ಕರ್ನಾಟಕದಲ್ಲಿ ಬುಧವಾರ ಕೊರೋನಾ ಮಹಾಸ್ಪೋಟ: ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆ

By Suvarna NewsFirst Published Sep 16, 2020, 9:09 PM IST
Highlights

ಕರ್ನಾಟಕದಲ್ಲಿ ಕಳೆದ 24 ಗಂಟೆಗಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಆದ್ರೆ, ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡಿದೆ.

ಬೆಂಗಳೂರು, (ಸೆ.16): ರಾಜ್ಯದಲ್ಲಿ ಇಂದು (ಬುಧವಾರ) 9725 ಜನರಿಗೆ ಕೊರೋನಾ ಸೋಂಕು ತಗುಲಿದ್ದು ,  70 ಜನ ಸೋಂಕಿತರು ಮೃತಪಟ್ಟಿದ್ದಾರೆ. 6583 ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

 ಒಟ್ಟು ಸೋಂಕಿತರ ಸಂಖ್ಯೆ 4,84,990 ಕ್ಕೆ ಏರಿಕೆಯಾಗಿದ್ರೆ, ಇದುವರೆಗೆ ರಾಜ್ಯದಲ್ಲಿ 375809 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ. ಇನ್ನು ಮಹಾಮಾರಿ ಕೊರೋನಾಗೆ  7536 ಜನರು ಸಾವನ್ನಪ್ಪಿದ್ದಾರೆ.

ಕೊರೋನಾ ಲಸಿಕೆ; ಭಾರತೀಯರಿಗೆ ಸಿಹಿ ಸುದ್ದಿ ಕೊಟ್ಟ ರಷ್ಯಾ

ಬೆಂಗಳೂರಿನ ಅಂಕಿ-ಅಂಶ
 ಬೆಂಗಳೂರಿನಲ್ಲಿ ಬುಧವಾರ 3571 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.  27 ಮಂದಿ ಸೋಂಕಿತರು ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1,80,283 ಕ್ಕೆ ಏರಿಕೆಯಾಗಿದೆ . ಮೃತಪಟ್ಟ ಸೋಂಕಿತರ ಸಂಖ್ಯೆ 2521ಕ್ಕೇರಿದೆ. 

ತಗ್ಗಿದ ಸಾವಿನ ಸಂಖ್ಯೆ
ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಕೊರೋನಾ ಸೊಂಕಿತರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಆದ್ರೆ, ಸಾವಿನ ಸಂಖ್ಯೆ ಕೊಂಚ ಕಡಿಮೆಯಾಗಿರುವುದು ಖುಷಿಯ ಸಂಗತಿ. ಯಾಕಂದ್ರೆ ಪ್ರತಿದಿನ ರಾಜ್ಯದಲ್ಲಿ ಸಾವಿನ ಸಂಖ್ಯೆ ಕನಿಷ್ಠ ಏನಿಲ್ಲ ಅಂದ್ರೂ 100 ಮೇಲೆ ಇರುತ್ತಿತ್ತು. ಆದ್ರೆ, ಬುಧವಾರ ಸಾವಿನ ಸಂಖ್ಯೆ 70ಕ್ಕೆ ಇಳಿದಿದೆ.

click me!