆ ಮೆಲ್ಲಗೆ ಮಂತ್ರವಾದಿಯ ನಾಟಕ ಕದ್ದು ನೋಡಿರುವ ಯುವಕ ಈ ವೇಳೆ ಮಂತ್ರವಾದಿ ಕಾಲಡಿ ತಗಡನ್ನು ಹಾಕುವುದನ್ನು ಕಂಡಿದ್ದಾನೆ. ಎಲಾ ಇವನಾ ಎಂದವನೇ ಕೂಡಲೇ  ಮಂತ್ರವಾದಿಯನ್ನು ರೆಡ್ ಹ್ಯಾಂಡಾಗಿ ಹಿಡಿದು ಸರಿಯಾಗಿ ಹಿಗ್ಗಾಮುಗ್ಗಾ ಜಾಡಿಸಿದ ಯುವಕ ಮಂಜುನಾಥ ಕರಿಯಗೌಡ. 

ಶ್ರೀದೇವಿ ಎಂದೇಳಿ ಭಗವಾಲ್‌ಗೆ ಗಾಳ ಹಾಕಿದ್ದ ಮಾಂತ್ರಿಕ ರಶೀದ್‌!

ತಾನು ನೀಡಿದ್ದ 12,000ರೂ. ವಾಪಾಸ್ ಪಡೆದು ಮಂತ್ರವಾದಿಯನ್ನು ಮನೆಯಿಂದ ಓಡಿಸಿದ್ದಾನೆ. ಮಂತ್ರವಾದಿಯ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ವಾಟ್ಸಪ್ ಮೂಲಕ‌ ಮಂಜುನಾಥ್ ಶೇರ್ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗಿ ಆಮದಳ್ಳಿ ಹಾಗೂ ಚಿತ್ತಾಕುಲದ ಜನರಿಂದ ತಮಗೂ ಮೋಸ ಆಗಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಮುಗ್ಧತೆ ಬಂಡವಾಳ ಮಾಡಿಕೊಂಡು ಹಳ್ಳಿಯ ಜನರನ್ನು ವಂಚಿಸಿ ಸಾವಿರಾರು ರೂಪಾಯಿ ಹಣ ಪೀಕಿದ್ದಾನೆ. ಇದೀಗ ಮೋಸಗೊಂಡ ಜನರು ಮಂತ್ರವಾದಿಯನ್ನು ಹುಡುಕಲಾರಂಭಿಸಿದ್ದಾರೆ. ಸಿಕ್ಕರೆ ಬೆಂಡೆತ್ತಿಸಿಕೊಳ್ಳೋದಂತೂ ದಿಟ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್