
ಬೆಂಗಳೂರು (ಜ.7): ಹೊಸ ವರ್ಷದ ಆರಂಭದ ದಿನವೇ ಕೆಳಗೆ ಬಿದ್ದ ಮೊಬೈಲ್ ತೆಗೆಯಲು ಟ್ರ್ಯಾಕ್‌ಗೆ ಜಿಗಿದಿದ್ದ ಮಹಿಳೆ ಸ್ವಲ್ಪದರಲ್ಲೇ ಆಪಾಯದಿಂದ ಪಾರಾಗಿದ್ದಳು. ಅದಾದ ಬಳಿಕ ಯುವಕನಿಂದ ಆತ್ಮಹತ್ಯೆ ಯತ್ನ ನಡೆಯಿತು. ಒಂದೇ ವಾರದೊಳಗೆ ಎರಡು ಅನಾಹುತ ನಡೆದರೂ ಇನ್ನೂ ಎಚ್ಚೆತ್ತುಕೊಳ್ಳದ ನಮ್ಮ ಮೆಟ್ರೋ ಸಿಬ್ಬಂದಿ. ಇದೀಗ ನಮ್ಮ ಮೆಟ್ರೋ ಟ್ರ್ಯಾಕ್‌ನಲ್ಲಿ ಬೆಕ್ಕು ಕಾಣಿಸಿಕೊಂಡು ಕ್ಷಣಕಾಲ ಪ್ರಯಾಣಿಕರು ಆತಂಕಕ್ಕೀಡಾದ ಘಟನೆ ನಡೆದುಹೋಗಿದೆ.
ಜೆಪಿ ನಗರ ಮೆಟ್ರೋ ಹಳಿಯಲ್ಲಿ ಶಾಕಿಂಗ್ ದೃಶ್ಯ ಸೆರೆಯಾಗಿದೆ. ಟ್ರ್ಯಾಕ್ ಮೇಲೆ ಬೆಕ್ಕು ಓಡಾಡುವ ದೃಶ್ಯ ಕಂಡು ಬೆಚ್ಚಿಬಿದ್ದ ಪ್ರಯಾಣಿಕರು ಕೂಡಲೇ ಮೆಟ್ರೋ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಗಮನಕ್ಕೆ ತಂದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬೆಕ್ಕು ರಕ್ಷಣೆಗೆ ಮುಂದಾಗ ಸಿಬ್ಬಂದಿ. ಅದರ ಬದಲು ಟ್ರ್ಯಾಕ್ ನಲ್ಲಿದ್ದ ಬೆಕ್ಕನ್ನ ಓಡಿಸಲು ಮುಂದಾಗಿದ್ದಾರೆ. ಅಪ್ಪಿ ತಪ್ಪಿ ಬೆಕ್ಕು ಹೈವೋಲ್ಟೇಜ್ ಪವರ್ ಇರೋ ಕಡೆ ಬಂದಿದ್ರೆ ಏನು ಗತಿ? ಮೆಟ್ರೋ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು.
ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ; ಬದುಕಿದ್ದೇ ಪವಾಡ!
ಬೆಕ್ಕು ಬಂದಿದ್ದು ಹೇಗೆ?
ಬೆಕ್ಕು ಮೆಟ್ರೋ ಒಳಗೆ ಹೋಗಲು ಹೇಗೆ ಸಾಧ್ಯವಾಯಿತು. ಮುಖ್ಯ ಪ್ರವೇಶ ದ್ವಾರದಿಂದಲೇ ಹೋಯಿತೇ? ಯಾರಾದ್ರೂ ಪ್ರಯಾಣಿಕರು ತೆಗೆದುಕೊಂಡು ಹೋಗಿದ್ದರೆ. ಏನೇ ಆಗಲಿ ಸಿಬ್ಬಂದಿ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಪದೇಪದೆ ಸಮೂಹ ಸನ್ನಿಯಂತೆ ಅನಾಹುತಗಳನ್ನು ನಡೆಯುತ್ತಿದ್ದರೂ ಮೆಟ್ರೋ ಸಿಬ್ಬಂದಿ ಮಾತ್ರ ಎಚ್ಚೆತ್ತುಕೊಳ್ಳದೆ ಎಂದಿನಂತೆ ನಿದ್ರಾವಸ್ಥೆಯಲ್ಲಿರುವುದರಿಂದ ಇಂಥ ಅನಾಹುತಗಳು ಮರುಕಳಿಸುತ್ತಲಿವೆ ಎಂಬುದು ದಿಟ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ