ಕೊರೋನಾ ಮುಗಿವವರೆಗೆ ಶಾಲೆ ಆರಂಭ ಬೇಡ, ಪೋಷಕರ ವಿರೋಧ!

By Kannadaprabha News  |  First Published Jun 23, 2020, 7:41 AM IST

ಕೊರೋನಾ ಮುಗಿವವರೆಗೆ ಶಾಲೆ ಆರಂಭ ಬೇಡ| ಶೇ.95 ಪೋಷಕರಿಂದ ಶಾಲೆ ಆರಂಭಕ್ಕೆ ವಿರೋಧ|  35 ಸಾವಿರ ಶಾಲೆಗಳ ಪೋಷಕರ ಸಭೆ ವರದಿ ಲಭ್ಯ| ಕಲಿಕೆಗಿಂತ ಮಕ್ಕಳ ಜೀವ ಮುಖ್ಯ| ಸರ್ಕಾರ ಸಂಗ್ರಹಿಸಿದ ಅಭಿಪ್ರಾಯದಲ್ಲಿ ಈ ಅನಿಸಿಕೆ ವ್ಯಕ್ತ


ಬೆಂಗಳೂರು(ಜೂ.23): ಕೊರೋನಾ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುವವರೆಗೂ ರಾಜ್ಯದಲ್ಲಿ ಶಾಲೆಗಳು ಆರಂಭ ಮಾಡುವುದು ಬೇಡ.

- ಇದು ನಾಡಿನ ಬಹುತೇಕ ಪೋಷಕರ ಒಕ್ಕೊರಲಿನ ಅಭಿಪ್ರಾಯ.

Latest Videos

undefined

ಶಾಲೆ ಆರಂಭ ಮಾಡುವ ಕುರಿತು ಶಿಕ್ಷಣ ಇಲಾಖೆಯು ರಾಜ್ಯದ ಶಾಲೆಗಳ ಮೂಲಕ ಪೋಷಕರ ಅಭಿಪ್ರಾಯ ಸಂಗ್ರಹ ಆರಂಭಿಸಿತ್ತು. ಇದುವರೆಗೂ ಸುಮಾರು 35 ಸಾವಿರ ಶಾಲೆಗಳ ಪೋಷಕರ ಅಭಿಪ್ರಾಯ ಸಂಗ್ರಹವಾಗಿದ್ದು, ಬಹುತೇಕ ಪೋಷಕರು ಶಾಲೆ ಆರಂಭ ಬೇಡ ಎಂಬ ಅಭಿಪ್ರಾಯವನ್ನೇ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

SSLC ಪರೀಕ್ಷೆ ಬೇಡ, ಅನ್ಯರಾಜ್ಯಗಳ ರೀತಿ ರದ್ದು ಮಾಡಿ: ಪೋಷಕರ ಆಗ್ರಹ

‘ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳು, ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಗಳು ಹಾಗೂ ಪೋಷಕರಿಂದ ಜೂ.10ರಿಂದ 20ರ ವರೆಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಿದೆ. ರಾಜ್ಯದ 75 ಸಾವಿರ ಶಾಲೆಗಳ ಪೈಕಿ ಸದ್ಯ ಅಂದಾಜು 35 ಸಾವಿರ ಶಾಲೆಗಳಿಂದ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಭಾಗಶಃ ಪೋಷಕರು ಶಾಲೆ ಆರಂಭ ಬೇಡ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಕೊರೋನಾ ಸಮಯದಲ್ಲಿ ಶಾಲೆಗಳಲ್ಲಿ ಕಳುಹಿಸುವುದಿಲ್ಲ ಎಂಬ ಕಟ್ಟುನಿಟ್ಟಾಗಿ ಹೇಳಿದ್ದಾರೆ’ ಎನ್ನುತ್ತವೆ ಇಲಾಖೆಯ ಮೂಲಗಳು.

ಈ ಮೂಲಗಳ ಪ್ರಕಾರ ಶೇ.95ರಷ್ಟುಪೋಷಕರು ಕೊರೋನಾ ಸಮಯದಲ್ಲಿ ಶಾಲೆ ಆರಂಭ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ತಮಗೆ ಕಲಿಕೆಗಿಂತ ತಮ್ಮ ಮಕ್ಕಳ ಜೀವ ಮುಖ್ಯ ಎಂದು ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ.

ಲಾಕ್‌ಡೌನ್, ಶಾಲೆ ಆರಂಭ, SSLC ಪರೀಕ್ಷೆ: ಸರ್ಕಾರದ ನಿಲುವು ಬಗ್ಗೆ ತಿಳಿಸಿದ ಸಚಿವ ಹೆಬ್ಬಾರ್

ಪೋಷಕರು ನೀಡಿರುವ ಕಾರಣ:

- ಈಗಾಗಲೇ ವಿದೇಶಗಳಲ್ಲಿ ಶಾಲೆಗಳನ್ನು ಆರಂಭ ಮಾಡಿದ ನಂತರ ಶಾಲೆಗಳಲ್ಲೇ ಕೊರೋನಾ ವ್ಯಾಪಕವಾಗಿ ಹರಡಿದ ಬಗ್ಗೆ ಸುದ್ದಿಯನ್ನು ನೋಡಿದ್ದೇವೆ.

- ದೇಶದಲ್ಲೂ ಕೊರೋನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಶಾಲೆಗಳನ್ನು ಆರಂಭಿಸಿದರೆ ಮನೆ-ಮಂದಿಗೆಲ್ಲಾ ಕೊರೋನಾ ಹರಡಲು ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ.

- ಶಾಲೆಗಳಲ್ಲಿ ಮಕ್ಕಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಷ್ಟುಅರಿವು ಇರುವುದಿಲ್ಲ. ತಿಳಿದೋ/ತಿಳಿಯದೆಯೋ ಸಹಜವಾಗಿ ಮಕ್ಕಳು ಪರಸ್ಪರ ಮಾತನಾಡುತ್ತಾರೆ. ಇದನ್ನು ಶಿಕ್ಷಕರಿಂದ ನಿಯಂತ್ರಿಸಲು ಸಾಧ್ಯವಿಲ್ಲ.

- ಮಕ್ಕಳು ಕೂಡ ಶಾಲೆಗಳಲ್ಲಿ ಏಕಾಗ್ರತೆಯಿಂದ ಮತ್ತು ನೆಮ್ಮದಿಯಾಗಿ ಕಲಿಯಲು ಸಾಧ್ಯವಿಲ್ಲ.

- ಹೀಗಾಗಿ ಶಾಲೆ ಆರಂಭಿಸಲು ಆತುರ ತೋರುವುದು ಬೇಡ. ಮಕ್ಕಳು ಕಲಿಯಬೇಕು ಎಂಬ ಆಸೆ ನಮಗೂ ಇದೆ.

- ಈ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕವಿದೆ. ಹೀಗಾಗಿ ಶಾಲೆ ಆರಂಭ ಬೇಡ

click me!