ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಹಾಗಾದ್ರೆ, ಭಾನುವಾರ ಎಷ್ಟು ಕೇಸ್..? ಎಷ್ಟು ಸಾವು? ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಸೆ.27): ರಾಜ್ಯದಲ್ಲಿ ಇಂದು (ಭಾನುವಾರ೦ ಹೊಸದಾಗಿ 9,543 ಜನರಿಗೆ ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು. 79 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನು ಕಳೆದ 24 ಗಂಟೆಗಳಲ್ಲಿ 6522 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಲ್ಲಿ ಕೇವಲ 30 ದಿನದಲ್ಲಿ ಕೊರೋನಾ ದುಪ್ಪಟ್ಟು: 1000 ಕ್ಕೂ ಅಧಿಕ ಮಂದಿ ಸಾವು
ಈ ಮೂಲಕ ಸೋಂಕಿತರ ಸಂಖ್ಯೆ 5,75,566ಕ್ಕೆ ಏರಿಕೆಯಾಗಿದ್ರೆ, ಸಾವನ್ನಪ್ಪಿದವರ ಸಂಖ್ಯೆ 8582. ಈವರೆಗೆ ಒಟ್ಟು 4,62,241 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ 1,04,724 ಸಕ್ರೀಯ ಸೋಂಕಿತರಿರುವುದಾಗಿ ತಿಳಿಸಿದೆ.
ಜಿಲ್ಲಾವಾರು ಅಂಕಿ-ಸಂಖ್ಯೆ
ಬಾಗಲಕೋಟೆ 46, ಬಳ್ಳಾರಿ 310, ಬೆಳಗಾವಿ - 184, ಬೆಂಗಳೂರು ಗ್ರಾಮಾಂತರ - 213, ಬೆಂಗಳೂರು ನಗರ - 4,217, ಬೀದರ್ - 50, ಚಾಮರಾಜನಗರ - 38, ಚಿಕ್ಕಬಳ್ಳಾಪುರ - 195, ಚಿಕ್ಕಮಗಳೂರು - 206, ಚಿತ್ರದುರ್ಗ - 198, ದಕ್ಷಿಣ ಕನ್ನಡ - 460, ದಾವಣಗೆರೆ - 74, ಧಾರವಾಡ - 139, ಗದಗ - 61, ಹಾಸನ - 408, ಹಾವೇರಿ - 115, ಕಲಬುರ್ಗಿ - 10, ಕೊಡಗು - 53, ಕೋಲಾರ - 125, ಕೊಪ್ಪಳ - 87, ಮಂಡ್ಯ - 276, ಮೈಸೂರು - 952, ರಾಯಚೂರು - 102, ರಾಮನಗರ - 79, ಶಿವಮೊಗ್ಗ - 164, ತುಮಕೂರು - 282, ಉಡುಪಿ - 320, ಉತ್ತರ ಕನ್ನಡ - 100, ವಿಜಯಪುರ - 35 ಮತ್ತು ಯಾದಗಿರಿ 44 ಪಾಸಿಟಿವ್ ಕೇಸ್ ಪತ್ತೆಯಾಗಿವೆ.